ವಿಜಯಪುರ: ಕೋವಿಡ್ 19 ವೈರಸ್ಗೆ ಕೊರೊನಾ ವಾರಿಯರ್ ಬಲಿಯಾಗಿದ್ದಾರೆ. ಹೋಂ ಐಸೋಲೇಶನ್ ನಲ್ಲಿದ್ದ ಸರಕಾರಿ ಲ್ಯಾಬ್ ಟೆಕ್ನಿಶಿಯನ್ ನಿನ್ನೆ ರಾತ್ರಿ ತೀವ್ರ ಉಸಿರಾಟದ ತೊಂದರೆಗೆ ಒಳಗಾಗಿದ್ದು, ಇಂದು ಸಾವನ್ನಪ್ಪಿದ್ದಾರೆ.
ಜನರನ್ನು ಪರೀಕ್ಷೆಗೆ ಒಪ್ಪಿಸುವುದು ಕಷ್ಟದ ಕೆಲಸವಾಗಿದೆ. ಮನವಿ ಮಾಡಿದರೂ ಜನ ಗಂಟಲು ದ್ರವದ ಮಾದರಿ ನೀಡಲು ಹಿಂಜರಿಯುತ್ತಾರೆ.
ಈ ಹಿನ್ನೆಲೆ ಟಾರ್ಗೆಟ್ ಹೆಚ್ಚಿಸದಂತೆ ಮನವಿ ಮಾಡಿದರು. ಸಮರ್ಪಕವಾಗಿ ಮಾಸ್ಕ್ ಪೂರೈಸುವಂತೆ ಲ್ಯಾಬ್ ಟೆಕ್ನಿಶಿಯನ್ಗಳು ಮನವಿ ಮಾಡಿದರು.
ಲ್ಯಾಬ್ ಟೆಕ್ನಿಶಿಯನ್ ಬೇಡಿಕೆಗಳಿಗೆ ಸ್ಪಂದಿಸುವುದಾಗಿ ವಿಜಯಪುರ ಜಿಲ್ಲಾಧಿಕಾರಿ ಪಿ. ಸುನಿಲ ಕುಮಾರ ಭರವಸೆ ನೀಡಿದರು.