ಶಿರಡಿ: ''ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವ ಅಮಿತ್ ಶಾ ಅವರು ತಮ್ಮ ಸಹೋದರ ರಾಹುಲ್ ಗಾಂಧಿ ಅವರ ಬಗ್ಗೆ ವಿನಾ ಕಾರಣ ಸುಳ್ಳುಗಳನ್ನು ಹರಡುತ್ತಿದ್ದಾರೆ'' ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಆರೋಪ ಮಾಡಿದರು.
ಶನಿವಾರ ಮಹಾರಾಷ್ಟ್ರದ ಅಹಲ್ಯಾನಗರ ಜಿಲ್ಲೆಯ ಶಿರಡಿಯಲ್ಲಿ ಮಹಾವಿಕಾಸ್ ಅಘಾಡಿ ಅಭ್ಯರ್ಥಿ ಪರ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ''ರಾಹುಲ್ ಗಾಂಧಿ ಮೀಸಲಾತಿ ವಿರೋಧಿ ಎಂದು ಪ್ರಧಾನಿ ಮೋದಿ, ಅಮಿತ್ ಶಾ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ದೇಶದಲ್ಲಿ ಜಾತಿ ಗಣತಿ ನಡೆಯಬೇಕೆಂದು ಹೇಳಿದ್ದರಿಂದ ರಾಹುಲ್ ಗಾಂಧಿ ಮೇಲೆ ಈ ರೀತಿ ವಿನಾ ಕಾರಣ ಸುಳ್ಳುಗಳನ್ನು ಹರಡುತ್ತಿದ್ದಾರೆ'' ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಆರೋಪಿಸಿದರು.
#WATCH | Maharashtra: Addressing a public rally in Shirdi, Congress leader Priyanka Gandhi Vadra says, " i challenge pm modi and hm amit shah to stand on the stage and declare that they will get the caste census done and remove the 50% cap on the reservation. they say that my… pic.twitter.com/gK7t2QRCtU
— ANI (@ANI) November 16, 2024
ಇಲ್ಲಿಂದಲೇ ಸ್ವಾತಂತ್ರ್ಯ ಹೋರಾಟಕ್ಕೆ ಬಲ ಬಂದಿತು: ''ದೇಶದ ಈ ಭೂಮಿ ದೇಶದ ದಿಕ್ಕನ್ನು ತೋರಿಸಿದೆ. ಇಲ್ಲಿಂದಲೇ ಸ್ವಾತಂತ್ರ್ಯ ಹೋರಾಟಕ್ಕೆ ಬಲ ಬಂದಿತು. ಹಾಗಾಗಿ ನಮಗೆಲ್ಲ ಮಹಾರಾಷ್ಟ್ರದ ಬಗ್ಗೆ ಹೆಮ್ಮೆ ಇದೆ. ಆದರೆ, ಛತ್ರಪತಿ ಶಿವಾಜಿ ಮಹಾರಾಜರನ್ನು ಈ ನೆಲದಲ್ಲಿ ಅವಮಾನಿಸಲಾಗುತ್ತಿದೆ. ನಿಮಗೆ ಅವಮಾನ ಮಾಡಲಾಗುತ್ತಿದೆ. ಮೋದಿ ಸೇರಿದಂತೆ ಈ ಎಲ್ಲ ನಾಯಕರು ಅವರ (ಶಿವಾಜಿ ಮಹಾರಾಜ್) ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ, ಅವರನ್ನು ಗೌರವಿಸುತ್ತಿಲ್ಲ. ಪ್ರಧಾನಿ ಮೋದಿ ಸಂಸತ್ತಿನ ಹೊರಗೆ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಶಂಕುಸ್ಥಾಪನೆ ನೆರವೇರಿಸಿದರು. ಆದರೆ, ನಂತರ ಆ ಕಾಮಗಾರಿಯನ್ನು ನಿಲ್ಲಿಸಿದರು. ಮುಂಬೈ ಬಳಿಯ ಅರಬ್ಬಿ ಸಮುದ್ರದಲ್ಲಿ ಯೋಧ ರಾಜನ ಉದ್ದೇಶಿತ ಸ್ಮಾರಕವನ್ನು ಅವರು ಉಲ್ಲೇಖಿಸುತ್ತಿದ್ದರು. ಅದನ್ನು ಅಷ್ಟಕ್ಕೆ ಬಿಟ್ಟರು. ತಮ್ಮ ಇಷ್ಟು ವರ್ಷದ ಆಡಳಿತಾವಧಿಯಲ್ಲಿ ಸತ್ಯ ಎಲ್ಲಿದೆ ಎಂದು ಪ್ರಧಾನಿ ಹೇಳಬೇಕು'' ಎಂದು ಸವಾಲು ಹಾಕಿದರು.
