ಆ ದಿನಗಳು ಹಾಗೂ ಮೈನಾ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಐಡೆಂಟಿಟಿ ಹೊಂದಿರುವ ನಟ ಚೇತನ್ ಅಹಿಂಸಾ. ಕೆಲ ವರ್ಷಗಳಿಂದ ಸಾಮಾಜಿಕ ಹೋರಾಟಗಾರನಾಗಿ ಗುರತಿಸಿಕೊಂಡಿರುವ ಚೇತನ್ ಸಿನಿಮಾ, ರಾಜಕೀಯ, ಬೆದರಿಕೆ ಮತ್ತು ಚಿತ್ರರಂಗದ ಪರಿಸ್ಥಿತಿ ಕುರಿತು ಈಟಿವಿ ಭಾರತದ ಜೊತೆ ಹಂಚಿಕೊಂಡಿದ್ದಾರೆ. ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದ್ದ ವಿಚಾರ, ಮುಂದಿನ ದಿನಗಳಲ್ಲಿ ರಾಜಕೀಯ ಪ್ರವೇಶಿಸುತ್ತಾರಾ? ಬೆದರಿಕೆ ಕೆರೆಗಳಿಂದ ಎಷ್ಟು ತೊಂದರೆ ಆಗುತ್ತಿತ್ತು? ಹೀಗೆ ಕೆಲ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.
ಮುಂದಿನ ಸಿನಿಮಾಗಳ್ಯಾವುವು?: ''ನಾನೀಗ ತೆಲುಗು ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟಿದ್ದೇನೆ. ಈಗ ಹಂಡ್ರೆಡ್ ಕ್ರೋರ್ ಎಂಬ ಸಿನಿಮಾ ರಿಲೀಸ್ ಆಗಿದೆ, ಆದ್ರೆ ಪ್ರಮೋಷನ್ ಸರಿಯಾಗಿ ಮಾಡದ ಕಾರಣ ನಾನು ಅಂದುಕೊಂಡಂತೆ ಯಶಸ್ಸು ಸಿಗಲಿಲ್ಲ. ಈಗ ಅದೇ ಬ್ಯಾನರ್ನಿಂದ ಪ್ಯಾನ್ ಇಂಡಿಯಾ ಸಿನಿಮಾ ಬರುತ್ತಿದೆ. ನನಗೆ ಆ ಚಿತ್ರದ ಕಥೆ ಹಾಗೂ ಡೈರೆಕ್ಷನ್ ಮೇಲೆ ನಂಬಿಕೆ ಇದೆ. ಆ ಕಾರಣಕ್ಕೆ ಕರ್ನಾಟಕದ ಎಲ್ಲಾ ಜಿಲ್ಲೆಗಳಿಗೆ ಹೋಗಿ ಚಿತ್ರದ ಪ್ರಚಾರ ಕೈಗೊಳ್ಳುತ್ತೇನೆ. ಸಿನಿಮಾ ಕೆಲವೇ ತಿಂಗಳುಗಳಲ್ಲಿ ರಿಲೀಸ್ ಆಗಲಿದೆ. ಇದರ ಜೊತೆಗೆ ಕನ್ನಡದಲ್ಲಿ ಮಾರ್ಗ ಸಿನಿಮಾದ 25 ದಿನಗಳ ಶೂಟಿಂಗ್ ನಡೆದಿದೆ. ಇನ್ನೂ 25 ರಿಂದ 30 ದಿನಗಳ ಶೂಟಿಂಗ್ ಆಗಬೇಕು. ಆ ಸಿನಿಮಾ ಕೂಡ ಹಿಟ್ ಆಗುವ ಎಂಬ ವಿಶ್ವಾಸವಿದೆ'' ಎಂದು ತಿಳಿಸಿದರು.
