ETV Bharat / state

ಶರಣಗೌಡ ಕಂದಕೂರ ಬಹುಮತದಿಂದ ಗೆಲ್ಲಿಸಿ: ನಿಖಿಲ್ ಕುಮಾರಸ್ವಾಮಿ ಮನವಿ

ಶರಣಗೌಡ ಕಂದಕೂರು ಅವರನ್ನು ಬಹುಮತದಿಂದ ಗೆಲ್ಲಿಸುವ ಜೊತೆಗೆ ಮುಂದಿನ ದಿನಗಳಲ್ಲಿ ಮಂತ್ರಿಯಾಗಿ ಕಾಣುವಂತೆ ಗುರುಮಠಕಲ್ ಕ್ಷೇತ್ರದ ಜನರು ಆಶೀರ್ವಾದಿಸಬೇಕು ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.

nikhil kumaraswamy
ನಿಖಿಲ್ ಕುಮಾರಸ್ವಾಮಿ
author img

By

Published : Dec 22, 2022, 8:57 AM IST

Updated : Dec 22, 2022, 1:59 PM IST

ನಾಗನಗೌಡ ಕಂದಕೂರ ಜನ ಸಂಪರ್ಕ ಕಚೇರಿ ಆವರಣದಲ್ಲಿ ನಡೆದ ಅಯ್ಯಪ್ಪ ಸ್ವಾಮಿಯ ಮಹಾ ಪಡಿ ಪೂಜೆ

ಗುರುಮಠಕಲ್ (ಯಾದಗಿರಿ): ಗುರುಮಠಕಲ್ ಪಟ್ಟಣದ ಜೆಡಿಎಸ್ ಶಾಸಕರಾದ ನಾಗನಗೌಡ ಕಂದಕೂರ ಅವರ ಜನ ಸಂಪರ್ಕ ಕಚೇರಿ ಆವರಣದಲ್ಲಿ ಅಯ್ಯಪ್ಪ ಸ್ವಾಮಿಯ ಮಹಾ ಪಡಿ ಪೂಜೆ ಶ್ರದ್ಧಾ, ಭಕ್ತಿಯೊಂದಿಗೆ ಅಪಾರ ಜನಸ್ತೋಮದ ಮಧ್ಯೆ ಅದ್ಧೂರಿಯಾಗಿ ಜರುಗಿತು.

ಕಾರ್ಯಕ್ರಮಕ್ಕೆ ಆಗಮಿಸಿ ಮಾತನಾಡಿದ ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಶರಣಗೌಡ ಕಂದಕೂರ ಅವರು ಅಯ್ಯಪ್ಪ ಮಾಲೆ ಧರಿಸುವ ಮೂಲಕ ಗುರುಮಠಕಲ್ ಗಡಿ ಭಾಗದಲ್ಲಿ ಬೃಹತ್ ಧಾರ್ಮಿಕ ಪೂಜಾ ಕಾರ್ಯಕ್ರಮ ಹಮ್ಮಿಕೊಂಡು ಎಲ್ಲ ವರ್ಗದ ಜನರಲ್ಲಿ ಶಾಂತಿ ಮತ್ತು ಸಾಮರಸ್ಯ ಮೂಡಿಸಲು ಯತ್ನಿಸಿದ್ದಾರೆ. ಅವರನ್ನು ದೊಡ್ಡ ಅಂತರದಲ್ಲಿ ಗೆಲ್ಲಿಸುವ ಮೂಲಕ ಮುಂದಿನ ದಿನಗಳಲ್ಲಿ ಮಂತ್ರಿಯಾಗಿ ಮಾಡಬೇಕು ಎಂದರು.

