ETV Bharat / state

ಒಂದೇ ಗರ್ಭಗುಡಿಯಲ್ಲಿ ನವದುರ್ಗೆಯರು: ಹಾವೇರಿಯಲ್ಲಿ ಶರನ್ನವರಾತ್ರಿ ಸಂಭ್ರಮ - NAVADURGA

ಹಾವೇರಿ ಜಿಲ್ಲೆಯ ನವದುರ್ಗೆಯರ ದೇವಸ್ಥಾನದಲ್ಲಿ ನವರಾತ್ರಿಗೆ ವಿಶೇಷವಾಗಿ ಪುಷ್ಪಾಲಂಕಾರ ಮಾಡಲಾಗಿದ್ದು, ಇಲ್ಲಿ ಒಂದೇ ಗರ್ಭ ಗುಡಿಯಲ್ಲಿ ಒಂಭತ್ತು ದುರ್ಗೆಯರಿಗೆ ಪೂಜೆ ಸಲ್ಲಿಸಲಾಗುತ್ತದೆ.

ಒಂದೇ ಗರ್ಭಗುಡಿಯಲ್ಲಿ ನವದುರ್ಗೆಯರಿಗೆ ನವರಾತ್ರಿಯ ಸಂಭ್ರಮ
ಒಂದೇ ಗರ್ಭಗುಡಿಯಲ್ಲಿ ನವದುರ್ಗೆಯರಿಗೆ ನವರಾತ್ರಿಯ ಸಂಭ್ರಮ (ETV Bharat)
author img

By ETV Bharat Karnataka Team

Published : Oct 5, 2024, 10:27 AM IST

ಹಾವೇರಿ: ಏಲಕ್ಕಿನಗರಿ ಶರನ್ನವರಾತ್ರಿಯ ಸಂಭ್ರಮ ಮನೆ ಮಾಡಿದೆ. ಜಿಲ್ಲೆಯ ನವದುರ್ಗೆಯರ ದೇವಸ್ಥಾನವು ಪುಷ್ಪಾಲಂಕಾರದಲ್ಲಿ ಕಂಗೊಳಿಸುತ್ತಿದೆ. ಈ ದೇವಸ್ಥಾನದಲ್ಲಿ ಒಂದೇ ಗರ್ಭ ಗುಡಿಯಲ್ಲಿ 9 ದುರ್ಗೆಯರು ಸ್ಥಾಪನೆಯಾಗಿರುವುದು ವಿಶೇಷ.

ನವರಾತ್ರಿಯ 9 ದಿನ ಪ್ರತಿನಿತ್ಯ ಒಂದೊಂದು ದುರ್ಗಾ ಮಾತೆಗೆ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಗುತ್ತದೆ. ಮೊದಲ ದಿನ ಶೈಲಪುತ್ರಿ, ಎರಡನೆಯ ದಿನ ಬ್ರಹ್ಮಚಾರಿಣಿ, ಮೂರನೆಯ ದಿನ ಚಂದ್ರಘಂಟಾ, ನಾಲ್ಕನೆಯ ದಿನ ಕೂಷ್ಮಾಂಡಾ, ಐದನೆಯ ದಿನ ಸ್ಕಂದಮಾತಾ, ಆರನೇಯ ದಿನ ಕಾತ್ಯಾಯಿನಿ, ಏಳನೇಯ ದಿನ ಕಾಲರಾತ್ರಿ ಹಾಗೂ ಎಂಟನೆಯ ದಿನ ಮಹಾಗೌರಿಗೆ ಪೂಜೆ ಸಲ್ಲಿಸಿದರೆ 9ನೆಯ ದಿನ ಸಿದ್ಧಿದಾತ್ರಿಯನ್ನು ಪೂಜಿಸಲಾಗುತ್ತದೆ.

ಹಾವೇರಿಯಲ್ಲಿ ಶರನ್ನವರಾತ್ರಿ ಸಂಭ್ರಮ (ETV Bharat)

ದೇವಸ್ಥಾನದಲ್ಲಿ ಪ್ರತಿದಿನ ಸಂಜೆ ಕುಂಕುಮಾಭಿಷೇಕ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳನ್ನು ಕೈಗೊಳ್ಳಲಾಗುತ್ತದೆ. ಮಹಿಳೆಯರು ಭಜನೆ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ನವದುರ್ಗೆಯರ ಕೃಪೆಗೆ ಪಾತ್ರರಾಗುತ್ತಾರೆ. ನವರಾತ್ರಿಯ 9 ದಿನಗಳ ಕಾಲ ಈ ದೇವಸ್ಥಾನಕ್ಕೆ ಮಹಿಳೆಯರ ದಂಡೇ ಹರಿದುಬರುತ್ತದೆ.

