ETV Bharat / state

ಕೊರೊನಾ ಆರ್ಥಿಕ ದಿಗ್ಬಂಧನ: ಸಿಎಂ ಪರಿಹಾರ ನಿಧಿಗೆ 3 ತಿಂಗಳ ವೇತನ ನೀಡಿದ ಯತ್ನಾಳ್​​​​​​

ರಾಜ್ಯದಲ್ಲಿ ಕೊರೊನಾ ಪರಿಣಾಮ ಆರ್ಥಿಕತೆ ಕುಸಿತ ಕಂಡಿದ್ದು, ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​​ ತಮ್ಮ ಮೂರು ತಿಂಗಳ ವೇತನ ಪಡೆಯುವಂತೆ ಸಿಎಂ ಯಡಿಯೂರಪ್ಪನವರಿಗೆ ಮನವಿ ಮಾಡಿದ್ದಾರೆ.

basanagouda-patil-yatnal-gave-his-three-month-payment-to-cm-relief-found
ಬಸನಗೌಡ ಪಾಟೀಲ್​ ಯತ್ನಾಳ್​
author img

By

Published : Mar 26, 2020, 7:35 PM IST

ವಿಜಯಪುರ: ಕೊರೊನಾ‌ ಎಮರ್ಜೆನ್ಸಿ ಹಿನ್ನೆಲೆ ತಮ್ಮ ಮೂರು ತಿಂಗಳ ವೇತನ ಸರ್ಕಾರಕ್ಕೆ ನೀಡಲು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​​​​ ನಿರ್ಧರಿಸಿದ್ದಾರೆ.

ತಮ್ಮ ಮೂರು ತಿಂಗಳ ವೇತನ ಪಡೆಯುವಂತೆ ಸಿಎಂಗೆ ಶಾಸಕ ಯತ್ನಾಳ್​​ ಪತ್ರ ಬರೆದಿದ್ದು, ಅದರ ಪ್ರತಿಯನ್ನು ತಮ್ಮ ಅಧಿಕೃತ ಫೇಸ್​​ಬುಕ್ ಅಕೌಂಟ್​ನಲ್ಲಿ ಪ್ರಕಟಿಸಿದ್ದಾರೆ. ಮುಖ್ಯಮಂತ್ರಿಗಳ‌ ಪ್ರಕೃತಿ ವಿಕೋಪ ನಿಧಿಗೆ ತಮ್ಮ ವೇತನ ಪಡೆಯುವಂತೆ ಪತ್ರ ಬರೆದಿದ್ದಾರೆ.

basanagouda patil yatnal gave his three month payment to cm relief found
ಮೂರು ತಿಂಗಳ ವೇತನ ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​

ರಾಜ್ಯದ ಜನ ಸಂಕಷ್ಟದಲ್ಲಿದ್ದಾರೆ‌, ಅವರಿಗೆ ಸಹಾಯಕವಾಗಲಿ. ಕೊರೊನಾದಿಂದ ಲಕ್ಷಾಂತರ ರೂಪಾಯಿ ಹಾನಿಯಾಗಿದೆ. ಈ ಸಮಯದಲ್ಲಿ ನಾವು ಆರ್ಥಿಕವಾಗಿ ಸರ್ಕಾರದ ಬೆಂಬಲಕ್ಕೆ ನಿಲ್ಲಬೇಕಿದೆ. ಇದಕ್ಕಾಗಿ ನನ್ನ ಮೂರು ತಿಂಗಳ ವೇತನವನ್ನು ಮುಖ್ಯಮಂತ್ರಿಗಳ ಪ್ರಕೃತಿ ವಿಕೋಪ ಪರಿಹಾರ ನಿಧಿಗೆ ಪಡೆಯಬೇಕೆಂದು ಸಿಎಂಗೆ ಯತ್ನಾಳ್ ಮನವಿ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.