ETV Bharat / sukhibhava

ಆಗಸ್ಟ್​ 20: ಇಂದು ವಿಶ್ವ ಸೊಳ್ಳೆ ದಿನ - ಏನಿದರ ಮಹತ್ವ ಹಾಗೂ ಇತಿಹಾಸ?

August 20 World Mosquito Day: ಇಂದು (ಆಗಸ್ಟ್ 20) ವಿಶ್ವ ಸೊಳ್ಳೆ ದಿನವಾಗಿ ಆಚರಿಸಲಾಗುತ್ತದೆ. ಸೊಳ್ಳೆಗಳಿಂದ ಹರಡುವ ರೋಗಗಳ ಬಗ್ಗೆ ಜಾಗೃತಿ ಮೂಡಿಸಲು ಈ ದಿನ ಆಚರಿಸಲಾಗುತ್ತದೆ.

author img

By

Published : Aug 20, 2023, 6:38 PM IST

World Mosquito Day 2023
World Mosquito Day 2023

ಬೆಂಗಳೂರು: ವಿಶ್ವಾದ್ಯಂತ ಪ್ರತಿ ವರ್ಷ ಆಗಸ್ಟ್ 20 ರಂದು ವಿಶ್ವ ಸೊಳ್ಳೆ ದಿನವಾಗಿ (World Mosquito Day) ಆಚರಿಸಲಾಗುತ್ತದೆ. ಮಲೇರಿಯಾಗೂ ಮತ್ತು ಹೆಣ್ಣು ಅನಾಫಿಲೀಸ್​ ಸೊಳ್ಳೆಗೂ ಇರುವ ಸಂಬಂಧವನ್ನು ಮೊಟ್ಟಮೊದಲ ಬಾರಿಗೆ ಕಂಡುಹಿಡಿದ ಬ್ರಿಟಿಷ್ ವೈದ್ಯ ಸರ್ ರೊನಾಲ್ಡ್ ರಾಸ್ ಅವರ ಕೊಡುಗೆಗಳನ್ನು ಸ್ಮರಿಸಲು ಈ ದಿನ ಆಚರಿಸಲಾಗುತ್ತದೆ.

ಸೊಳ್ಳೆಗಳಿಂದ ಉಂಟಾಗುವ ರೋಗಗಳು, ಈ ರೋಗಗಳಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳುವ ಮಾರ್ಗಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಈ ಕೀಟಗಳನ್ನು ಎದುರಿಸಲು ಒಟ್ಟಾಗಿ ನಿಲ್ಲಲು ಪ್ರತಿ ವರ್ಷ ವಿಶ್ವ ಸೊಳ್ಳೆ ದಿನವನ್ನು ಆಚರಿಸಲಾಗುತ್ತದೆ. ನಾವು ಈ ದಿನವನ್ನು ಆಚರಿಸುವ ಸಂದರ್ಭದಲ್ಲಿ ನೆನಪಿನಲ್ಲಿಡಬೇಕಾದ ಕೆಲ ಪ್ರಮುಖ ಸಂಗತಿಗಳು ಇಲ್ಲಿವೆ.

ಸೊಳ್ಳೆಜನ್ಯ ರೋಗಗಳ ಅಪಾಯಗಳ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಈ ದಿನವನ್ನು ಆಚರಿಸಲಾಗುತ್ತದೆ. ಮಲೇರಿಯಾಗೆ ಚಿಕಿತ್ಸೆಯನ್ನು ಕಂಡು ಹಿಡಿಯಲು ನಿಧಿಸಂಗ್ರಹ ಮಾಡಲಾಗುತ್ತದೆ. ರೊನಾಲ್ಡ್ ರಾಸ್ ಮತ್ತು ಇತರ ವಿಜ್ಞಾನಿಗಳ ಸಂಶೋಧನೆಗಳನ್ನು ಸಹ ಈ ದಿನದಂದು ಸ್ಮರಿಸಲಾಗುತ್ತದೆ.

