ವಿಜಯಪುರ : ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ಗುರುತಿಸಲಾಗಿರುವ ಖಾಸಗಿ ಆಸ್ಪತ್ರೆಯಲ್ಲಿ ಅವಶ್ಯಕ ಬೆಡ್ ನೀಡಲು ಅವರಿಂದ ಉತ್ತಮ ಸ್ಪಂದನೆ ದೊರೆತಿದೆ. ಒಟ್ಟು 14 ಖಾಸಗಿ ಆಸ್ಪತ್ರೆಗಳಿಂದ 1200 ಬೆಡ್‌ಗಳ ವ್ಯವಸ್ಥೆಯಾಗಿದೆ ಎಂದು ಜಿಲ್ಲಾಧಿಕಾರಿ ವೈ ಎಸ್ ಪಾಟೀಲ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕೆಲ ಖಾಸಗಿ ಆಸ್ಪತ್ರೆಗಳು ಸರ್ಕಾರದ ಬೇಡಿಕೆಯಂತೆ ಶೇ.50ರಷ್ಟು ಬೆಡ್ ನೀಡುತ್ತಿಲ್ಲ ಎನ್ನುವ ಆರೋಪ ಕೇಳಿ ಬರುತ್ತಿರುವ ಹಿನ್ನೆಲೆ ಜಿಲ್ಲೆಯಲ್ಲಿ ಖಾಸಗಿ ಆಸ್ಪತ್ರೆಯ ವೈದ್ಯರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ ಎಂದರು.
ಕೊರೊನಾ ಸೊಂಕಿತ ರೋಗಿಗಳಿಗೆ ಈಗಾಗಲೇ ಜಿಲ್ಲೆಯಲ್ಲಿ 10 ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ನೀಡುತ್ತಿವೆ. ಎರಡು ದಿನದಲ್ಲಿ ಮತ್ತೆ 4 ಆಸ್ಪತ್ರೆಗಳು ಸೇರ್ಪಡೆಯಾಗಲಿವೆ. ಇದರ ಜತೆ ಬಿಎಲ್ಡಿಇ ಹಾಗೂ ಅಲ್ ಅಮೀನ್ ವೈದ್ಯಕೀಯ ಆಸ್ಪತ್ರೆಯಲ್ಲಿಯೂ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.
ಆ್ಯಕ್ಸಿಜನ್ ಉಳ್ಳ ಬೆಡ್‌ಗಳ ಅವಶ್ಯಕತೆ ಹೆಚ್ಚಿದೆ. ಆ್ಯಕ್ಸಿಜನ್ ಇಲ್ಲದ ಬೆಡ್ ಸದ್ಯ ಅವಶ್ಯವಿದ್ದರೆ ಮಾತ್ರ ಬಳಸಿಕೊಳ್ಳುತ್ತೇನೆ. ಸರ್ಕಾರದ ಮಾರ್ಗ ಸೂಚಿಯಂತೆ ಜಿಲ್ಲೆಯ ಖಾಸಗಿ ಆಸ್ಪತ್ರೆಗಳ 2400 ಬೆಡ್ಗಳಲ್ಲಿ 1200 ಹಾಸಿಗೆ ಕಾಯ್ದಿರಿಸಿದ್ದಾರೆ.
ನಮಗೆ ವೆಂಟಿಲೇಟರ್ ಹಾಗೂ ಆ್ಯಕ್ಸಿಜನ್ ಉಳ್ಳ ಬೆಡ್ ಹೆಚ್ಚು ಬೇಕು ಎನ್ನುವ ಬೇಡಿಕೆಗೆ ಸ್ಪಂದಿಸಿದ್ದಾರೆ. ಕೆಲ ಖಾಸಗಿ ಆಸ್ಪತ್ರೆಗಳು ಕೋವಿಡ್ ಚಿಕಿತ್ಸೆಗೆ ಪ್ರತ್ಯೇಕ ವ್ಯವಸ್ಥೆ ಮಾಡಿ, ಅಲ್ಲಿ ಆ್ಯಕ್ಸಿಜನ್ ಹಾಗೂ ಕಾಮನ್ ಬೆಡ್‌ಗಳ ವ್ಯವಸ್ಥೆ ಮಾಡಿದ್ದಾರೆ. ಅವುಗಳನ್ನು ಬಳಸಿಕೊಳ್ಳಲಾಗುವುದು ಎಂದರು.
ಇದರ ಜತೆ ಬಿಎಲ್ಡಿಇ ವೈದ್ಯಕೀಯ ಕಾಲೇಜ್‌ನವರು ಆ್ಯಕ್ಸಿಜನ್ ಉಳ್ಳ ಹಾಗೂ 100 ಆ್ಯಕ್ಸಿಜನ್ ಇಲ್ಲದ ಬೆಡ್ ಹಾಗೂ ಅಲ್ ಅಮೀನ್ ಕಾಲೇಜ್‌ನವರು 50/50ರಂತೆ ಬೆಡ್‌ಗಳನ್ನು ಕಾಯ್ದಿರಿಸಿದ್ದಾರೆ ಎಂದರು. ಇದರ ಜತೆ ಸರ್ಕಾರಿ ಆಸ್ಪತ್ರೆಯ ಕೋವಿಡ್-19 ಸೆಂಟರ್ನಲ್ಲಿ ಅವಶ್ಯಕತೆ ತಕ್ಕಂತೆ ಬೆಡ್ಗಳು ಇವೆ ಎಂದರು.