ವಿಜಯಪುರ: ಕೊರೊನಾ ರೆಡ್ ಜೋನ್ ರಸ್ತೆಗಳಲ್ಲಿ ವಿನಾಕಾರಣ ಅಡ್ಡಾಡುತ್ತಿದ್ದ ವ್ಯಕ್ತಿಯನ್ನು ಪ್ರಶ್ನಿಸಿದ್ದಕ್ಕೆ ಪೊಲೀಸರ ಮೇಲೆ ವ್ಯಕ್ತಿ ಕಲ್ಲು ಎಸೆಯಲು ಮುಂದಾದ ಘಟನೆ ಚಪ್ಪರಬಂದ್ ಬಡಾವಣೆಯಲ್ಲಿ ನಡೆದಿದೆ.
ನಗರದ ಚಪ್ಪರಬಂದ್ ಬಡಾವಣೆಯಲ್ಲಿ ವ್ಯಕ್ತಿಯೊಬ್ಬನನ್ನು ರೆಡ್ ಜೋನ್ ಎಂದು ಘೋಷಿಸಿರು ರಸ್ತೆಗಳಲ್ಲಿ ಬೇಕಾ ಬಿಟ್ಟಿಯಾಗಿ ಓಡಾಡುತ್ತಿದ್ದ. ಇದನ್ನು ಕಂಡು ಪೊಲೀಸರು ವ್ಯಕ್ತಿಯನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ವ್ಯಕ್ತಿ ಪೊಲೀಸರ ಮೇಲೆ ಕಲ್ಲು ಹಿಡಿದು ಎಸೆಯಲು ಮುಂದಾಗಿದ್ದ.
ಹೀಗೆ ಕಲ್ಲು ಹಿಡಿದು ನಿಂತ ವ್ಯಕ್ತಿ ಮಾನಸಿಕ ಅಸ್ವಸ್ಥನಿರಬಹುದೆಂದು ಪೊಲೀಸರು ಆತನ ತಂಟೆಗೆ ಹೋಗಿಲ್ಲ. ಇದರಿಂದ ಸ್ವಲ್ಪ ಹೊತ್ತು ನಿಂತು ಆ ವ್ಯಕ್ತಿ ನಂತರ ಕಲ್ಲುಗಳನ್ನು ಕೆಳಗಡೆ ಬೀಸಾಕಿ ಬೇರೆ ಕಡೆ ಹೋಗಿದ್ದಾನೆ