'Fight of ideology': Rahul Gandhi accuses BJP of 'Murder of Constitution,' slams Maharashtra power grab
— ANI Digital (@ani_digital) November 16, 2024
Read @ANI Story | https://t.co/WV78at3ZPH#RahulGandhi #Amravati #Constitution pic.twitter.com/dgsD8kjBww
10 ಲಕ್ಷ ಕೋಟಿ ಯೋಜನೆ ಕಿತ್ತುಕೊಂಡು ಅನ್ಯಾಯ: ''ಮಹಾರಾಷ್ಟ್ರದಿಂದ 10 ಲಕ್ಷ ಕೋಟಿ ರೂ. ಯೋಜನೆಗಳನ್ನು ಕಿತ್ತುಕೊಳ್ಳುವ ಮೂಲಕ ಇಲ್ಲಿನ ಜನಕ್ಕೆ ಅನ್ಯಾಯ ಮಾಡಲಾಗಿದೆ. ಇದನ್ನು ಸಹಿಸಲಾಗದು. ಬಾಳಾಸಾಹೇಬ್ ಠಾಕ್ರೆ ಇದ್ದಿದ್ದರೆ ಬೇರೆಯೇ ಇತ್ತು. ಅವರ ವಿಚಾರಧಾರೆಯೇ ವಿಭಿನ್ನವಾಗಿತ್ತು. ಯಾವುದೇ ಕಾರಣಕ್ಕೂ ಈ ಅವಮಾನಗಳನ್ನು ಸಹಿಸುತ್ತಿರಲಿಲ್ಲ. ಅವತಾರ ಪುರುಷರ ಪ್ರತಿಮೆಗಳ ನಿರ್ಮಾಣದಲ್ಲಿ ಭ್ರಷ್ಟಾಚಾರ ನಡೆಸಿ, ಆ ವ್ಯಕ್ತಿಯನ್ನು ಅವಮಾನಿಸುವ ಉದ್ದೇಶದಿಂದ ಅವರ ಹೆಸರನ್ನು ತೆಗೆದುಕೊಳ್ಳುವುದು ಎಷ್ಟು ಯೋಗ್ಯ? ಎಂದ ಪ್ರಿಯಾಂಕಾ ಗಾಂಧಿ, ಜಾತಿ ಗಣತಿ ನಡೆಸಿ ಮೀಸಲಾತಿ ಮೇಲಿನ ಶೇ. 50 ಮಿತಿಯನ್ನು ತೆಗೆದುಹಾಕಲಾಗುವುದು ಎಂದು ಸಾರ್ವಜನಿಕವಾಗಿ ಘೋಷಿಸಲಿ'' ಎಂದು ಪ್ರಧಾನಿಗೆ ಸವಾಲು ಹಾಕಿದರು.
#WATCH | Ahilya Nagar, Maharashtra: Congress General Secretary Priyanka Gandhi Vadra visits and offers prayer at Shirdi Sai Baba Temple. pic.twitter.com/evOspnhmLd
— ANI (@ANI) November 16, 2024
ನಾವು ಛತ್ರಪತಿ ಶಿವಾಜಿ ಮಹಾರಾಜರನ್ನು ಅವಮಾನಿಸಿಲ್ಲ: ''ಉದ್ಧವ್ ಠಾಕ್ರೆ ಅವರಿಗೆ ಧೈರ್ಯವಿದ್ದರೆ ರಾಹುಲ್ ಗಾಂಧಿ ಅವರು ಸಾವರ್ಕರ್ ಮತ್ತು ಬಾಳಾಸಾಹೇಬ್ ಠಾಕ್ರೆ ಬಗ್ಗೆ ಎರಡು ಒಳ್ಳೆಯ ಮಾತುಗಳನ್ನು ಹೇಳಲಿ'' ಎಂದು ಸವಾಲು ಹಾಕಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಪ್ರಿಯಾಂಕಾ ಗಾಂಧಿ, "ಬಾಳಾಸಾಹೇಬ್ ಠಾಕ್ರೆ ಮತ್ತು ಕಾಂಗ್ರೆಸ್ ವಿಭಿನ್ನ ಸಿದ್ಧಾಂತಗಳನ್ನು ಹೊಂದಿದ್ದವು. ಆದರೆ, ಇಲ್ಲಿಯವರೆಗೆ ನಾವು ಛತ್ರಪತಿ ಶಿವಾಜಿ ಮಹಾರಾಜರನ್ನು ಅವಮಾನಿಸಿಲ್ಲ" ಎಂದು ಇದೇ ವೇಳೆ ಹೇಳಿದರು.
