ಸುರಪುರ : ಕೃಷಿ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕ ಅಶೋಕ್ ಕುಲಕರ್ಣಿ ತಮ್ಮ ತಿಂಗಳ ಪಿಂಚಣಿ ಹಣವನ್ನು ಕೊರೊನಾ ಪರಿಹಾರ ನಿಧಿಗೆ ನೀಡಿದ್ದಾರೆ.
ನಗರದ ನಿವಾಸಿ ಅಶೋಕ್ ಕುಲಕರ್ಣಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾಗಿ ಸೇವೆ ಸಲ್ಲಿಸಿ ಕಳೆದ 2015 ರಲ್ಲಿ ನಿವೃತ್ತಿ ಹೊಂದಿದ್ದರು. ತಮ್ಮ ತಿಂಗಳ ಪಿಂಚಣಿ ಹಣ 16,164 ರೂಪಾಯಿಯನ್ನು ಕೊರೊನಾ ಪರಿಹಾರ ನಿಧಿಗೆ ನೀಡಿದ್ದಾರೆ.
ಈ ಕುರಿತು ಮಾತನಾಡಿರುವ ಅಶೋಕ್ ಕುಲಕರ್ಣಿ, ಕೊರೊನಾ ದಿಂದ ರಾಜ್ಯದಲ್ಲಿ ದೊಡ್ಡ ನಷ್ಟವುಂಟಾಗಿದೆ. ನಮ್ಮ ಕುಟುಂಬಕ್ಕೆ ಒಂದು ತಿಂಗಳ ಬದುಕಿಗೆ ತೊಂದರೆಯಾದರೂ ಪರವಾಗಿಲ್ಲ. ಜನರಿಗೆ ನೆರವಾಗಲೆಂದು ನನ್ನ ಅಲ್ಪ ಸಹಾಯವನ್ನು ದೇಣಿಗೆಯಾಗಿ ಕೊಟ್ಟಿದ್ದೇನೆ. ಇದಕ್ಕೆ ಇಡೀ ನಮ್ಮ ಕುಟುಂಬದ ಸಹಕಾರವಿದೆ ಎಂದರು.