ETV Bharat / state

ವಿಜಯಪುರ: ಮಕ್ಕಳಲ್ಲಿ ಕಲಿಕಾ ಆಸಕ್ತಿ ಹೆಚ್ಚಿಸಲು 1 ಲಕ್ಷ ಸ್ವಂತ ಹಣ ಖರ್ಚು ಮಾಡಿ ಶಾಲೆ ಅಭಿವೃದ್ಧಿ ಪಡಿಸಿದ ಶಿಕ್ಷಕ

author img

By

Published : Dec 22, 2021, 7:38 PM IST

Updated : Dec 22, 2021, 10:36 PM IST

ಕೊರೊನಾ ಕಾರಣದಿಂದ ಶಾಲೆಗಳು ಬಂದ್ ಆಗಿದ್ದರಿಂದ ಮಕ್ಕಳ ಕಲಿಕೆ ಹಿಂದುಳಿದಿದೆ. ಗಡಿ ಭಾಗ, ಹಿಂದುಳಿದ ಪ್ರದೇಶ, ಬಡತನ ಕುಟುಂಬದಲ್ಲಿರುವ ಮಕ್ಕಳ ಕಲಿಕೆಗೆ ಅನೂಕೂಲವಾಗಲಿ ಅಂತಾ ಲಾಕ್​​ ಡೌನ್ ಸಮಯದಲ್ಲಿ ಈ ಕಾರ್ಯ ಆರಂಭಿಸಿ, ಈಗ ಶಾಲೆಯಲ್ಲಿ ಈ ರೀತಿಯಾದ ಕಲಿಕಾ ವಾತಾವರಣ ನಿರ್ಮಾಣ ಮಾಡಿದ್ದಾರೆ.

ಸ್ವಂತ ಹಣ ಖರ್ಚು ಮಾಡಿ ಶಾಲೆ ಅಭಿವೃದ್ಧಿ ಪಡಿಸಿದ ಶಿಕ್ಷಕ

ವಿಜಯಪುರ: ಸರ್ಕಾರಿ ಶಾಲೆಗಳು ಎಂದರೆ ಮೂಗು ಮುರಿಯುವರೇ ಹೆಚ್ಚು, ಇಂಥ ವಾತಾವರಣದಲ್ಲಿ ತಾನು ಕಲಿಸುತ್ತಿದ್ದ ಶಾಲೆಯ ಸರ್ವತೋಮುಖ ಬೆಳವಣಿಗೆಗಾಗಿ ತಾನು ದುಡಿದ 1ಲಕ್ಷ ರೂ.ಗಳನ್ನು ಶಾಲೆಗೆ ಖರ್ಚು ಮಾಡುವ ಮೂಲಕ ಶಿಕ್ಷಕರೊಬ್ಬರು ಆದರ್ಶ ಮೆರೆದಿದ್ದಾರೆ.

ಹೌದು ಮಹಾರಾಷ್ಟ್ರ ಗಡಿಭಾಗಕ್ಕೆ ಹೊಂದಿಕೊಂಡಿರುವ ಜಿಲ್ಲೆಯ ತಿಕೋಟಾ ತಾಲೂಕಿನ ಘೋಣಸಗಿ ಎಲ್.ಟಿ 10 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕ ಪರಮೇಶ್ವರ. ಎಸ್. ಗದ್ಯಾಳ ಈ ಮಹತ್ಕಾರ್ಯ ಮಾಡಿ ಸಾರ್ವಜನಿಕರ ಪ್ರೀತಿಗೆ ಪಾತ್ರರಾಗಿದ್ದಾರೆ.

