ETV Bharat / state

ವಿಜಯಪುರ: ಕರಿ ಹರಿದ ಕೆಂಪು ಎತ್ತು, ಮುಂಗಾರಿಗೆ ಕೆಂಪು ಧಾನ್ಯ ಬಂಪರ್ ನಂಬಿಕೆ

ವಿಜಯಪುರ ಬಬಲೇಶ್ವರದಲ್ಲಿ ಕಾರ ಹುಣ್ಣಿಮೆ ಮುಗಿದು ಒಂದು ವಾರದ ನಂತರ ನಡೆಯುವ ಕರಿ ಹರಿಯುವ ಆಚರಣೆಯಲ್ಲಿ ಕೆಂಪು ಎತ್ತು ಕರಿ ಹರಿದಿದ್ದು ಈ ವರ್ಷ ಕೆಂಪು ಬೆಳೆಗಳು ರೈತರ ಬಾಳು ಹಸನುಗೊಳಿಸಲಿವೆ ಎಂಬುದು ರೈತರ ನಂಬಿಕೆ.

author img

By

Published : Jun 20, 2022, 11:01 PM IST

Updated : Jun 21, 2022, 10:21 AM IST

kari fest
ಕರಿ ಹಬ್ಬ

ವಿಜಯಪುರ: ಕಾರ ಹುಣ್ಣಿಮೆ ಮುಗಿದು ಒಂದು ವಾರದ ನಂತರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಕಾಖಂಡಕಿ ಗ್ರಾಮದಲ್ಲಿ‌ ಪ್ರತಿ ವರ್ಷದಂತೆ ಈ ವರ್ಷವು ಕರಿ ಹರಿಯುವ ಆಚರಣೆ ಬಹಳ ವಿಜೃಂಭಣೆಯಿಂದ ನಡೆಯಿತು. ಈ ದಿನದಂದು ಎತ್ತುಗಳ ಮುಖಾಂತರ ಕರಿ ಹರಿಯಲಾಗುತ್ತದೆ. ಯಾವ ಬಣ್ಣದ ಎತ್ತು ಮೊದಲು ಕರಿಯನ್ನು ಹರಿಯುತ್ತದೊ ಆ ಬಣ್ಣದ ಬೆಳೆಗಳು ಆ ವರ್ಷ ಲಾಭದಾಯಕವಾಗಿರುತ್ತದೆ ಎಂಬ ನಂಬಿಕೆ ಈ ಆಚರಣೆಯದ್ದು.

ಈ ಬಾರಿಯ ಆಚರಣೆಯಲ್ಲಿ ಕೆಂಪು ಎತ್ತು‌ ಕರಿ ಹರಿಯುವ ಮೂಲಕ, ಈ ವರ್ಷ ಕೆಂಪು ಧಾನ್ಯ ಬೆಳೆಗಳಾದ ಗೋದಿ, ಮೆಕ್ಕೆ ಜೋಳ ಸೇರಿದಂತೆ ಹಲವು ಧಾನ್ಯಗಳ ಫಸಲು ಹಲುಸಾಗಿ ಬೆಳೆದು ರೈತರ ಬಾಳು ಹಸನ ಮಾಡಲಿವೆ ಎನ್ನುವ ನಂಬಿಕೆ ರೈತರಲ್ಲಿದೆ.

ಇತಿಹಾಸ ಪ್ರಸಿದ್ಧ ಕಾಖಂಡಕಿ ಕರಿಯ ವೀಕ್ಷಣೆಗೆ ಬಾಗಲಕೋಟೆ, ವಿಜಯಪುರ, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಿಂದ ಸಾವಿರಾರು ಸಂಖ್ಯೆಯಲ್ಲಿ ಜನ ಪಾಲ್ಗೊಂಡಿದ್ದು, ಸಂಜೆ ಆರಂಭವಾಗುವ ಈ ಸ್ಪರ್ಧೆಗೆ ಬೆಳಗ್ಗೆಯಿಂದಲೇ ರೈತರು ತಮ್ಮ ತಮ್ಮ ಎತ್ತುಗಳನ್ನು ಶೃಂಗಾರಗೊಳಿಸಿ ಓಟದ ಸ್ಪರ್ಧೆಗೆ ಸಜ್ಜುಗೊಳಿಸಿದರು.

ಇದನ್ನೂ ಓದಿ: ಖೈದಿಗಳ ಮನ ಪರಿವರ್ತನೆಗೆ ವಿಜಯಪುರ ಕಾರಾಗೃಹದಿಂದ ಹೊಸ ಪ್ರಯತ್ನ

Last Updated : Jun 21, 2022, 10:21 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.