ವಿಜಯಪುರ: ಕೋವಿಡ್ ವೈರಸ್‌ಗೆ ಮರಣ ಹೊಂದಿದ ಕೇಂದ್ರ ರಾಜ್ಯ ರೈಲ್ವೆ ಖಾತೆ ಸಚಿವ ಸುರೇಶ ಅಂಗಡಿ ನಿಧನಕ್ಕೆ ಜಿಲ್ಲಾ ಬಿಜೆಪಿ ಪಕ್ಷದ ಕಾರ್ಯಕರ್ತರು ಸಂತಾಪ ಸೂಚಿಸಿ ಶ್ರದ್ಧಾಂಜಲಿ ಅರ್ಪಿಸಿದರು.
ನಗರದ ಯಂತ್ರೋದ್ಧಾರ ಹನುಮಾನ ಸಮುದಾಯ ಭವನದಲ್ಲಿ ಬಿಜೆಪಿ ಜಿಲ್ಲಾ ಘಟಕದ ಕಾರ್ಯಕರ್ತರು ದಿ. ಸುರೇಶ ಅಂಗಡಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಅಂತಿಮ ನಮನ ಸಲ್ಲಿಸಿದರು.
ಇನ್ನು ಉತ್ತರ ಕರ್ನಾಟಕ ಪ್ರಭಾವಿ ಹಾಗೂ ಸರಳ ನಾಯಕನ ಕಳೆದುಕೊಂಡಿರುವುದು ಪಕ್ಷಕ್ಕೆ ತುಂಬಲಾದ ನಷ್ಟ ಉಂಟಾಗಿದೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಕೇಂದ್ರ ಸಚಿವರಾಗಿ ಅನೇಕ ಹೊಸ ರೈಲು ಯೋಜನೆ ಜಾರಿ ಮಾಡಿ ಜನ್ರ ಅನುಕೂಲಕ್ಕೆ ಸದಾ ಕಾಲ ಮಿಡಿಯುವ ಸಚಿವ ಅಂಗಡಿಯವರು ನಮ್ಮ ಜೊತೆಗೆ ಇಲ್ಲ ಎನ್ನುವ ನೋವು ಕಾಡುತ್ತಿದೆ. ಭಗವಂತ ಅವ್ರ ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಬಿಜೆಪಿ ಮುಖಂಡ ಚಂದ್ರಶೇಖರ ಕವಟಗಿ ಕಂಬನಿ ಮಿಡಿದರು.
ಇನ್ನು ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ಮುಖಂಡ ವಿಜುಗೌಡ ಪಾಟೀಲ , ಜಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್ ಪಾಟೀಲ( ಕೂಚಬಾಳ) ಸೇರಿದಂತೆ ಹಲವು ಪದಾಧಿಕಾರಿಗಳು ಸಚಿವ ಸುರೇಶ ಅಂಗಡಿ ಅಗಲಿಕೆ ಸಂತಾಪ ಸೂಚಿಸಿದ್ರು.