ಆಗಸ್ಟ್ 20, 1897 ರಂದು ಬ್ರಿಟಿಷ್ ವೈದ್ಯ ಸರ್ ರೊನಾಲ್ಡ್ ರಾಸ್ ಅದ್ಭುತ ಆವಿಷ್ಕಾರವೊಂದನ್ನು ಮಾಡಿದ್ದರು. ಹೆಣ್ಣು ಅನಾಫಿಲಿಸ್ ಸೊಳ್ಳೆಗಳು ಮಾನವರಲ್ಲಿ ಮಲೇರಿಯಾ ಹರಡುತ್ತವೆ ಎಂಬುದನ್ನು ಅವರು ಕಂಡು ಹಿಡಿದಿದ್ದರು. ಮಲೇರಿಯಾಗೆ ಕಾರಣವಾಗುವ ಪರಾವಲಂಬಿ ವೈರಸ್​​ ಸೊಳ್ಳೆಯ ಹೊಟ್ಟೆಯಲ್ಲಿರುತ್ತದೆ ಎಂಬುದನ್ನು ಅವರು ಜಗತ್ತಿಗೆ ತೋರಿಸಿಕೊಟ್ಟಿದ್ದರು. ಇತಿಹಾಸದ ಈ ಕ್ಷಣದ ನೆನಪಿಗಾಗಿ ವಿಶ್ವ ಸೊಳ್ಳೆ ದಿನ ಆಚರಣೆ ಆರಂಭವಾಯಿತು. ಸೊಳ್ಳೆಯಿಂದ ಹರಡುವ ರೋಗಗಳಿಂದ ಉಂಟಾಗುವ ಅಪಾಯಗಳ ಬಗ್ಗೆ ಜಾಗೃತಿ ಮೂಡಿಸಲು ಈ ದಿನಾಚರಣೆ ನಮಗೆ ಅವಕಾಶ ಒದಗಿಸುತ್ತದೆ.

ಸೊಳ್ಳೆಗಳಿಂದ ಹರಡುವ ರೋಗಗಳು :

ಮಲೇರಿಯಾ: ಮಲೇರಿಯಾ ಸೊಳ್ಳೆಯಿಂದ ಹರಡುವ ಅತ್ಯಂತ ಸಾಮಾನ್ಯ ಮತ್ತು ಪ್ರಚಲಿತ ರೋಗಗಳಲ್ಲಿ ಒಂದಾಗಿದೆ. ಇದು ಪ್ರತಿವರ್ಷ ಲಕ್ಷಾಂತರ ಭಾರತೀಯರ ಮೇಲೆ ಪರಿಣಾಮ ಬೀರುತ್ತದೆ. ಹೆಚ್ಚಾಗಿ ಮಾನ್ಸೂನ್ ಆಗಮನದ ನಂತರ ಮಲೇರಿಯಾ ಉಲ್ಬಣಿಸುತ್ತದೆ. ಮಲೇರಿಯಾ ಇದು ಸೊಳ್ಳೆಗಳ ಮೂಲಕ ಹರಡುವ ಪ್ಲಾಸ್ಮೋಡಿಯಂ ಕುಲದ ಪರಾವಲಂಬಿಯಿಂದ ಉಂಟಾಗುತ್ತದೆ. ಇದು ಸಾಮಾನ್ಯವಾಗಿ ಸೊಳ್ಳೆ ಕಡಿತದ ಮೂಲಕ ಮನುಷ್ಯರಿಗೆ ಹರಡುತ್ತದೆ. ಇದರ ಸಾಮಾನ್ಯ ಲಕ್ಷಣಗಳೆಂದರೆ ಜ್ವರ, ಶೀತ, ತಲೆನೋವು, ಸ್ನಾಯು ನೋವು ಮತ್ತು ಫ್ಲೂ ತರಹದ ರೋಗಲಕ್ಷಣಗಳು.

