ETV Bharat / state

ಪ್ರಸಿದ್ಧ ಬನವಾಸಿಯ ಕದಂಬೋತ್ಸವದಲ್ಲಿ ಮೊದಲ ಬಾರಿಗೆ ಮ್ಯಾರಥಾನ್ ಓಟ.. - ಮ್ಯಾರಥಾನ್ ಓಟಕ್ಕೆ ಜಿಲ್ಲಾಧಿಕಾರಿ ಡಾ.ಹರೀಶ್ ಚಾಲನೆ

ರಾಜ್ಯ ಪ್ರಸಿದ್ಧ ಬನವಾಸಿಯ ಕದಂಬೋತ್ಸವದಲ್ಲಿ ಇದೇ ಮೊದಲ ಬಾರಿಗೆ ಆಯೋಜನೆ ಮಾಡಲಾಗಿದ್ದ ಮ್ಯಾರಥಾನ್ ಓಟ ಯಶಸ್ವಿಯಾಯಿತು.

ಮ್ಯಾರಥಾನ್ ಓಟ
ಮ್ಯಾರಥಾನ್ ಓಟ
author img

By

Published : Feb 8, 2020, 3:28 PM IST

ಶಿರಸಿ: ಬನವಾಸಿಯ ಕದಂಬೋತ್ಸವದಲ್ಲಿ ಆಯೋಜನೆ ಮಾಡಲಾಗಿದ್ದ ಮ್ಯಾರಥಾನ್ ಓಟಕ್ಕೆ ಜಿಲ್ಲಾಧಿಕಾರಿ ಡಾ.ಹರೀಶ್ ಚಾಲನೆ ನೀಡಿದರು.

ಗುಡ್ನಾಪುರದ ಬಂಗಾರೇಶ್ವರ ದೇವಾಲಯದಿಂದ ಆರಂಭಗೊಂಡ ಮ್ಯಾರಥಾನ್, ಬನವಾಸಿ ಮಧುಕೇಶ್ವರ ದೇವಾಲಯದ ಬಳಿ ಕೊನೆಗೊಂಡಿತು. ಈ ವೇಳೆ ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು, ವೈದ್ಯರು, ವಿವಿಧ ಇಲಾಖಾ ಅಧಿಕಾರಿಗಳು ಸೇರಿ ಸಾರ್ವಜನಿಕರೂ ಉತ್ಸಾಹದಿಂದ ಭಾಗಿಯಾದರು.

ಕದಂಬೋತ್ಸವದಲ್ಲಿ ಮ್ಯಾರಥಾನ್​ಗೆ ಚಾಲನೆ ನೀಡಿದ ಜಿಲ್ಲಾಧಿಕಾರಿ ಡಾ.ಹರೀಶ್

5 ಕಿ.ಮೀ ಉದ್ದದ ಈ ಮ್ಯಾರಥಾನ್​ನಲ್ಲಿ ಕಾರವಾರದ ಶಿವಾಜಿ ಪರಶುರಾಮಗೌಡ ಪ್ರಥಮ, ರಿಪ್ಪನ್ ಪೇಟೆಯ ಸಂಜಯ್ ಜಿ. ದ್ವಿತೀಯ, ಕಾರವಾರದ ಸಮೃದ್ಧ ನಾಯ್ಕ್ ತೃತೀಯ ಸ್ಥಾನ ಪಡೆದರು. ಮುಂದಿನ ವರ್ಷ ಕದಂಬೋತ್ಸವದಲ್ಲಿ ಅಂತರರಾಷ್ಟೀಯ ಮಟ್ಟದ ಮ್ಯಾರಥಾನ್‌ ಆಯೋಜಿಸಲಾಗುವುದು. ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟೀಯ ಮಟ್ಟದ ಮ್ಯಾರಥಾನ್ ಪಟುಗಳಿಗೆ ಆಹ್ವಾನಿಸಲಾಗುವುದು' ಎಂದು ಜಿಲ್ಲಾಧಿಕಾರಿ ಡಾ.ಕೆ ಹರೀಶಕುಮಾರ್ ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.