ETV Bharat / state

ಬಸವರಾಜ ಶರಣಪ್ಪ ಅವಟಿಗೆ ಒಲಿದ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ - Basavaraja Sharanappa Avati get state level best teacher award

ತಾಳಿಕೋಟಿ ತಾಲೂಕಿನ ಪೀರಾಪೂರ ಸರ್ಕಾರಿ ಪ್ರೌಢ ಶಾಲೆಯಲ್ಲಿ ವಿಜ್ಞಾನ ಹಾಗೂ ಗಣಿತ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಬಸವರಾಜ ಶರಣಪ್ಪ ಅವಟಿ ಅವರಿಗೆ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಒಲಿದು ಬಂದಿದೆ.

Basavaraja Sharanappa Avati
ಬಸವರಾಜ ಶರಣಪ್ಪ ಅವಟಿ
author img

By

Published : Sep 4, 2021, 1:13 PM IST

ಮುದ್ದೇಬಿಹಾಳ: ವಿದ್ಯಾರ್ಥಿಗಳಿಗೆ ಕಬ್ಬಿಣದ ಕಡೆಲೆಯಾದ ಗಣಿತ ಹಾಗೂ ವಿಜ್ಞಾನ ವಿಷಯವನ್ನು ನಾಟಕಗಳ ಮೂಲಕ ಅಭಿನಯಿಸಿ, ಮನ ಮುಟ್ಟುವಂತೆ ಬೋಧನೆ ಮಾಡಿದ ಶಿಕ್ಷಕ ಬಸವರಾಜ ಶರಣಪ್ಪ ಅವಟಿ ಅವರಿಗೆ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಒಲಿದು ಬಂದಿದೆ.

ತಾಳಿಕೋಟಿ ತಾಲೂಕಿನ ಪೀರಾಪೂರ ಸರ್ಕಾರಿ ಪ್ರೌಢ ಶಾಲೆಯಲ್ಲಿ ವಿಜ್ಞಾನ ಹಾಗೂ ಗಣಿತ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಬಸವರಾಜ ಶರಣಪ್ಪ ಅವಟಿ, ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿಯಾಗಿ ಹಲವು ವಿಷಯಗಳ ಕುರಿತು ತರಬೇತಿ ನೀಡಿದ್ದಾರೆ. 17 ವರ್ಷಗಳ ಕಾಲ ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸಿರುವ ಅವಟಿ, ವಿದ್ಯಾರ್ಥಿಗಳಿಗೆ ಮನ ಮುಟ್ಟುವ ಬೊಧನೆ ಮೂಲಕ ಗಣಿತ ಹಾಗೂ ವಿಜ್ಞಾನ ವಿಷಯದಲ್ಲಿ ಫಲಿತಾಂಶ ಸುಧಾರಣೆಗೆ ಶ್ರಮಿಸಿದ್ದಾರೆ.

ಪ್ರವಾಸದ ಮೂಲಕ ಪಾಠ:

ಕೊರೊನಾ ವೇಳೆ ಸುಧಾರಿತ ತಂತ್ರಜ್ಞಾನಗಳಾದ ಗೂಗಲ್ ಮೀಟ್, ಟೆಲಿಗ್ರಾಂ, ಕ್ವಿಜ್ ಆ್ಯಪ್ ಮೂಲಕ ಬೋಧನೆ ಮಾಡಿದ್ದಾರೆ. ಅಷ್ಟೇ ಅಲ್ಲದೆ, ತಂತ್ರಜ್ಞಾನದಿಂದ ವಂಚಿತರಾದ ಮಕ್ಕಳ ಮನೆಗೆ ತೆರಳಿ ಬೋಧನೆ ಮಾಡಿದ್ದಾರೆ. ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗಾಗಿ ರಸಪ್ರಶ್ನೆಗಳು, ಮಿಂಚು ಪಟ್ಟಿಗಳಿಂದ ಬೋಧನೆ, ಸಂರಚನಾತ್ಮಕ ಬೋಧನೆ, ಕ್ಷೇತ್ರ ಅಧ್ಯಯನ ಪ್ರವಾಸದ ಮೂಲಕ ಮಕ್ಕಳಿಗೆ ಪಾಠ ಮನಮುಟ್ಟುವಂತೆ ಮಾಡಿದ್ದಾರೆ.

ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನ: ಗಣಿತ ಹಾಗೂ ಭೌತ ವಿಜ್ಞಾನ ವಿಷಯಗಳ ರಚನಾತ್ಮಕ ಬೋಧನೆ ವಿಷಯಕ್ಕೆ ಸಂಬಂಧಿಸಿದಂತೆ 2019 ರಲ್ಲಿ ವಿಜಯಪುರ ಜಿಲ್ಲೆಯ 'ಅತ್ಯುತ್ತಮ ಶಿಕ್ಷಕ' ಪ್ರಶಸ್ತಿ ಪಡೆದಿದ್ದಾರೆ. ಶಾಲೆಯಲ್ಲಿ ಸದಾ ಸಕ್ರೀಯರಾಗಿರುವ ಅವಟಿ, ಬೋಧನೆಯಲ್ಲಿ ಪ್ರಯೋಗಗಳ ಮೂಲಕ ಫಲಿತಾಂತ ಸುಧಾರಣೆ ಮಾಡುವಲ್ಲಿ ಶ್ರಮಿಸಿದ್ದಾರೆ. ಬಸವರಾಜ ಶರಣಪ್ಪ ಪ್ರಯತ್ನ ಹಾಗೂ ಶಿಕ್ಷಕ ಬಳಗದ ಸಹಕಾರದೊಂದಿಗೆ ಪಿರಾಪೂರ ಸರ್ಕಾರಿ ಪ್ರೌಢ ಶಾಲೆ ಫಲಿತಾಂಶ ಜಿಲ್ಲೆಯಲ್ಲಿ ಅಗ್ರಸ್ಥಾನದಲ್ಲಿ ನಿಲ್ಲುವಂತೆ ಮಾಡಿದೆ.

ಇನ್ನು ಸಂರಚನಾತ್ಮಕ ವಿಧಾನಗಳಿಂದ ತರಗತಿ, ನಿರಂತರ ಮೌಲ್ಯಮಾಪನದಿಂದ ಉತ್ತಮ ಫಲಿತಾಂಶ ತರುವುದಲ್ಲದೇ ರಾಜ್ಯಮಟ್ಟದಲ್ಲಿ ಹಲವಾರು ಕಾರ್ಯಾಗಳಲ್ಲಿ ಭಾಗವಹಿಸಿ, ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿಯಾಗಿ ಸಹ ಅವಟಿ ಕಾರ್ಯನಿರ್ವಹಿಸಿದ್ದಾರೆ. ರಾಜ್ಯ ಶಿಕ್ಷಣ ಸಚಿವರಿಂದ, ಆಯುಕ್ತರಿಂದ ಸುಗಮಕಾರನಾಗಿ ಪ್ರಮಾಣ ಪತ್ರ ಪಡೆದುಕೊಂಡಿದ್ದಾರೆ. ಜೊತೆಗೆ ಅವಟಿ ಅವರು ನಿರ್ದೇಶನ ಮಾಡಿದ ವಿಜ್ಞಾನ ನಾಟಕ ಮಕ್ಕಳ ಸಾಂಸ್ಕೃತಿಕ ವಿಭಾಗದಲ್ಲಿ ಜಿಲ್ಲಾ ಮಟ್ಟದವರೆಗೂ ಪ್ರದರ್ಶನಗೊಂಡಿದೆ.

ವಿದ್ಯಾರ್ಥಿಗಳಿಗೆ ಪ್ರಶಸ್ತಿ ಅರ್ಪಣೆ:

'17 ವರ್ಷಗಳ ಕಾಲ ಬೋಧನಾ ವೃತ್ತಿಯಲ್ಲಿ ಎಂದೂ ನಾನು ರಾಜಿ ಮಾಡಿಕೊಂಡಿಲ್ಲ. ವಿದ್ಯಾರ್ಥಿಗಳಿಗೆ ಸರಳ ಬೋಧನೆಯ ಜೊತೆಗೆ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಬೋಧನೆ ಮಾಡಿದ್ದು, ವಿದ್ಯಾರ್ಥಿಗಳ ಕಲಿಕಾ ಮಟ್ಟ ಹೆಚ್ಚಿಸಿದ ಹೆಮ್ಮೆ ಇದೆ. ಸರ್ಕಾರ ನನ್ನನ್ನು ಗುರುತಿಸಿ ಪ್ರಶಸ್ತಿ ನೀಡಿರುವುದು ಸಂತಸವಾಗಿದೆ. ಈ ಪ್ರಶಸ್ತಿಯನ್ನು ನನ್ನ ವಿದ್ಯಾರ್ಥಿಗಳಿಗೆ ಅರ್ಪಿಸಿದ್ದೇನೆ' ಎಂದು ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕ ಶರಣಪ್ಪ ಅವಟಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.