ಡೆಂಗ್ಯೂ: ಡೆಂಗ್ಯೂ ಈಡಿಸ್ ಹೆಸರಿನ ಸೊಳ್ಳೆಯಿಂದ ಹರಡುತ್ತದೆ. ಇದು ನಿಂತ ಜಲಮೂಲಗಳಲ್ಲಿ ವಾಸಿಸುವ ಮೂಲಕ ರೋಗವನ್ನು ಹರಡುತ್ತದೆ. ಈ ಕೀಟಗಳು ನಿರ್ಮಾಣ ಸ್ಥಳಗಳಲ್ಲಿ, ನೀರಿನ ಟ್ಯಾಂಕ್​ಗಳಲ್ಲಿ, ಸಸ್ಯಗಳು, ಚರಂಡಿಗಳು ಇತ್ಯಾದಿಗಳಲ್ಲಿ ಕಂಡುಬರುವ ನಿಂತ ನೀರಿನಲ್ಲಿ ಮೊಟ್ಟೆಗಳನ್ನು ಇಡುತ್ತವೆ. ಕಣ್ಣುಗಳಲ್ಲಿ ಅಸ್ವಸ್ಥತೆ, ಸ್ನಾಯು ನೋವು, ಕೀಲು ನೋವು ಇತ್ಯಾದಿ ಈ ರೋಗದ ಪ್ರಮುಖ ಲಕ್ಷಣಗಳಾಗಿವೆ.

ಚಿಕುನ್ ಗುನ್ಯಾ : ಇದು ಈಡಿಸ್ ಈಜಿಪ್ಟಿ ಎಂಬ ಸೊಳ್ಳೆಗಳಿಂದ ಹರಡುತ್ತದೆ. ಜ್ವರ, ಕೀಲು ನೋವು, ಸ್ನಾಯು ನೋವು, ಕೀಲುಗಳ ಊತ, ದದ್ದುಗಳು, ತಲೆನೋವು ಇತ್ಯಾದಿಗಳು ಈ ರೋಗದ ಸಾಮಾನ್ಯ ಲಕ್ಷಣಗಳಾಗಿವೆ.

ಝಿಕಾ ವೈರಸ್: ಜಿಕಾ ವೈರಸ್ ಈಡಿಸ್ ಸೊಳ್ಳೆಗಳಿಂದಲೂ ಹರಡುತ್ತದೆ. ಇದು ಜನನ ದೋಷಗಳು ಮತ್ತು ನರವೈಜ್ಞಾನಿಕ ಅಸ್ವಸ್ಥತೆಗಳಂತಹ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಈ ರೋಗ ಡೆಂಗ್ಯೂವಿನ ಲಕ್ಷಣಗಳನ್ನೇ ಹೋಲುತ್ತದೆ. ಇದರ ರೋಗಲಕ್ಷಣಗಳಲ್ಲಿ ಜ್ವರ, ತಲೆನೋವು, ದದ್ದು, ಕೀಲು ನೋವು, ಕೆಂಪು ಕಣ್ಣುಗಳು ಇತ್ಯಾದಿ ಸೇರಿವೆ.

ಹಳದಿ ಜ್ವರ : ಇದು ಈಡಿಸ್ ಸೊಳ್ಳೆಯಿಂದ ಹರಡುವ ಮತ್ತೊಂದು ವೈರಲ್ ಸೋಂಕು ಆಗಿದೆ. ಈ ರೋಗದಿಂದ ಬಳಲುತ್ತಿರುವ ಜನರು ಸೌಮ್ಯ ಜ್ವರ, ಶೀತ, ಹಸಿವಾಗದಿರುವುದು, ವಾಕರಿಕೆ, ಬೆನ್ನು ಅಸ್ವಸ್ಥತೆ, ತಲೆನೋವು ಮತ್ತು ಆಯಾಸದಂತಹ ರೋಗಲಕ್ಷಣಗಳನ್ನು ಅನುಭವಿಸಬಹುದು.

ಇದನ್ನೂ ಓದಿ : ಕೇಂದ್ರ-ರಾಜ್ಯಗಳ ತೆರಿಗೆ ಹಂಚಿಕೆ ವಿಚಾರ; 16ನೇ ಹಣಕಾಸು ಆಯೋಗ ಸ್ಥಾಪನೆ ಶೀಘ್ರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.