ETV Bharat / state

ಯಡಿಯೂರಪ್ಪನವರೇ ಪೂರ್ಣಾವಧಿ ಸಿಎಂ ಆಗಿ ಮುಂದುವರೆಯುತ್ತಾರೆ: ಡಿಸಿಎಂ ಕಾರಜೋಳ - ಡಿಸಿಎಂ ಕಾರಜೋಳ

ಬಿಎಸ್​ವೈ ಅವರ ನಾಯಕತ್ವದಲ್ಲಿಯೇ ಸರ್ಕಾರ ನಡೆಯುತ್ತದೆ. ಸಿಎಂ ಬದಲಾವಣೆ ಇಲ್ಲ, ಅವರೇ ಪೂರ್ಣಾವಧಿ ಸಿಎಂ ಆಗಿ ಮುಂದುವರೆಯಲಿದ್ದಾರೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದ್ದಾರೆ.

DCM Govind Karjol issued a statement on CM Change
ಡಿಸಿಎಂ ಗೋವಿಂದ ಕಾರಜೋಳ ಸಿಎಂ ಪರ ಬ್ಯಾಟ್
author img

By

Published : Feb 14, 2021, 12:36 PM IST

ವಿಜಯಪುರ: ಬಿ ಎಸ್ ಯಡಿಯೂರಪ್ಪ ಪೂರ್ಣಾವಧಿ ಮುಖ್ಯಮಂತ್ರಿ ಆಗಿ ಮುಂದುವರೆಯಲಿದ್ದಾರೆ ಎಂದು ಡಿಸಿಎಂ ಗೋವಿಂದ ಕಾರಜೋಳ ಸಿಎಂ ಪರ ಬ್ಯಾಟ್ ಬೀಸಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಎಸ್​ವೈ ಅವರ ನಾಯಕತ್ವದಲ್ಲಿಯೇ ಸರ್ಕಾರ ನಡೆಯುತ್ತದೆ, ಸಿಎಂ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಸಿಎಂ ಪರ ಬ್ಯಾಟ್​ ಬೀಸಿದ ಡಿಸಿಎಂ ಗೋವಿಂದ ಕಾರಜೋಳ

ಮೀಸಲಾತಿ ದೊರೆಯಲಿ: ಕುರುಬ ಸಮಾಜಕ್ಕೆ ಎಸ್ಟಿ ಮೀಸಲಾತಿ, ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ಬೇಡಿಕೆ ವಿಚಾರ ಕುರಿತು ಮಾತನಾಡಿದ ಕಾರಜೋಳ, ದೇಶಕ್ಕೆ ಒಂದು ಸಂವಿಧಾನವಿದೆ, ಸಂವಿಧಾನದ ಆಶಯದಂತೆ ಸಮಾಜದಲ್ಲಿ ಯಾರು ತುಳಿತಕ್ಕೊಳಗಾಗಿದ್ದಾರೆ, ಶೋಷಣೆಗೆ ಒಳಗಾಗಿದ್ದಾರೆ, ಯಾರು ಶೈಕ್ಷಣಿಕ, ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದಿದ್ದಾರೆಯೋ ಅವರನ್ನು ‌ಮೇಲೆತ್ತಲು, ಮುಖ್ಯವಾಹಿನಿಗೆ ತರಲು ಮೀಸಲಾತಿ ಇದೆ. ಅದರ ವ್ಯಾಪ್ತಿಗೆ ಬರುವವರಿಗೆ ಮೀಸಲಾತಿ ಸಿಗಲಿ ಎಂದರು.

ಓದಿ : ಮಂಡ್ಯ ಜೆಡಿಎಸ್ ಭದ್ರಕೋಟೆಯಾಗಿ ಉಳಿದಿಲ್ಲ: ಸಚಿವ ನಾರಾಯಣ ಗೌಡ

ಇದೇ ವೇಳೆ ವಿಜಯಪುರ ಜಿಲ್ಲಾ ಉಸ್ತುವಾರಿ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ, ನಾನು ಬಾಗಲಕೋಟೆಯನ್ನು ಮಾತ್ರ ಉಸ್ತುವಾರಿ ಉಳಿಸಿಕೊಳ್ಳುತ್ತೇನೆ ಎನ್ನುವ ಮೂಲಕ ನೂತನ ಸಚಿವ ಮುರುಗೇಶ ನಿರಾಣಿ ಕಣ್ಣಿಟ್ಟಿದ್ದ ಬಾಗಲಕೋಟೆ ಉಸ್ತುವಾರಿ ಆಸೆಗೆ ತಣ್ಣೀರೆರಚಿದರು. ಬೇರೆ ಜಿಲ್ಲೆ ನನಗೆ ಬೇಡ, ಬಾಗಲಕೋಟೆ ಒಂದೇ ಸಾಕು ಎಂದು ಕಾರಜೋಳ ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.