ETV Bharat / state

ನೆರೆ ಸಂತ್ರಸ್ತರಿಗೆ ಮಿಡಿದ ಹುಬ್ಬಳ್ಳಿಯ ವೈದ್ಯ ದಂಪತಿ: ಸಾವಿರಾರು ನಿರಾಶ್ರಿತರಿಗೆ ಫ್ರೀ ಟ್ರೀಟ್​ಮೆಂಟ್​ - ವೈದ್ಯ ದಂಪತಿ

ಹುಬ್ಬಳ್ಳಿಯ ವೈದ್ಯ ದಂಪತಿ ಉತ್ತರ ಕನ್ನಡ ಜಿಲ್ಲೆಯ ನೆರೆ ಪೀಡಿತ ಗ್ರಾಮಗಳ ಸಂತ್ರಸ್ತರಿಗೆ ನೆರವು ನೀಡಿದ್ದಾರೆ. ಸುಮಾರು 3 ಸಾವಿರ ನಿರಾಶ್ರಿತರಿಗೆ ಅಗತ್ಯ ವಸ್ತುಗಳ ಜತೆಗೆ ಆರೋಗ್ಯ ತಪಾಸಣೆ ಜೊತೆಗೆ ಔಷಧಿಯನ್ನು ವಿತರಿಸಿ ಮಾನವೀಯತೆ ಮೆರೆದಿದ್ದಾರೆ.

ಹುಬ್ಬಳ್ಳಿಯ ವೈದ್ಯ ದಂಪತಿಯಿಂದ ಉತ್ತರ ಕನ್ನಡ ನೆರೆ ಸಂತ್ರಸ್ತರಿಗೆ ನೆರವು
author img

By

Published : Aug 29, 2019, 1:25 PM IST

ಹುಬ್ಬಳ್ಳಿ: ವೃತ್ತಿಯಲ್ಲಿ ವೈದ್ಯರಾಗಿರುವ ಡಾ. ರಾಮಚಂದ್ರ ಕಾರಟಗಿ, ಡಾ.ವೀಣಾ ಕಾರಟಗಿ ಅವರು ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಮೈನಳ್ಳಿ, ಎರೆಬೈಲು ಗ್ರಾಮದ ನೆರೆ ಸಂತ್ರಸ್ತರ ನೋವಿಗೆ ಸ್ಪಂದಿಸಿದ್ದಾರೆ.

ಹುಬ್ಬಳ್ಳಿಯ ವೈದ್ಯ ದಂಪತಿಯಿಂದ ಉತ್ತರ ಕನ್ನಡ ನೆರೆ ಸಂತ್ರಸ್ತರಿಗೆ ನೆರವು

ಹುಬ್ಬಳ್ಳಿ ಕಿಮ್ಸ್​ ಆಸ್ಪತ್ರೆಯಲ್ಲಿ ವೈದ್ಯರಾಗಿರುವ ಇವರು, ಸ್ವತಃ ತಾವೇ ಸಂತ್ರಸ್ತರ ಪ್ರದೇಶಗಳಿಗೆ ಭೇಟಿ ನೀಡಿ, ಪರಿಹಾರ ವಂಚಿತ ಗ್ರಾಮಗಳನ್ನು ಗುರುತಿಸಿದ್ದಾರೆ. ಇದರೊಂದಿಗೆ ಸಂತ್ರಸ್ತರಿಗೆ ಉಚಿತವಾಗಿ ಔಷಧಿ ಹಾಗೂ ತಪಾಸಣೆ ಜೊತೆಗೆ ದಿನ ಬಳಿಕೆಯ ವಸ್ತುಗಳಾದ ಬಕೆಟ್, ಚಾಪೆ, ಹೊದಿಕೆ, ಅಕ್ಕಿ, ಸಕ್ಕರೆ ಹೀಗೆ ದಿನ ಬಳಕೆಯ ವಸ್ತುಗಳನ್ನು ವಿತರಿಸಿದ್ದಾರೆ.

ಶಾಲಾ ಮಕ್ಕಳಿಗೆ ಬ್ಯಾಗ್, ಪುಸ್ತಕಗಳನ್ನು ಸಹ ವಿತರಿಸಿದ್ದಾರೆ.‌ ಈ ವೈದ್ಯ ದಂಪತಿ ಸೇವೆಗೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ.