ಭಾಷಾ ಸಮಸ್ಯೆಯಿಂದ ಕೂಡಿದ ಲಂಬಾಣಿ ತಾಂಡಾ ಜನವಸತಿ ಪ್ರದೇಶ ಇರುವುದರಿಂದ ಮಕ್ಕಳಿಗೆ ನೈಜ ಕಲಿಕೆಗೆ ಒತ್ತು ಕೊಡುವ ಉದ್ದೇಶ ದಿಂದ ಉತ್ತಮ ಗುಣ ಮಟ್ಟದ ಪೇಂಟ್ ಬಳಕೆ ಮಾಡಿ ತರಗತಿಗಳ ಆಯಾ ಕೋಣೆಗಳನ್ನು ಗೋಡೆ ಬರಹ ಮತ್ತು ಚಿತ್ತಾರಗಳಿಂದ ಆಕರ್ಷಣಿಯ ವಾಗಿಸಿದ್ದಾರೆ. ವರ್ಗ ಕೋಣೆಯಲ್ಲಿ ಪ್ರತಿಯೊಂದು ಗೋಡೆಯ ಮೇಲೆ ಒಂದೊಂದು ವಿಷಯದ ಕಲಿಕಾ ಬರವಣಿಗೆ ಮತ್ತು ಚಿತ್ರಗಳನ್ನು ಬರೆಯಿಸಿದ್ದಾರೆ.

ಮೂಲಾಕ್ಷರಗಳು, ಗುಣಿತಾಕ್ಷರಗಳು, ಪ್ರಾಣಿಗಳು, ಪಕ್ಷಿಗಳು, ಹೂವಿನ ವಿಧಗಳು, ಪರಿಸರ ಕಲ್ಪನೆ, ಹಬ್ಬಗಳು, ಇಂಗ್ಲೀಷ್​​ ಅಕ್ಷರಗಳ ಪರಿಚಯ, ಕುಟುಂಬ ಕಲ್ಪನೆ, ಅಂಕಿಗಳ, ಮೂಲ ಕ್ರಿಯೆಗಳ ಕಲ್ಪನೆ, ತೂಕ, ಹಣ, ನೋಟು, ನೀರಿನ ಮೂಲಗಳು, ಶರೀರದ ಭಾಗಗಳು, ಸಸ್ಯಗಳ ಮಾಹಿತಿ, ಪೋಷಕಾಂಶಗಳು, ವ್ಯಾಕರಣ, ಸೌರವ್ಯೂಹ, ಚಂದ್ರಗ್ರಹಣ, ಸೂರ್ಯಗ್ರಹಣ, ಧಾನ್ಯಗಳ, ಸಸ್ಯಗಳ ಮಾಹಿತಿ ಹಾಗೂ ಹೊರಗಡೆ ತಾಲೂಕು, ಜಿಲ್ಲೆ, ರಾಜ್ಯ, ರಾಷ್ಟ್ರ ನಕ್ಷೆ ಇತರ ಎಲ್ಲ ಮಾಹಿತಿ ಗಳನ್ನು ಮಗುವಿನ ಕಲಿಕೆಗೆ ನೈಜವಾಗಿ ಕಲ್ಪಿಸುವಂತೆ ಕಲಿಕಾ ವಾತಾವರಣ ನಿರ್ಮಾಣ ಮಾಡಿದ್ದಾರೆ.

ಕಂಪ್ಯೂಟರ್ ಕಲಿಕೆಗೆ ಒತ್ತು ನೀಡುವುದಕ್ಕಾಗಿ ವಿದ್ಯುತ್ ಫಿಟಿಂಗ್ ಅಳವಡಿಕೆ, ಶಾಲಾ ಛಾವಣಿಯ ರಿಪೇರಿ, ಶೌಚಾಲಯ, ಅಡುಗೆ ಕೋಣೆಯ ರಿಪೇರಿ ಶಾಲೆಯ ಭೌತಿಕ ಸೌಲಭ್ಯಗಳ ಎಲ್ಲ ಸಣ್ಣ ಪುಟ್ಟ ಕೆಲಸಗಳ ರಿಪೇರಿ ಮಾಡಿಸಿದ್ದಾರೆ.

ಕೊರೊನಾ ಕಾರಣದಿಂದ ಶಾಲೆಗಳು ಬಂದ್ ಆಗಿದ್ದರಿಂದ ಮಕ್ಕಳ ಕಲಿಕೆ ಹಿಂದುಳಿದಿದೆ. ಗಡಿ ಭಾಗ, ಹಿಂದುಳಿದ ಪ್ರದೇಶ, ಬಡತನ ಕುಟುಂಬದಲ್ಲಿರುವ ಮಕ್ಕಳ ಕಲಿಕೆಗೆ ಅನೂಕೂಲವಾಗಲಿ ಅಂತಾ ಲಾಕ್​​ ಡೌನ್ ಸಮಯದಲ್ಲಿ ಈ ಕಾರ್ಯವನ್ನು ಆರಂಭಿಸಿ, ಈಗ ಶಾಲೆಯಲ್ಲಿ ಈ ರೀತಿಯಾದ ಕಲಿಕಾ ವಾತಾವರಣ ನಿರ್ಮಾಣ ಮಾಡಿದ್ದಾರೆ.

