ETV Bharat / health

ಮನುಷ್ಯನ ರಕ್ತದಿಂದಲೇ ಔಷಧ ಸಿದ್ಧ, ವಿನೂತನ ಆವಿಷ್ಕಾರ: ಮೂಳೆ ಮುರಿತ, ಗಾಯಗಳಿಗೆ ಸುಲಭ ಚಿಕಿತ್ಸೆ! - MEDICINE MADE FROM BLOOD

Medicine Made From Blood: ಮನುಷ್ಯನ ರಕ್ತದೊಂದಿಗೆ ಔಷಧ ತಯಾರಿಸಿದ್ದಾರೆ. ಮೂಳೆ ಮುರಿತ ಮತ್ತು ಗಾಯಗಳಿಗೆ ಸುಲಭ ಚಿಕಿತ್ಸೆ ನೀಡಲು ಅನುಕೂಲವಾಗಿದೆ. ನಾಟಿಂಗ್ಹ್ಯಾಮ್ ವಿಶ್ವವಿದ್ಯಾಲಯದ ಸಂಶೋಧಕರು ಈ ಆವಿಷ್ಕಾರವನ್ನು ಮಾಡಿದ್ದಾರೆ.

MEDICINE MADE FROM BLOOD  MEDICINE MADE FROM HUMAN BLOOD  MEDICINES DERIVED FROM BLOOD  BLOOD DERIVED MEDICATIONS
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Health Team

Published : Nov 16, 2024, 7:57 PM IST

Medicine Made From Blood: ನಿಮಗೆ ದೇಹದ ಮೇಲೆ ಏನಾದರೂ ಗಾಯಗಳಾಗಿವೆಯೇ? ಅಥವಾ ಮುರಿದ ಮೂಳೆಗಳು? ಹಾಗಾದರೆ ತೊಂದರೆ ಪಡಬೇಕಾಗಿಲ್ಲ. ಅಂಥವರಿಗಾಗಿಯೇ ಸಂಶೋಧಕರು ಅದ್ಭುತ ಔಷಧ ಕಂಡು ಹಿಡಿದು ಮಹತ್ವದ ಸಾಧನೆ ಮಾಡಿದ್ದಾರೆ. ಸಂಶ್ಲೇಷಿತ ಪೆಪ್ಟೈಡ್‌ಗಳು ಮತ್ತು ಮಾನವ ರಕ್ತವನ್ನು ಸಂಯೋಜಿಸುವ ಮೂಲಕ ವಿಜ್ಞಾನಿಗಳು ಈ ವಿನೂತನ ಔಷಧ ತಯಾರಿಸಿದ್ದಾರೆ. ಇದರಿಂದ ಗಾಯಗೊಂಡ ದೇಹದ ಭಾಗಗಳನ್ನು ತ್ವರಿತವಾಗಿ ಗುಣಪಡಿಸುತ್ತದೆ. ಮುರಿದ ಮೂಳೆಗಳನ್ನು ಸರಿಪಡಿಸುವಲ್ಲಿ ಇದು ಅತ್ಯುತ್ತಮ ಫಲಿತಾಂಶಗಳನ್ನು ನೀಡುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.

ನಾಟಿಂಗ್ಹ್ಯಾಮ್ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಫಾರ್ಮಸಿ ಮತ್ತು ಕೆಮಿಕಲ್ ಎಂಜಿನಿಯರಿಂಗ್‌ ವಿಭಾಗದ ಸಂಶೋಧಕರು ಈ ಹೊಸ ಆವಿಷ್ಕಾರ ಮಾಡಿದ್ದಾರೆ. ಭವಿಷ್ಯದಲ್ಲಿ ಗಾಯಗಳು ಮತ್ತು ರೋಗಗಳ ಚಿಕಿತ್ಸೆಯಲ್ಲಿ ಈ ಸಂಶೋಧನೆ ತುಂಬಾ ಪ್ರಯೋಜನಕಾರಿಯಾಗಿದೆ ಎಂದು ನಿರೀಕ್ಷಿಸಲಾಗಿದೆ. ದೇಹದ ಮೇಲೆ ಆಗಿರುವ ಸಣ್ಣ ಗಾಯಗಳು ಮತ್ತು ಮೂಳೆ ಮುರಿತಗಳನ್ನು ಚೆನ್ನಾಗಿ ಗುಣಪಡಿಸುತ್ತದೆ. ಈ ನೈಸರ್ಗಿಕ ಪ್ರಕ್ರಿಯೆಯಲ್ಲಿ ಮಾನವನ ರಕ್ತವು ತುಂಬಾ ಪ್ರಯೋಜನಕಾರಿಯಾಗಿದೆ ಎನ್ನುತ್ತಾರೆ ತಜ್ಞರು.