Intro:ಹುಬ್ಬಳ್ಳಿ-03

ಸತತವಾದ ಮಳೆಯಿಂದ ಬದುಕು ಬೀದಿಗೆ ನಿಂತಿದೆ. ನೆರೆ ನಿರಾಶ್ರಿತರ ನೆರವಿಗೆ ನಾಡಿನ ಸಹಹೃದರು ಸ್ಪಂದಿಸುತ್ತಿದ್ದಾರೆ. ಅವರಂತೆ ನಗರದ ವೈದ್ಯ ದಂಪತಿ‌ ಕೂಡ ನಿರಾಶ್ರಿತರ ನೆರವಿಗೆ ತಮ್ಮದೆಯಾದ ರೀತಿಯಲ್ಲಿ ಸಹಾಯ ಮಾಡುತ್ತಿದ್ದಾರೆ.‌
ಹೌದು ನೆರೆ ನಿರಾಶ್ರಿತರ ನೆರವಿಗೆ ದಾವಿಸಿದ ಇವರು ಕಾರಟಗಿ‌ ದಂಪತಿ. ವೃತ್ತಿಯಲ್ಲಿ ವೈದ್ಯರಾದ ಕಾರಟಗಿ ವೈದ್ಯ ದಂಪತಿಗಳು ಡಾ.ರಾಮಚಂದ್ರ ಕಾರಟಗಿ ಹಾಗೂ ವೀಣಾ ಕಾರಟಗಿ ನೆರವಾಗದೆ ಇರುವಂತಹ ಕೆಲವೊಂದು ಪ್ರದೇಶದಲ್ಲಿ ತಮ್ಮ ಸ್ವಂತ ದುಡ್ಡಿನಿಂದ ನೆರೆಸಂತ್ರಸ್ತರ ಸೇವೆಯನ್ನು ಸಂತೋಷದಿಂದ ಮಾಡುತ್ತಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ
ಮುಂಡಗೋಡ ತಾಲೂಕಿನ ಮೈನಳ್ಳಿ ಮತ್ತು ಎರೆಬೈಲು ಗ್ರಾಮದಲ್ಲಿ ತಮ್ಮ ಆಸ್ಪತ್ರೆಯ ವತಿಯಿಂದ ನೆರೆ ಸಂತ್ರಸ್ತರಿಗೆ ಉಚಿತವಾಗಿ ತಪಾಸಣೆ ಜೊತೆಗೆ ಉಚಿತ ಔಷಧಿಗಳನ್ನು ಕೊಡುತ್ತಾ ಸಮಾಜದ ಕೆಲಸವನ್ನು ಮಾಡುತ್ತಿದ್ದಾರೆ.

ಮುಂಡಗೋಡ್ ತಾಲೂಕಿನ ಕೆಲವು ಗ್ರಾಮಗಳಿಗೆ ಭೇಟಿ ನೀಡಿದ ಈ ದಂಪತಿಗಳು ಸುಮಾರು 2000 ರಿಂದ 3000 ಸಾವಿರ ಜನಕ್ಕೆ ಉಚಿತವಾಗಿ ಔಷಧಿ ಹಾಗೂ ತಪಾಸಣೆ ನಡೆಸಿದರು. ಜೊತೆಗೆ ನೆರೆಸಂತ್ರಸ್ತರಿಗೆ ಅನುಕೂಲ ವಾಗುವ ನಿಟ್ಟಿನಲ್ಲಿ ದಿನ ಬಳಿಕೆಯ ವಸ್ತುಗಳಾದ ಬಕೆಟ್,ಚಾಪೆ,ಹೊದಿಕೆ,ಅಕ್ಕಿ,ಸಕ್ಕರೆ,ಹೀಗೆ ದಿನ ಬಳಕೆಯ ವಸ್ತುಗಳು ಹಾಗೂ ಶಾಲಾ ಮಕ್ಕಳಿಗೆ ಬ್ಯಾಗ್ ಪುಸ್ತಕಗಳನ್ನು ವಿತರಿಸಿದ್ದಾರೆ.‌ ಈ ವೈದ್ಯ ದಂಪತಿ ಸೇವೆಗೆ ಸಾರ್ವಜನಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.‌Body:H B GaddadConclusion:Etv hubli
ETV Bharat Logo

Copyright © 2025 Ushodaya Enterprises Pvt. Ltd., All Rights Reserved.