ವಿಜಯಪುರ: ಕೊರೊನಾ ವರದಿ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಬಸವನಬಾಗೇವಾಡಿ ತಾಲೂಕಿನ ಇಂಗಳೇಶ್ವರ ಗ್ರಾಮದಲ್ಲಿ ಗ್ರಾಮಸ್ಥರು ಪಟಾಕಿ ಸಿಡಿಸಿ, ಸಿಹಿ ಹಂಚಿ ಬರಮಾಡಿಕೊಂಡರು.
ನಿನ್ನೆ ಗ್ರಾಮದ ಆರು ಜನರಲ್ಲಿ ಕೊರೊನಾ ಪರೀಕ್ಷಾ ವರದಿ ನೆಗೆಟಿವ್ ಬಂದಿತ್ತು. ಮಾರಕ ಖಾಯಿಲೆಯಿಂದ ಗುಣಮುಖರಾಗಿ ಊರಿಗೆ ಕಾಲಿಟ್ಟ 6 ಜನರಿಗೆ ಭರ್ಜರಿಯಾಗಿ ಸ್ವಾಗತ ದೊರೆಯಿತು.
ಮಹಾರಾಷ್ಟ್ರದಿಂದ ಜಿಲ್ಲೆಗೆ ಬಂದವರಲ್ಲಿ ಕೊರೊನಾ ರೋಗದ ಲಕ್ಷಣಗಳು ಕಾಣಿಸಿಕೊಂಡಿತ್ತು. ಹೀಗಾಗಿ 6 ಜನರನ್ನು ಐಸೊಲೇಶನ್ನಲ್ಲಿಟ್ಟು ಚಿಕಿತ್ಸೆ ನೀಡಲಾಗಿತ್ತು.