ರಕ್ತದಲ್ಲಿನ ಪುನರುತ್ಪಾದಕ ವಸ್ತುವಾದ ಹೆಮಟೋಮಾ ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅಂಗಾಂಶಗಳನ್ನು ಸರಿಪಡಿಸುವಲ್ಲಿ ಇದು ಅತ್ಯಂತ ಪ್ರಮುಖವಾದ ಪಾತ್ರ ವಹಿಸುತ್ತದೆ. ಇದರ ಹಿನ್ನೆಲೆಯಲ್ಲಿ ವಿಜ್ಞಾನಿಗಳು ಮಾನವರ ರಕ್ತದೊಂದಿಗೆ ಸಂಶ್ಲೇಷಿತ ಪೆಪ್ಟೈಡ್‌ಗಳನ್ನು ಸಂಯೋಜಿಸುವ ಮೂಲಕ ಜೈವಿಕ ಸಹಕಾರಿ ವಸ್ತುವನ್ನು ರಚನೆ ಮಾಡಿದ್ದಾರೆ. ಅಣುಗಳು, ಜೀವಕೋಶಗಳು ಮತ್ತು ಅಂಗಾಂಶಗಳ ನೈಸರ್ಗಿಕ ದುರಸ್ತಿಗೆ ಇದು ಉಪಯುಕ್ತವಾಗಿದೆ ಎಂದು ತಜ್ಞರು ವಿವರಿಸಿದ್ದಾರೆ.

ಈ ಜೈವಿಕ ಸಹಕಾರಿ ವಸ್ತುವನ್ನು ಸುಲಭವಾಗಿ ತಯಾರಿಸಬಹುದು ಹಾಗೂ ಬಳಸಬಹುದು. ಇದನ್ನು ಈಗಾಗಲೇ ಪ್ರಾಣಿಗಳ ರಕ್ತದಿಂದ ಸಂಶೋಧಿಸಲಾಗಿದೆ ಮತ್ತು ಉತ್ತಮ ಫಲಿತಾಂಶ ನೀಡಿದೆ. ಪ್ರಾಣಿಗಳ ಮೂಳೆಗಳನ್ನು ಸರಿಪಡಿಸುವಲ್ಲಿ ಯಶಸ್ವಿಯಾಗಿದೆ ಎಂದು ಸಂಶೋಧನಾ ತಂಡವು ಬಹಿರಂಗಪಡಿಸಿದೆ. ಮಾನವ ರಕ್ತವನ್ನು ಸುಲಭವಾಗಿ ಹಾಗೂ ಸುರಕ್ಷಿತವಾಗಿ ಹೆಚ್ಚು ಮರು ಉತ್ಪಾದಿಸಬಹುದಾದ ಇಂಪ್ಲಾಂಟ್‌ಗಳಾಗಿ ಪರಿವರ್ತಿಸಬಹುದು ಎಂದು ಆವಿಷ್ಕಾರ ಮಾಡಿರುವುದು ರೋಮಾಂಚನಕಾರಿಯಾಗಿದೆ.

''ಈ ರಕ್ತವು ಉಚಿತವಾಗಿ ಲಭ್ಯವಿದೆ. ಅಗತ್ಯವಿದ್ದರೆ ಅದನ್ನು ರೋಗಿಗಳ ಸಂಬಂಧಿಕರಿಂದ ಸುಲಭವಾಗಿ ಪಡೆಯಬಹುದು. ವೈದ್ಯಕೀಯ ಚಿಕಿತ್ಸೆಯ ಭಾಗವಾಗಿ ಯಾರಾದರೂ ಸುಲಭವಾಗಿ ಬಳಸಬಹುದಾದ ಟೂಲ್ ಕಿಟ್ ಅನ್ನು ರಚಿಸುವುದು ನಮ್ಮ ಗುರಿಯಾಗಿದೆ'' ಎಂದು ನಾಟಿಂಗ್‌ಹ್ಯಾಮ್ ವಿಶ್ವವಿದ್ಯಾಲಯದ ಸಂಶೋಧಕ ಡಾ ಕೊಸಿಮೊ ಲಿಗೊರಿಯೊ ತಿಳಿಸಿದ್ದಾರೆ.

ಓದುಗರಿಗೆ ಮುಖ್ಯ ಸೂಚನೆ: ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಹಾಗೂ ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ನೀಡಿದ್ದೇವೆ.

ಇವುಗಳನ್ನೂ ಓದಿ:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.