ಹಲವಾರು ದಶಕಗಳಿಂದ ಕಂದಕೂರ ಕುಟುಂಬ ದೇವೇಗೌಡರ ಜೊತೆ ಸೇರಿಕೊಂಡು ಈ ಭಾಗದ ಪ್ರಮುಖ ಸಮಸ್ಯೆಗಳ ಪರಿಹಾರಕ್ಕಾಗಿ ಹೋರಾಟ ಮಾಡಿಕೊಂಡು ಬಂದಿದೆ. ಪರಿಣಾಮ ಕಳೆದ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ನಾಗನಗೌಡ ಕಂದಕೂರ ಆಯ್ಕೆಯಾದರು. ಅದರ ಹಿಂದೆ ಅವರ ಪುತ್ರ ಹಾಗೂ ಜೆಡಿಎಸ್ ರಾಜ್ಯ ಯುವ ಮುಖಂಡ ಶರಣಗೌಡ ಕಂದಕೂರ ಹಾಗೂ ಕಾರ್ಯಕರ್ತರ ಶ್ರಮ ಅಡಗಿದೆ ಎಂದು ಹೇಳಿದರು.

ಇಂದಿನ ದಿನಗಳಲ್ಲಿ ದೇಶದ ಹಲವಾರು ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಬಲಿಷ್ಠವಾಗುವ ಮೂಲಕ ಆಯಾ ರಾಜ್ಯಗಳ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಿವೆ. ಕರ್ನಾಟಕಕ್ಕೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ನೀಡಿರುವ ಕೊಡಗೆ ಅಪಾರ. ಅವರ ಮಾರ್ಗದರ್ಶನದಲ್ಲಿ ನಮ್ಮ ತಂದೆಯವರು 2 ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ, ಗ್ರಾಮ ವಾಸ್ತವ್ಯ, ಜನತಾ ದರ್ಶನ, ರೈತರ ಸಾಲ ಮನ್ನಾ, ಸಾರಾಯಿ ನಿಷೇಧ ಮಾಡುವ ಮೂಲಕ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದರು.

ರಾಜ್ಯದಲ್ಲಿ ಕ್ರಾಂತಿಕಾರಕ ಬದಲಾವಣೆ ಆಗಬೇಕಾದರೆ ಕುಮಾರಸ್ವಾಮಿ ಸರ್ಕಾರ ರಚನೆಯಾಗಬೇಕು. ಶಿಕ್ಷಣ, ಆರೋಗ್ಯ, ಉದ್ಯೋಗ, ವಸತಿ ಹಾಗೂ ರೈತರ ಮತ್ತು ಮಹಿಳಾ ಸಂಘಗಳ ಸಾಲ ಮನ್ನಾ ಮುಂತಾದ ಪಂಚರಥ ಯೋಜನೆಗಳ ಮೂಲಕ ರಾಜ್ಯದಲ್ಲಿ ಜೆಡಿಎಸ್​ ಮುಂದೆ ಬರುತ್ತಿದೆ. ಉತ್ತಮ ಮತ್ತು ವ್ಯವಸ್ಥಿತ ಅಭಿವೃದ್ಧಿಯ ಕನಸನ್ನು ಕುಮಾರಣ್ಣ ಹೊಂದಿದ್ದಾರೆ. ಇದರಿಂದ ನಮ್ಮ ಜೆಡಿಎಸ್ ಪಕ್ಷವು ರಾಜ್ಯದಲ್ಲಿ 123 ಮಿಷನ್ ಗುರಿಯನ್ನು ಸಾಧಿಸಲು ರಾಜ್ಯದ ಜನರು ಬೆಂಬಲ ನೀಡಬೇಕು ಎಂದು ಹೇಳಿದರು.

ಜೆಡಿಎಸ್ ರಾಜ್ಯ ಯುವ ಮುಖಂಡ ಶರಣಗೌಡ ಕಂದಕೂರ ಅವರು ಕಳೆದ 5 ವರ್ಷಗಳಲ್ಲಿ ಮತ ಕ್ಷೇತ್ರದ ಕಾರ್ಯಕರ್ತರು ಹಾಗೂ ಜನರ ನಿರಂತರ ಸಂಪರ್ಕ ಇಟ್ಟುಕೊಂಡು ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ. ಅವರು ಕ್ರಿಯಾಶೀಲ ರಾಜಕಾರಣಿಯಾಗಿದ್ದಾರೆ. ಪಕ್ಷವು ಅವರಿಗೆ ಟಿಕೆಟ್ ಘೋಷಣೆ ಮಾಡಿದೆ, ಮತದಾರರು ಅವರನ್ನು ಬರುವ ವಿಧಾನಸಭಾ ಚುನಾವಣೆಯಲ್ಲಿ ಬೆಂಬಲಿಸುವ ಮೂಲಕ ಪಕ್ಷಕ್ಕೆ ಶಕ್ತಿ ತುಂಬುವ ಜೊತೆಗೆ ಮತಕ್ಷೇತ್ರದ ಅಭಿವೃದ್ಧಿಗೆ ಸಹಕರಿಸಿರಿ ಎಂದು ಮನವಿ ಮಾಡಿದರು.

