ಹೈದರಾಬಾದ್: ಮಹಿಳಾ ಟಿ20 ವಿಶ್ವಕಪ್ನ ಮೊದಲ ಪಂದ್ಯದಲ್ಲೇ ಟೀಂ ಇಂಡಿಯಾ ಹೀನಾಯ ಸೋಲನುನ್ನು ಕಂಡಿದೆ. ಶುಕ್ರವಾರ ನಡೆದ ನ್ಯೂಜಿಲೆಂಡ್ ವಿರುದ್ಧ ಪಂದ್ಯದಲ್ಲಿ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ತಂಡ 58 ರನ್‌ಗಳಿಂದ ಸೋಲನ್ನು ಕಂಡಿದೆ. ಕಿವೀಸ್ ನೀಡಿದ್ದ 161 ರನ್ಗಳ ಗುರಿಯನ್ನು ಬೆನ್ನತ್ತಿದ್ದ ಭಾರತದ ವನಿತೇಯರು 102 ರನ್ಗಳಿಸಲಷ್ಟೇ ಶಕ್ತರಾದರು. ಇದರೊಂದಿಗೆ ಭಾರತ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ತಲುಪಿದೆ.
ಆದರೆ ಈ ಪಂದ್ಯದಲ್ಲಿ ನ್ಯೂಜಿಲೆಂಡ್ ಬ್ಯಾಟಿಂಗ್ ವೇಳೆ ಅಂಪೈರ್ ತೆಗೆದುಕೊಂಡ ನಿರ್ಧಾರವೊಂದು ಇದೀಗ ಭಾರಿ ವಿವಾದಕ್ಕೆ ಕಾರಣವಾಗಿದೆ. ಈ ವಿವಾದಾತ್ಮಕ ವಿಷಯದ ಬಗ್ಗೆ ಭಾರತೀಯ ಆಟಗಾರ್ತಿ ಜೆಮಿಮಾ ರಾಡ್ರಿಗಸ್ ಪಂದ್ಯದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲೂ ಮಾತನಾಡಿದ್ದಾರೆ. ಈ ರೀತಿ ಸಂಭವಿಸಿರುವುದು ಅತ್ಯಂತ ಖೇದಕರ ವಿಷಯವಾಗಿದೆ. ಆದರೂ ಅಂಪೈರ್ ನಿರ್ಧಾರಗಳನ್ನು ನಾವು ಗೌರವಿಸುತ್ತೇವೆ ಎಂದು ತಿಳಿಸಿದ್ದಾರೆ.
OUT or NOT OUT 🧐
— Sports In Veins (@sportsinveins) October 4, 2024
Animated Harmanpreet Kaur Spotted🔥🔥
🇮🇳#INDvsNZ #WomenInBlue #T20WorldCup pic.twitter.com/QJVYKG6ZIE
ಆಗಿದ್ದೇನು?: ವಾಸ್ತವಾಗಿ ಪಂದ್ಯದ ಮೊದಲ ಇನ್ನಿಂಗ್ಸ್ನ 14ನೇ ಓವರ್ನಲ್ಲಿ ದೀಪ್ತಿ ಶರ್ಮಾ ಬೌಲಿಂಗ್ ಮಾಡಿದ್ದರು. ಈ ಓವರ್ನ ಕೊನೆಯ ಎಸೆತದಲ್ಲಿ ಕಿವೀಸ್ ಬ್ಯಾಟರ್ ಅಮೆಲಿಯಾ ಕೆರ್ ಲಾಂಗ್-ಆಫ್ನಲ್ಲಿ ಚೆಂಡನ್ನು ಹೊಡೆದು ಒಂದು ರನ್ ತೆಗೆದಿದ್ದರು. ಇದಾದ ಬಳಿಕ ಓವರ್ ಮುಕ್ತಾಯಗೊಂಡಿತೆಂದು ಅಂಪೈರ್ ದೀಪ್ತಿ ಶರ್ಮಾಗೆ ಕ್ಯಾಪ್ ನೀಡಿದ್ದರು. ಇದೇ ಕಾರಣಕ್ಕಾಗಿ ನಾಯಕಿ ಹರ್ಮನ್‌ಪ್ರೀತ್ ಕೌರ್ ಚೆಂಡು ಎಸೆಯದೇ ಕೈಯಲ್ಲೆ ಹಿಡಿದಿದ್ದರು. ಇದನ್ನು ಗಮನಿಸಿದ ನ್ಯೂಜಿಲೆಂಡ್ ಆಟಗಾರ್ತಿಯರಾದ ಸೋಫಿ ಡಿವೈನ್ ಮತ್ತು ಅಮೆಲಿಯಾ ಕೆರ್ ಮತ್ತೊಂದು ರನ್ಗಳಿಸಲು ಓಡಿದ್ದಾರೆ.