ಅಮರಾವತಿ ಜಿಲ್ಲೆಯಲ್ಲಿ ನಡೆದ ಬೃಹತ್ ಜಾಥಾ ಉದ್ದೇಶಿಸಿ ಮಾತನಾಡಿದ ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ, ''ಇಂದು ಮಹಾರಾಷ್ಟ್ರದಲ್ಲಿ ಜನರಿಂದ ಆಯ್ಕೆಯಾದ ಸರ್ಕಾರವನ್ನು ಅಪಹರಿಸಿ ರಾಜ್ಯದಲ್ಲಿ ಕಳ್ಳ ಸರ್ಕಾರವನ್ನು ತರಲಾಗಿದೆ. ನನ್ನ ಬಳಿ ಇರುವ ಸಂವಿಧಾನದ ಪುಸ್ತಕ ನಕಲಿ ಎಂದು ಬಿಜೆಪಿಯವರು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ, ನನ್ನ ಕೈಯಲ್ಲಿ ನಿಜವಾದ ಸಂವಿಧಾನವಿದೆ. ನಾವು ಸಂವಿಧಾನವನ್ನು ಗೌರವಿಸುತ್ತೇವೆ. ಮಹಾರಾಷ್ಟ್ರದ ಜನರ ಸರ್ಕಾರವನ್ನು ಕಿತ್ತುಕೊಳ್ಳಲಾಗಿದೆ. ಈ ಮೂಲಕ ಪ್ರಧಾನಿ ಮತ್ತು ಬಿಜೆಪಿಯವರು ಮುಚ್ಚಿದ ಕೋಣೆಗಳಲ್ಲಿ ಈ ಸಂವಿಧಾನವನ್ನು ರಹಸ್ಯವಾಗಿ ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿದರು.
#WATCH | Amravati, Maharashtra: Congress MP and Lok Sabha LoP Rahul Gandhi says, " my sister was telling me that she heard modi ji's speech. and in that speech, whatever we say, modi ji is saying the same thing these days. i don't know, maybe he has lost his memory. the former… pic.twitter.com/bsF0wQ0KpO
— ANI (@ANI) November 16, 2024
ದಾರಾವಿಗಾಗಿ ಹಿಂದಿನ ಸರ್ಕಾರ ಕೆಡವಲಾಯಿತು: ಉದ್ಯಮಿಗಳೊಂದಿಗೆ ನಡೆದ ಸಭೆಯಲ್ಲಿ ಶಾಸಕರನ್ನು ಕೋಟ್ಯಂತರ ರೂಪಾಯಿಗಳಿಗೆ ಖರೀದಿಸಲು ನಿರ್ಧರಿಸಲಾಯಿತು. ಜನರಿಂದ ಆಯ್ಕೆಯಾದ ಸರ್ಕಾರವನ್ನು ಕದಿಯಲು ಸಂವಿಧಾನದಲ್ಲಿ ಎಲ್ಲೂ ಬರೆದಿಲ್ಲ. ಮಹಾರಾಷ್ಟ್ರದ ಸರ್ಕಾರವನ್ನು ಜನರಿಂದ ಏಕೆ ಕದ್ದಿದೆ ಎಂದು ನಾನು ನಿಮಗೆ ಹೇಳುತ್ತೇನೆ. ನಮ್ಮ ಸರ್ಕಾರವನ್ನು ಧಾರಾವಿಗಾಗಿ ಕದಿಯಲಾಗಿದೆ. ಪ್ರಧಾನಿ ಮೋದಿ, ಅಮಿತ್ ಶಾ, ಧಾರಾವಿಯ ಬಡವರ ಭೂಮಿಯನ್ನು ಅದಾನಿಗೆ ನೀಡಲು ಬಯಸಿದ್ದರು. ಹೀಗಾಗಿ, ಮಹಾ ಸರ್ಕಾರವನ್ನು ಕೆಡವಲಾಯಿತು'' ಎಂದು ರಾಹುಲ್ ಗಾಂಧಿ ಆರೋಪಿಸಿದರು.
ಇದೇ ವೇಳೆ ಮೋದಿ ಅವರ ಜ್ಞಾಪಕ ಶಕ್ತಿ ಬಗ್ಗೆ ಪ್ರಸ್ತಾಪಿಸಿ ರಾಹುಲ್ ಗಾಂಧಿ ವ್ಯಂಗ್ಯವಾಡಿದರು.
ಇದನ್ನೂ ಓದಿ: ಮಹಾರಾಷ್ಟ್ರ ಚುನಾವಣೆ: ರಾಹುಲ್ ಗಾಂಧಿ ಬ್ಯಾಗ್ ತಪಾಸಣೆ ನಡೆಸಿದ ಚುನಾವಣಾ ಅಧಿಕಾರಿಗಳು