ವಿಜಯಪುರ: ಗ್ರಾಹಕರೊಂದಿಗೆ ಸಾಮಾಜಿಕ ಅಂತರ ಹಾಗೂ ಹಣಕ್ಕೆ (ನೋಟುಗಳಿಗೆ) ಸ್ಯಾನಿಟೈಸರ್ ಮಾಡುವ ಮೂಲಕ ನಗರದ ಸಿದ್ದೇಶ್ವರ ಮಂದಿರ ರಸ್ತೆಯಲ್ಲಿರುವ ಸಿಂಡಿಕೇಟ್ ಬ್ಯಾಂಕ್ ಕೊರೊನಾ ವೈರಸ್ನಿಂದ ಮುನ್ನೆಚ್ಚರಿಕೆ ವಹಿಸಿದೆ.
ಬ್ಯಾಂಕ್ಗೆ ಬರುವ ಗ್ರಾಹಕರನ್ನ ಬಾಗಿಲಿನಲ್ಲಿ ನಿಲ್ಲಿಸಿ ನಗದು ವಹಿವಾಟಿಗೆ ಸಿಂಡಿಕೇಟ್ ಬ್ಯಾಂಕ್ ಸಿಬ್ಬಂದಿ ಮುಂದಾಗಿದ್ದು, ಗ್ರಾಹಕರು ಬ್ಯಾಂಕ್ ಪ್ರವೇಶ ಮಾಡದೆ ಬಾಗಿಲಿನಲ್ಲಿ ನಿಂತು ಸಿಬ್ಬಂದಿಯೊಂದಿಗೆ ವ್ಯವಹಾರದಲ್ಲಿ ಭಾಗಿಯಾಗುತ್ತಿದ್ದಾರೆ. ಗುಮ್ಮಟ ನಗರಿಯಲ್ಲಿ 50 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾದ ಬೆನ್ನಲ್ಲೇ ಸಿಂಡಿಕೇಟ್ ಬ್ಯಾಂಕ್ ಸಿಬ್ಬಂದಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಹಾಗೂ ಗ್ರಾಹಕ ಸುರಕ್ಷತೆಗೆ ಗಮನ ಹರಿಸುತ್ತಿದ್ದಾರೆ.
ಇನ್ನು ಗ್ರಾಹಕರು ಸುಡುವ ಬಿಸಿಲಿನಲ್ಲಿ ನಿಲ್ಲಬಾರದು ಎಂದು ಬ್ಯಾಂಕ್ ಮುಂದೆ ನೆರಳಿನ ವ್ಯವಸ್ಥೆ ಮಾಡಲಾಗಿದ್ದು, ಗ್ರಾಹಕರು ಬಾಗಿಲಿನಿಂದ ಸೆಕ್ಯುರಿಟಿ ಮೂಲಕ ವಹಿವಾಟು ನಡೆಸುತ್ತಿದ್ದಾರೆ.