ಇದನ್ನೂ ಓದಿ: ಪುತ್ರನಿಗೆ ಕ್ಷೇತ್ರ ಬಿಟ್ಟು ಕೊಟ್ಟ ತಾಯಿ: ರಾಮನಗರದಿಂದಲೇ ನಿಖಿಲ್ ಸ್ಪರ್ಧೆ.. ಅನಿತಾ ಕುಮಾರಸ್ವಾಮಿ ಘೋಷಣೆ

ಕಾರ್ಯಕ್ರಮಕ್ಕೆ ನೆರೆಯ ತೆಲಂಗಾಣ ರಾಜ್ಯದ ಕೊಡಂಗಲ್ ಮತಕ್ಷೇತ್ರದ ಶಾಸಕ ಪಟ್ನಂ ನರೇಂದ್ರರೆಡ್ಡಿ, ನಾರಾಯಣಪೇಟ ಕ್ಷೇತ್ರದ ಶಾಸಕ ರಾಜೇಂದ್ರ ರೆಡ್ಡಿ, ಮಕ್ತಲ್ ಶಾಸಕ ಚಿಟ್ಟಂ ರಾಮಮೋಹನ ರೆಡ್ಡಿ, ಸೇಡಂ ಕ್ಷೇತ್ರದ ಅಭ್ಯರ್ಥಿ ಬಾಲರಾಜ ಗುತ್ತೇದಾರ, ಮುದ್ದಪ್ಪ ದೇಶಮುಖ ಕೊಡಂಗಲ್, ಶ್ರೀನಿವಾಸರೆಡ್ಡಿ ಕಂದಕೂರ, ಮಲ್ಲಿಕಾರ್ಜುನ ರೆಡ್ಡಿ ಕಂದಕೂರ, ಹನಮೇಗೌಡ ಬೀರನಕಲ್, ಗುರುಮಠಕಲ್ ಬ್ಲಾಕ್ ಜೆಡಿಎಸ್ ಅಧ್ಯಕ್ಷ ಪ್ರಕಾಶ ನೀರಟ್ಟಿ, ಬಸಣ್ಣ ದೇವರಳ್ಳಿ, ಪುರಸಭೆ ಅಧ್ಯಕ್ಷ ಪಾಪಣ್ಣ ಮನ್ನೆ, ಮಲ್ಲಣಗೌಡ ಹಳಿಮನಿ ಕೌಳೂರ, ಸುಭಾಶ್ಚಂದ್ರ ಕಟಕಟಿ ಹೊನಗೇರಾ, ಮಲ್ಲಿಕಾರ್ಜುನ ಅರುಣ , ನರಸಪ್ಪ ಕಾವಡಿ, ಅನಂತಪ್ಪ ಯದ್ಲಾಪೂರ, ತಾಯಪ್ಪ ಬದ್ದೆಪಲ್ಲಿ , ರಾಮಣ್ಣ ಕೋಟಗೇರಾ, ಈಶ್ವರ ನಾಯಕ್ ಸೇರಿದಂತೆ 10 ಸಾವಿರಕ್ಕೂ ಹೆಚ್ಚು ಗುರುಮಿಠಕಲ್ ಮತಕ್ಷೇತ್ರದ ವಿವಿಧ ಗ್ರಾಮಗಳಿಂದ ಆಗಮಿಸಿದ ಜನರು ಉಪಸ್ಥಿತರಿದ್ದರು.

ಇದನ್ನೂ ಓದಿ: ಪಂಚರತ್ನ ಯಾತ್ರೆ ಹೋದಲೆಲ್ಲ ಯಶಸ್ಸು ಕಂಡಿದೆ: ನಿಖಿಲ್ ಕುಮಾರಸ್ವಾಮಿ

Last Updated : Dec 22, 2022, 1:59 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.