ಆಗಾ ನ್ಯೂಜಿಲೆಂಡ್ ಆಟಗಾರ್ತಿಯರು ಓಡುತ್ತಿರುವುದನ್ನು ಕಂಡ ಹರ್ಮನ್‌ಪ್ರೀತ್ ಅವರು ಚೆಂಡನ್ನು ವಿಕೆಟ್‌ಕೀಪರ್ ರಿಚಾ ಘೋಷ್ ಕಡೆಗೆ ಎಸೆದಿದ್ದಾರೆ ಮತ್ತು ರಿಚಾ ಚೆಂಡನ್ನು ವಿಕೆಟ್ಗೆ ಹಚ್ಚಿ ರನೌಟ್ ಮಾಡಿದ್ದಾರೆ. ಅಲ್ಲದೇ ಅಮೆಲಿಯಾ ತಾನು ರನ್ ಔಟ್ ಎಂದು ಪರಿಗಣಿಸಿ ಪೆವಿಲಿಯನ್ ಕಡೆಗೆ ತೆರಳುತ್ತಿದ್ದರು. ಆದರೆ ಫೀಲ್ಡ್ ಅಂಪೈರ್ ಅವರನ್ನು ತಡೆದು ನಾಟೌಟ್ ನೀಡಿದರು. ಇದರಿಂದ ಕೆರಳಿದ ಭಾರತೀಯ ವನಿತೆಯರು ಅಂಪೈರ್ನೊಂದಿಗೆ ವಾಗ್ವಾದಕ್ಕಿಳಿದರು.
ಇದಾದ ನಂತರ ಅಂಪೈರ್ ಈಗಾಗಲೇ ಓವರ್ ಮುಕ್ತಾಯದ ಸೂಚನೆ ನೀಡಲಾಗಿದೆ. ಈ ಕಾರಣಕ್ಕಾಗಿ ಇದನ್ನು ಡೆಡ್ ಬಾಲ್ ಎಂದು ಪರಿಗಣಿಸಲಾಗುವುದು ಮತ್ತು ಯಾವುದೇ ರನ್ ಸಹ ನೀಡಲಾಗುವುದಿಲ್ಲ ಎಂದು ತಿಳಿಸಿದರು. ಇದರಿಂದ ಔಟ್ ಆಗಿದ್ದರು ಅಮೆಲಿಯಾ ಕೆರ್ ಅವರನ್ನು ನಾಟೌಟ್ ನೀಡಿ ಬ್ಯಾಟಿಂಗ್ಗೆ ಕರೆಸಲಾಗಿದೆ. ಅಂಪೈರ್ನ ಈ ನಿರ್ಧಾರ ಟೀಂ ಇಂಡಿಯಾದ ಆಟಗಾರರನ್ನು ಮಾನಸಿಕವಾಗಿಯೂ ಕುಗ್ಗಿಸಿತು. ಜತೆಗೆ ಅವರ ಆಟದ ಮೇಲೂ ಪ್ರಭಾವ ಬೀರಿತು. ಭಾರತ ಮೊದಲ ಪಂದ್ಯ ಕಳೆದುಕೊಳ್ಳಲು ಇದೂ ಕೂಡ ಪ್ರಮುಖ ಕಾರಣವಾಯಿತು.
ಇದನ್ನೂ ಓದಿ: ಮಹಿಳಾ ಟಿ20 ವಿಶ್ವಕಪ್: ಕಿವೀಸ್ ವಿರುದ್ಧ ಭಾರತಕ್ಕೆ ಭಾರಿ ಅಂತರದ ಸೋಲು - Zealand Beats India