ಈ ದೇವಸ್ಥಾನಕ್ಕೆ ಮೂಲದಲ್ಲಿ ಹಕ್ಕಲಮರಿಯಮ್ಮ ದೇವಸ್ಥಾನ ಎಂದು ಕರೆಯಲಾಗುತ್ತಿತ್ತು. ಈಗ ದೇವಿ ಪಂಚಾಯತ್​​​​ ಎಂದು ಕರೆಯಲಾಗುತ್ತಿದೆ. ಸುಮಾರು 38 ದೇವರಮೂರ್ತಿಗಳನ್ನು ಇಲ್ಲಿ ಸ್ಥಾಪಿಸಲಾಗಿದೆ. ಪ್ರತಿನಿತ್ಯ ಎಲ್ಲ ಮೂರ್ತಿಗಳಿಗೂ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ನವಗ್ರಹಗಳ ಅನುಸಾರ ನವವೃಕ್ಷಗಳನ್ನು ನೆಡಲಾಗಿದೆ.

ಇತಿಹಾಸ: ಈ ದೇವಸ್ಥಾನ 1905ರಲ್ಲಿ ನಿರ್ಮಾಣವಾಗಿದೆ. ಆಗ ಕೇವಲ ಕಲ್ಲಿನ ಮೂರ್ತಿಗಳನ್ನಿಟ್ಟು ಪೂಜೆ ಸಲ್ಲಿಸಲಾಗುತ್ತಿತ್ತು. ಹಕ್ಕಲು ಮರಿಯಮ್ಮ ವಿಗ್ರಹಗಳನ್ನು ಜೈಪುರದಿಂದ ತಂದು ಸ್ಥಾಪಿಸಲಾಗಿದೆ. ಅಲ್ಲಿಂದ ಆರಂಭವಾದ ಈ ದೇವಸ್ಥಾನ 2006ರಲ್ಲಿ ಮರುನಿರ್ಮಾಣಗೊಂಡಿದೆ. 2009ರಿಂದ ನವದುರ್ಗೆಯರು ಸೇರಿದಂತೆ ಸುಮಾರು 38 ದೇವರ ಮೂರ್ತಿಗಳನ್ನು ಸ್ಥಾಪಿಸಿ ಪೂಜಿಸಲಾಗುತ್ತಿದೆ.

ದೇವಸ್ಥಾನವನ್ನು ದಕ್ಷಿಣ ಕನ್ನಡ ಜಿಲ್ಲೆಯ ಭಾಗಗಳಲ್ಲಿ ನಿರ್ಮಿಸಿರುವಂತೆ ಕಟ್ಟಲಾಗಿದೆ. ಭಕ್ತರ ಇಷ್ಟಾರ್ಥಗಳನ್ನು ನವದುರ್ಗೆಯರು ಈಡೇರಿಸುತ್ತಾರೆ ಎಂಬ ನಂಬಿಕೆ ಇಲ್ಲಿ ಮನೆ ಮಾಡಿದೆ. ನವತರಹದ ದೀಪದಾರತಿಯಿಂದ ದೇವಿಗೆ ಆರತಿ ಸಲ್ಲಿಸುವುದು ಈ ದೇವಸ್ಥಾನದ ಮತ್ತೊಂದು ವಿಶೇಷತೆಯಾಗಿದೆ.

ಇದನ್ನೂ ಓದಿ: ಬೆಂಗಳೂರಲ್ಲಿ ಕಣ್ಮನ ಸೆಳೆಯುತ್ತಿದೆ ವಿಶೇಷ ದಸರಾ ಗೊಂಬೆಗಳ ಪ್ರದರ್ಶನ - Dasara Dolls

ETV Bharat Logo

Copyright © 2024 Ushodaya Enterprises Pvt. Ltd., All Rights Reserved.