ರಾಜಕೀಯಕ್ಕೆ ಎಂಟ್ರಿ?: ಹೋರಾಟದ ಜೊತೆಗೆ ಸಮಾಜದ ಅಂಕುಡೊಂಕುಗಳ ಬಗ್ಗೆ ಪ್ರಶ್ನೆ ಮಾಡುತ್ತೀರಾ. ಅದು ಕೆಲ ಬಾರಿ ನೆಗೆಟಿವ್ ಆಗಿ ಕಾಣಿಸಿಕೊಳ್ಳುತ್ತದೆ. ಈ ಹೋರಾಟದ ಮೂಲಕ ನೀವು ರಾಜಕೀಯಕ್ಕೆ ಬರುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಚೇತನ್, ''ಮೊದಲನೆಯದಾಗಿ ನಮಗೆ ಸಂವಿಧಾನ ಹೇಳುವ ಹಾಗೇ ಉತ್ತಮ ಸಮಾಜ ಆಗಬೇಕು. ಅದರಲ್ಲಿ ಸಮಾನತೆ, ಜಾತಿ ವ್ಯವಸ್ಥೆ, ಅಭಿವೃದ್ಧಿ ಹೀಗೆ ಎಲ್ಲವೂ ಸಮಾನವಾಗಿ ಇರಬೇಕು. ಈ ಕಾರಣಕ್ಕೆ ನಾನು 13ವರ್ಷಗಳಿಂದ ಹೋರಾಟ ಮಾಡುತ್ತಿದ್ದೇನೆ. ಈ ಹೋರಾಟದಿಂದ ಒಳ್ಳೆ ಸಮಾಜವನ್ನು ಕಟ್ಟುವ ಗುರಿ ನನ್ನದು. ರಾಜಕೀಯದಿಂದ ಇಂತಹ ಸಮಾಜ ಕಟ್ಟಲು ಸಾಧ್ಯ. ಈ ಕಾರಣಕ್ಕೆ ನಾವು ಪೊಲಿಟಿಸಂನ ಯಾವಾಗ ತರಬೇಕು ಎಂಬುದರ ಬಗ್ಗೆ ಒಂದಿಷ್ಟು ಸಿದ್ದತೆಗಳನ್ನು ಮಾಡುತ್ತಿದ್ದೇವೆ. ಆದದ್ರೆ ನಾನು ಎಂಎಲ್ಎ, ಮಿನಿಸ್ಟರ್, ಮುಖ್ಯಮಂತ್ರಿ ಆಗಬೇಕೆಂದು ಅಂದುಕೊಂಡಿಲ್ಲ. ಬೇರೆಯವರು ಅಧಿಕಾರ ನಡೆಸಲಿ ಅನ್ನೋ ಉದ್ದೇಶ ಇದೆ. ನನಗೆ ಪರ್ಸನಲ್ ಆಗಿ ಅಧಿಕಾರ ಬೇಡ'' ಎಂದು ತಿಳಿಸಿದರು.
ಫೈರ್ ಕಮಿಟಿ: ಮಲೆಯಾಳಂ ಸಿನಿಮಾ ಇಂಡಸ್ಟ್ರಿಯಂತೆ ಕನ್ನಡ ಚಿತ್ರರಂಗದಲ್ಲಿ ಫೈರ್ ಕಮಿಟಿಯನ್ನು ರಚಿಸಬೇಕು ಎಂದು ನಿರ್ದೇಶಕಿ ಕವಿತಾ ಲಂಕೇಶ್ ನೇತೃತ್ವದಲ್ಲಿ ಚೇತನ್ ಸೇರಿ ಕೆಲ ನಟಿಯರು ಕೆಲ ತಿಂಗಳ ಹಿಂದೆ ಸಿಎಂಗೆ ಮನವಿ ಮಾಡಿದ್ದರು. ಈ ವಿಚಾರಕ್ಕೆ ಪ್ರತಿಕ್ರಿಯಿಸಿ, ಫೈರ್ ಕಮಿಟಿಯಲ್ಲಿ ಸಾಕಷ್ಟು ವಿಚಾರಗಳ ಬಗ್ಗೆ ಚರ್ಚೆ ಆಗುತ್ತಿದೆ. ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಹಾಗೇ ಫಿಲ್ಮ್ ಚೇಂಬರ್ ಫೈರ್ ಕಮಿಟಿ ಮಾಡಬೇಕೋ? ಬೇಡವೋ? ಎಂಬುದರ ಬಗ್ಗೆ ಚರ್ಚೆ ನಡೆಸುತ್ತಿದೆ. ಇದರ ಜೊತೆಗೆ ಸಿಎಂ ಸಿದ್ದರಾಮಯ್ಯ ಅವರಿಗೆ ನಾವು ಮನವಿ ಕೊಟ್ಟಿದದ್ದೇವೆ. ಕೇರಳ ಸರ್ಕಾರದಲ್ಲಿ ಹೇಮಾ ಕಮಿಟಿ ಮಾಡಿರಬೇಕಾದ್ರೆ ಕನ್ನಡ ಚಿತ್ರರಂಗದಲ್ಲಿ ಮಾಡಲಾಗಲ್ಲ ಅಂತಾ ಹೇಳುವುದಕ್ಕೆ ಆಗೋಲ್ಲ. ಹಾಗೇನಾದರೂ ಸರ್ಕಾರ ಈ ಫೈರ್ ಕಮಿಟಿ ಬಗ್ಗೆ ಚಿಂತನೆ ನಡೆಸಲಿಲ್ಲ ಅಂದ್ರೆ ಮುಂದೆ ಯಾವ ರೀತಿ ಸರ್ಕಾರಕ್ಕೆ ಅರ್ಥ ಮಾಡಿಸಬೇಕು ಎಂಬುದರ ಬಗ್ಗೆ ನಾವು ಕಮಿಟಿಯಲ್ಲಿ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.