2019 ರಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಧಾರವಾಡದ ಅಂದಿನ ಆಯುಕ್ತ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಈ ಶಾಲೆಗೆ ಭೇಟಿ ನೀಡಿ ಮಕ್ಕಳ ಶೈಕ್ಷಣಿಕ ಗುಣಮಟ್ಟ ಪರಿಶೀಲಿಸಿ ಪ್ರಶಂಸೆ ವ್ಯಕ್ತಪಡಿಸಿದ್ದರು. ಜಿಲ್ಲೆಯ ಶೈಕ್ಷಣಿಕ ಗುಣಮಟ್ಟ ಹೆಚ್ಚಳಕ್ಕೆ ಶಿಕ್ಷಕರು ಕಾಳಜಿ ತೋರಬೇಕು ಎಂದು ಸಲಹೆ ನೀಡಿದ್ದರು. ಅವರಿಂದ ಪ್ರಭಾವಿತರಾಗಿ ಶಾಲೆಗೆ ಏನಾದರೂ ಹೊಸ ದೊಂದು ಕಾರ್ಯ ಮಾಡಬೇಕು ಎಂಬ ಹಂಬಲದಿಂದ ಮಕ್ಕಳ ಕಲಿಕೆಗೆ ಅನೂಕೂಲ ವಾಗಿಸಲು ಈ ಕಾರ್ಯ ಮಾಡಿದ್ದೇನೆ ಎಂದು ಶಿಕ್ಷಕ ಪರಮೇಶ್ವರ ಗದ್ಯಾಳ ತಿಳಿಸಿದ್ದಾರೆ.

ಸ್ವಂತ ಹಣದಿಂದ ಶಾಲೆಗೆ ಖರ್ಚು ಮಾಡಿದ ಶಿಕ್ಷಕರ ಕಾರ್ಯ ಮೆಚ್ಚು ವಂತದ್ದಾಗಿದೆ. ಶಾಲೆಯ ಸರ್ವತೋಮುಖ ಅಭಿವೃದ್ಧಿ ಇದು ಪ್ರೇರಣೆ ನೀಡುತ್ತದೆ ಎನ್ನುತ್ತಾರೆ ಸಹ ಶಿಕ್ಷಕ ರಾಜು ಹಟ್ಟೆನವರ. ಇದರ ಜತೆ ವಿದ್ಯಾರ್ಥಿಗಳಲ್ಲಿಯೂ ಹೊಸ ಹುಮ್ಮಸ ಮೂಡಿದೆ. ಶಿಕ್ಷಕ ಕಾರ್ಯವನ್ನು ವಿದ್ಯಾರ್ಥಿಗಳು ಸಹ ಮುಕ್ತಕಂಠದಿಂದ ಹೊಗಳಿದ್ದಾರೆ.

ಲಾಕ್ ಡೌನ್ ವೇಳೆ ಶಾಲೆಗೆ ರಜೆ ಸಿಕ್ಕಿದೆ ಎಂದು ನೆಮ್ಮದಿಯಾಗಿ ಮನೆಯಲ್ಲಿಯೇ ಕುಳಿತಿದ್ದ ಶಿಕ್ಷಕರ ಮಧ್ಯೆ ಕೆಲ ಶಿಕ್ಷಕರು ವಿದ್ಯಾರ್ಥಿಗಳ ಭವಿಷ್ಯದ ಚಿಂತೆ ಮಾಡಿ, ತಮ್ಮ ಸ್ವಂತ ಹಣದಲ್ಲಿ ಈ ರೀತಿ ಕಾರ್ಯ ಮಾಡಿರುವದು ನಿಜವಾಗಿಯೂ ಶ್ಲಾಘನೀಯ ಕೆಲಸವೇ ಸರಿ.

Last Updated : Dec 22, 2021, 10:36 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.