ETV Bharat / state

ಯಾದಗಿರಿಯಲ್ಲಿಂದು 69 ಮಂದಿಗೆ ಕೊರೊನಾ ಪಾಸಿಟಿವ್​

author img

By

Published : Jul 26, 2020, 10:22 PM IST

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಒಟ್ಟು 606 ರಾಪಿಡ್ ಆ್ಯಂಟಿಜೆನ್ ಮೂಲಕ ಕೋವಿಡ್​ ಟೆಸ್ಟ್​ ನಡೆಸಿದ್ದು, ಈ ವೇಳೆ 69 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದೆ.

Corona positive for 69  People in Yadgir
ಯಾದಗಿರಿಯಲ್ಲಿಂದು 69 ಮಂದಿಗೆ ಕೊರೊನಾ ಪಾಸಿಟಿವ್​

ಯಾದಗಿರಿ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಯಾದಗಿರಿ, ಗುರುಮಠಕಲ್, ಶಹಾಪೂರ, ಸುರಪುರ ಹಾಗೂ ಹುಣಸಗಿ ತಾಲೂಕುಗಳಲ್ಲಿ ಒಟ್ಟು 606 ರಾಪಿಡ್ ಆ್ಯಂಟಿಜೆನ್ ಮೂಲಕ ಕೋವಿಡ್​ ಟೆಸ್ಟ್​ ನಡೆಸಿದ್ದು, ಈ ವೇಳೆ 69 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಗರದ ಲಕ್ಷ್ಮೀನಗರದಲ್ಲಿ 6, ಅಜೀಜ್ ಕಾಲೋನಿಯಲ್ಲಿ 7, ಕೋಲಿವಾಡದಲ್ಲಿ 9, ವಿದ್ಯಾನಗರದಲ್ಲಿ 9, ಆಶ್ರಯ ಕಾಲೋನಿಯಲ್ಲಿ 2, ಸುರಪುರದ ರಂಗಂ ಪೇಟದಲ್ಲಿ 16, ದಿವಳಗುಡ್ಡದಲ್ಲಿ 1, ಗೋಗಿಕೇರಾದಲ್ಲಿ 12, ಹುಣಸಗಿ ತಾಲೂಕಿನ ಕೊಡೇಕಲ್‍ನಲ್ಲಿ 7 ಸೇರಿ ಒಟ್ಟು 69 ಮಂದಿಗೆ ಕೊರೊನಾ ಸೋಂಕು ತಗುಲಿದೆ ಎಂದು ತಿಳಿಸಿದ್ದಾರೆ.

ಗುರುಮಠಕಲ್‍ನ ಪಂಚಾಯತ್ ಮೊಹಲ್ಲಾ ಹಾಗೂ ಶಹಾಪುರದ ಆನೆಗುಂದಿ ಓಣಿಯಲ್ಲಿ ನಡೆಸಿದ ಎಲ್ಲಾ ಟೆಸ್ಟ್​ಗಳ ವರದಿ ನೆಗೆಟಿವ್​ ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.