ಬೆದರಿಕೆ ಕರೆಗಳು ಬಂದಿವೆ: ಕೆಲ ಸಮಸ್ಯೆಗಳು ಹಾಗೂ ಸರ್ಕಾರದ ಬಗ್ಗೆ ಆಗಾಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಧ್ವನಿ ಎತ್ತುತ್ತೀರಾ. ನಿಮಗೆ ಬೆದರಿಕೆ ಕರೆಗಳು ಬಂದಿವೆಯೇ ಅಥವಾ ನಿಮಗೆ ತೊಂದರೆ ಆಗಿದೆಯೇ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನನಗೆ ಮೊದಲು ತುಂಬಾನೇ ಬೆದರಿಕೆ ಕರೆಗಳು ಬಂದಿವೆ. ಸಂವಿಧಾನ ಬಿಟ್ಟು ಸಮಾಜದ ವಿರುದ್ಧ ಎಂಬಂತ ಘಟನೆಗಳು ಸಂಭವಿಸಿದಾಗ ನಾನು ಆ ಬಗ್ಗೆ ಧ್ವನಿ ಎತ್ತುವ ಕೆಲಸ ಮಾಡುತ್ತೇನೆ. ಇಲ್ಲಿ ಯಾರ ಬಗ್ಗೆಯೂ ವೈಯಕ್ತಿಕವಾಗಿ ನಾನು ಮಾತನಾಡೋದಿಲ್ಲ. ಆ ನಿಟ್ಟಿನಲ್ಲಿ ಒಳ್ಳೆ ಸಮಾಜ ಕಟ್ಟಬೇಕು ಅಂದರೆ ಸೈದ್ಧಾಂತಿಕ ಚಳುವಳಿ ಮಾಡಬೇಕು. ಈ ಚಳುವಳಿಯನ್ನು ಸಾವಿರಾರು ವರ್ಷಗಳಿಂದ ಜನರು ಮಾಡುತ್ತಾ ಬರುತ್ತಿದ್ದಾರೆ. ಆದರೆ ಕಳೆದ ನಾಲ್ಕೈದು ತಿಂಗಳಿನಿಂದ ನನಗೆ ಯಾವುದೇ ಬೆದರಿಕೆ ಕರೆಗಳು ಬಂದಿಲ್ಲ. ಏಕೆಂದರೆ ನಮ್ಮ ಕರ್ನಾಟಕದ ಜನರಿಗೂ ಅರ್ಥ ಆಗುತ್ತಿದೆ. ಚೇತನ್ ಸಮಾಜದ ವ್ಯವಸ್ಥೆ ಕಾಪಾಡುತ್ತಿದ್ದಾರೆ ಹಾಗೂ ಅನ್ಯಾಯದ ವಿರುದ್ಧ ದನಿ ಎತ್ತುತ್ತಿದ್ದಾರೆ ಅನ್ನೋ ವಿಷಯ ಜನರಿಗೆ ಅರ್ಥವಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಸೂಪರ್ಸ್ಟಾರ್ ಧನುಷ್ ವಿರುದ್ಧ ಲೇಡಿ ಸೂಪರ್ಸ್ಟಾರ್ ನಯನತಾರಾ ಬಹಿರಂಗ ವಾಗ್ದಾಳಿ
ಕರ್ನಾಟಕದಿಂದ ನಾನು ಫಲನಾಭವಿ. ನನ್ನ ಬುದ್ಧಿಶಕ್ತಿಯಿಂದ, ನನ್ನ ಶ್ರಮದಿಂದ ನಾನು ಫಲನಾಭವಿ ಅಲ್ಲ. ನಮ್ಮ ಜನ್ಮ ಆಧಾರಿತ ಸವಲತ್ತುಗಳಿಂದ ನಾನು ಫಲನಾಭವಿ. ನನ್ನ ತಂದೆ ತಾಯಿ ಹಾಗೂ ತಾತನ ಬಳುವಳಿ ಇದೆ. ಈ ಕಾರಣಕ್ಕೆ ಕರ್ನಾಟಕದಲ್ಲಿನ ವ್ಯವಸ್ಥೆಗಳನ್ನು ಸರಿ ಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡಿ, ಕರ್ನಾಟಕಕ್ಕೆ ಒಳ್ಳೆಯದು ಮಾಡಬೇಕೆಂಬ ಉದ್ದೇಶ ಇದೆ ಅಂತಾರೆ ಚೇತನ್.
ಇದನ್ನೂ ಓದಿ: ತುಳುನಾಡಿನ ಸಂಪ್ರದಾಯ ಮರೆಯದ ಐಶ್ವರ್ಯಾ ರೈ: ಭಾಷಾಪ್ರೇಮದ ವಿಡಿಯೋ ನೋಡಿ