ಮುದ್ದೇಬಿಹಾಳ: ಚಾಲಕನ ನಿಯಂತ್ರಣ ತಪ್ಪಿ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು, ಪಲ್ಟಿಯಾಗಿರುವ ಘಟನೆ ಪಟ್ಟಣದ ತಾಳಿಕೋಟಿ ಬೈಪಾಸ್ ರಸ್ತೆಯಲ್ಲಿ ನಡೆದಿದೆ.
ಪಟ್ಟಣದ ನಾಲತವಾಡ ರಸ್ತೆಯ ಕಡೆಗೆ ತೆರಳುತ್ತಿದ್ದ ಕಾರು ಏಕಾಏಕಿ ಬೈಪಾಸ್ ರಸ್ತೆಯಲ್ಲಿರುವ ತಿರುವಿನಲ್ಲಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಪಲ್ಟಿಯಾಗಿದೆ. ಅಲ್ಪದರಲ್ಲಿಯೇ ಕಂಬದ ಮುಂದಿದ್ದ ವಿದ್ಯುತ್ ಪರಿವರ್ತಕಕ್ಕೆ(ಟ್ರಾನ್ಸ್ಫಾರ್ಮರ್) ಡಿಕ್ಕಿ ಹೊಡೆಯುವುದರಿಂದ ಕಾರು ಬಚಾವ್ ಆಗಿದೆ.
ಒಂದು ವೇಳೆ ಟಿಸಿಗೆ ಕಾರು ಡಿಕ್ಕಿ ಹೊಡೆದಿದ್ದರೆ ಕಾರಿನಲ್ಲಿದ್ದವರು ಸಜೀವವಾಗಿ ದಹನವಾಗುವ ಅಪಾಯವಿತ್ತು. ವಿದ್ಯುತ್ ಕಂಬಕ್ಕೆ ಹಾನಿಯಾಗಿದೆ ಎಂದು ತಿಳಿದುಬಂದಿದೆ.