ETV Bharat / technology

ಗೂಗಲ್​ ಪೇ ಮೂಲಕ ಚಿನ್ನದ ಸಾಲ ಇನ್ನಷ್ಟು ಸುಲಭ: ಮುತ್ತೂಟ್​ ಜೊತೆ ಕೈಜೋಡಿಸಿದ ಗೂಗಲ್​ - GPay Partnership with Muthoot - GPAY PARTNERSHIP WITH MUTHOOT

GPay Partnership with Muthoot: ಗೂಗಲ್​ ಪೇ ತನ್ನ ಬಳಕೆದಾರರಿಗೆ ಸುಲಭವಾಗಿ ಚಿನ್ನದ ಮೇಲೆ ಸಾಲಗಳನ್ನು ಒದಗಿಸಲು ಎನ್​ಬಿಎಫ್​ಸಿ ಮುತ್ತೂಟ್ ಫೈನಾನ್ಸ್‌ನೊಂದಿಗೆ ಪಾಲುದಾರಿಕೆ ಹೊಂದಿದೆ. ಕಂಪನಿಯು ಈ ಮಾಹಿತಿಯನ್ನು ನೀಡಿದೆ.

MUTHOOT FINANCE GOLD LOAN  GPAY PARTNERSHIP  GOOGLE NEWS  GOOGLE PAY
ಗೂಗಲ್ ​ಪೇ (Getty Images)
author img

By ETV Bharat Tech Team

Published : Oct 5, 2024, 9:54 AM IST

Updated : Oct 5, 2024, 10:43 AM IST

GPay Partnership with Muthoot: ಚಿನ್ನದ ಸಾಲಗಳಲ್ಲಿ ಪರಿಣತಿ ಹೊಂದಿರುವ ಹಣಕಾಸು ಸಂಸ್ಥೆ (NBFC) ಮುತ್ತೂಟ್ ಫೈನಾನ್ಸ್ ಜೊತೆ ಪೇ ಪಾಲುದಾರಿಕೆಯನ್ನು ಪ್ರಕಟಿಸಿದೆ. ಈ ಪಾಲುದಾರಿಕೆಯು ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಸಣ್ಣ ವ್ಯಾಪಾರಗಳು ಮತ್ತು ಗ್ರಾಹಕರಿಗೆ Google Pay ಮೂಲಕ ಚಿನ್ನದ ಬೆಂಬಲಿತ ಸಾಲಗಳನ್ನು ನೀಡಲಿದೆ.

ಈ ವರ್ಷದ ಗೂಗಲ್ ಫಾರ್ ಇಂಡಿಯಾ ಈವೆಂಟ್‌ನಲ್ಲಿ ಗೂಗಲ್ ಪ್ರತಿಕ್ರಿಯಿಸಿ, ಭಾರತದಾದ್ಯಂತ ಜನರು ಈಗ ಈ ಕ್ರೆಡಿಟ್ ಉತ್ಪನ್ನವನ್ನು ಕೈಗೆಟುಕುವ ಬಡ್ಡಿ ದರಗಳು ಮತ್ತು ಹೊಂದಿಕೊಳ್ಳುವ ಬಳಕೆಯ ಆಯ್ಕೆಗಳೊಂದಿಗೆ ಬಳಸಬಹುದು. ಸಾಲಗಾರನಿಗೆ ನಮ್ಯತೆ ಮತ್ತು ಸಾಲದಾತರಿಗೆ ಭದ್ರತೆಯನ್ನು ಒದಗಿಸುವುದು ನಮ್ಮ ಗುರಿಯಾಗಿದೆ. Google Pay ಎಂಬುದು ಕಂಪನಿಯ ಡಿಜಿಟಲ್ ಪಾವತಿ ಸೇವೆಯಾಗಿದೆ ಎಂದು ಗೂಗಲ್​ ಹೇಳಿದೆ.

ಗೂಗಲ್‌ನ ಉತ್ಪನ್ನ ನಿರ್ವಹಣಾ ನಿರ್ದೇಶಕ ಶರತ್ ಬುಲುಸು ಮಾತನಾಡಿ, ''ಭಾರತೀಯರು ಚಿನ್ನದೊಂದಿಗೆ ಸುದೀರ್ಘ ಸಾಂಸ್ಕೃತಿಕ ಸಂಬಂಧವನ್ನು ಹೊಂದಿದ್ದಾರೆ. ಅದು ಹೂಡಿಕೆಯನ್ನು ಮೀರಿದೆ. ಅದಕ್ಕಾಗಿಯೇ ವಿಶ್ವದ 11 ಪ್ರತಿಶತಕ್ಕಿಂತ ಹೆಚ್ಚು ಚಿನ್ನವು ಭಾರತೀಯ ಕುಟುಂಬಗಳ ಒಡೆತನದಲ್ಲಿದೆ. ಈ ಆಸ್ತಿಯನ್ನು ಆರ್ಥಿಕ ಚಟುವಟಿಕೆಗಾಗಿ ಸಜ್ಜುಗೊಳಿಸಬಹುದು ಮತ್ತು ಇದು ಸಾಲದ ಕಲ್ಪನೆಯಾಗಿದೆ'' ಎಂದು ತಿಳಿಸಿದರು.

''ಮಾಹಿತಿಯ ಪ್ರಕಾರ, ಕಂಪನಿಯು ಚಿನ್ನದ ಸಾಲಕ್ಕಾಗಿ ಮತ್ತೊಂದು NBFC ಆದಿತ್ಯ ಬಿರ್ಲಾ ಫೈನಾನ್ಸ್ ಲಿಮಿಟೆಡ್‌ನೊಂದಿಗೆ ಸಹಭಾಗಿಯಾಗಲಿದೆ. ನಾವು ಇದನ್ನು ಜವಾಬ್ದಾರಿಯುತವಾಗಿ ಮಾಡುತ್ತಿದ್ದೇವೆ ಎಂದು ಖಚಿತಪಡಿಸಿಕೊಳ್ಳುತ್ತಿದ್ದೇವೆ. ಇದರಿಂದಾಗಿ ಬಳಕೆದಾರ ಮತ್ತು ಸಾಲದಾತ ಇಬ್ಬರಿಗೂ ಆಗುವ ಅಪಾಯಗಳನ್ನು ನಿಯಂತ್ರಿಸಲಾಗುತ್ತದೆ. ಆದ್ದರಿಂದ ನಾವು ಪ್ರತಿಷ್ಠಿತ ಪಾಲುದಾರರೊಂದಿಗೆ ಬುದ್ಧಿವಂತಿಕೆಯಿಂದ ಕೆಲಸ ಮಾಡುವ ಮೂಲಕ ಈ ಹೊಂದಾಣಿಕೆಯನ್ನು ಮಾಡುವುದು ಬಹಳ ಮುಖ್ಯ'' ಎಂದು ಬುಲುಸು ಹೇಳಿದರು.

80ರಷ್ಟು ಚಿನ್ನದ ಸಾಲಗಳು ಶ್ರೇಣಿ-2 ಮತ್ತು ಸಣ್ಣ ನಗರಗಳ ಬಳಕೆದಾರರಿಗೆ ಲಭ್ಯವಿದೆ. ICRA ಪ್ರಕಾರ, ಸಂಘಟಿತ ಚಿನ್ನದ ಸಾಲ ಮಾರುಕಟ್ಟೆಯು 2025ರಲ್ಲಿ ರೂ. 10 ಟ್ರಿಲಿಯನ್ ಮತ್ತು ಮಾರ್ಚ್ 2027ರ ವೇಳೆಗೆ ರೂ. 15 ಟ್ರಿಲಿಯನ್ ಮೀರುವ ನಿರೀಕ್ಷೆಯಿದೆ.

ಚಿನ್ನದ ಸಾಲವು ವೈಯಕ್ತಿಕ ಸಾಲಕ್ಕಿಂತ ಭಿನ್ನವಾಗಿದೆಯೇ?: ಚಿನ್ನದ ಸಾಲಗಳನ್ನು ಸಾಲಗಾರರು ತಮ್ಮ ಚಿನ್ನಾಭರಣ ಮೇಲಾಧಾರವಾಗಿ ಹಣಕಾಸು ಭದ್ರತೆಗಾಗಿ ಬಳಸಬಹುದಾಗಿದೆ. ಸಾಲದಾತನು ಸುದೀರ್ಘ ಚೆಕ್‌ಗಳ ಅಗತ್ಯವಿಲ್ಲದೆ, ಚಿನ್ನದ ಮೌಲ್ಯವನ್ನು ಸುಲಭವಾಗಿ ಪಡೆಯಬಹುದಾಗಿದೆ.

ವೈಯಕ್ತಿಕ ಸಾಲಗಳು ಅಸುರಕ್ಷಿತ ಹಣಕಾಸು ಆಯ್ಕೆಗಳಾಗಿವೆ. ಸಾಲಗಾರರು ದೊಡ್ಡ ಮೊತ್ತವನ್ನು ಪಡೆಯಬಹುದಾಗಿದೆ. ಇದನ್ನು ನಿಗದಿತ ಅವಧಿಯಲ್ಲಿ ಮರುಪಾವತಿ ಮಾಡಲಾಗುತ್ತದೆ. ಈ ಸಾಲಗಳನ್ನು ವೈದ್ಯಕೀಯ ತುರ್ತು ಪರಿಸ್ಥಿತಿಗಳನ್ನು ನಿಭಾಯಿಸುವುದು, ಪ್ರಯಾಣಕ್ಕೆ ಹಣಕಾಸು ಒದಗಿಸುವುದು, ಮನೆಯನ್ನು ನವೀಕರಿಸುವುದು ಅಥವಾ ಸಾಲವನ್ನು ಏಕೀಕರಿಸುವುದು ಮುಂತಾದ ವಿವಿಧ ಉದ್ದೇಶಗಳಿಗಾಗಿ ಬಳಸಬಹುದಾಗಿದೆ.

ಓದಿ: ಯೂಟ್ಯೂಬ್​​: ಬಳಕೆದಾರರ ಉತ್ಸಾಹ ಇಮ್ಮಡಿಗೊಳಿಸುತ್ತಿದೆ ಹೊಸ ಅಪ್ಡೇಟ್!​ - YouTube Big Update

Last Updated : Oct 5, 2024, 10:43 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.