ETV Bharat / state

ಟೋಲ್ ​ಗೇಟ್​ನಲ್ಲಿ ಸ್ಥಳೀಯರಿಗೆ ರಿಯಾಯಿತಿ ನೀಡಿ: ಬೈಂದೂರು ಶಾಸಕ

ಭಟ್ಕಳ ತಾಲೂಕಿನ ಗಡಿ ಭಾಗದ ಟೋಲ್​ ಗೇಟ್​ನಲ್ಲಿ 10 ಕಿ.ಮೀ.ವರೆಗೆ ಸ್ಥಳೀಯರಿಗೆ ರಿಯಾಯಿತಿ ನೀಡಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು. ಹೆದ್ದಾರಿ ಹೋರಾಟ ಸಮಿತಿ ಶಿರೂರು, ಭಟ್ಕಳದ ಸಾರ್ವಜನಿಕರು ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಟೋಲ್ ಚಲೋ ಅಭಿಯಾನ ಮಾಡಲಾಯಿತು.

author img

By

Published : Oct 30, 2019, 8:58 PM IST

ಭಟ್ಕಳ ತಾಲೂಕಿನ ಗಡಿ ಭಾಗದ ಟೋಲ್​ಗೇಟ್

ಕಾರವಾರ: ಭಟ್ಕಳ ತಾಲೂಕಿನ ಗಡಿ ಭಾಗದ ಟೋಲ್​ ಗೇಟ್​ನಲ್ಲಿ 10 ಕಿ.ಮೀ.ವರೆಗೆ ಸ್ಥಳೀಯರಿಗೆ ರಿಯಾಯಿತಿ ನೀಡಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು. ಹೆದ್ದಾರಿ ಹೋರಾಟ ಸಮಿತಿ ಶಿರೂರು, ಭಟ್ಕಳದ ಸಾರ್ವಜನಿಕರು ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಟೋಲ್ ಚಲೋ ಅಭಿಯಾನ ಮಾಡಲಾಯಿತು.

ಭಟ್ಕಳ ತಾಲೂಕಿನ ಗಡಿ ಭಾಗದ ಟೋಲ್​ ಗೇಟ್ ಬಳಿ ಪ್ರತಿಭಟನೆ

ಸಾರ್ವಜನಿಕರ ಪರವಾಗಿ ಬೈಂದೂರು ಶಾಸಕಬೈ ಬಿ.ಎಂ.ಸುಕುಮಾರ ಶೆಟ್ಟಿ ಮನವಿ ನೀಡಿದರು. ಈ ವೇಳೆ ಮಾತನಾಡಿದ ಅವರು, ಬೈಂದೂರು ಕ್ಷೇತ್ರ ಸೇರಿದಂತೆ ಕಾರವಾರದಿಂದ ಕುಂದಾಪುರದವರೆಗೆ ಸಂಪೂರ್ಣ ಕಳಪೆ ಕಾಮಗಾರಿ ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಹೆದ್ದಾರಿ ಕಾಮಗಾರಿ ಅವ್ಯವಸ್ಥೆಯಿಂದಾಗಿ ನೂರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಸಾರ್ವಜನಿಕರ ಬೇಡಿಕೆಗಳನ್ನು ಪೂರೈಸಿದ ಬಳಿಕ ಟೋಲ್ ಆರಂಭಿಸಬೇಕು. ಇಲ್ಲವಾದರೆ ಯಾವುದೇ ಕಾರಣಕ್ಕೂ ಟೋಲ್ ಆರಂಭ ಮಾಡಲು ಬಿಡುವುದಿಲ್ಲ ಎಂದು ಗುಡುಗಿದರು.

ಇನ್ನು ಇದೇ ವೇಳೆ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಅವ್ಯವಸ್ಥೆಯಿಂದ ಕೂಡಿದೆ. ಮಳೆಗಾಲದಲ್ಲಿ ವಾಹನ ಸವಾರರು ಪರದಾಡುವಂತಾಗಿದೆ ಎಂದರು. ನಿಗದಿಪಡಿಸಿದ ಸ್ಥಳಗಳಲ್ಲಿ ಸರ್ಕಲ್‌ ಹಾಗೂ ಡಿವೈಡರ್‌ಗಳನ್ನು ಅಳವಡಿಸದಿರುವುದು ಅಪಘಾತಕ್ಕೆ ಕಾರಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Intro:ಭಟ್ಕಳ: ತಾಲೂಕಿನ ಗಡಿ ಭಾಗದಲ್ಲಿ ನಿರ್ಮಿಸಲಾದ ಟೋಲ್ ಗೇಟ್ ನಲ್ಲಿ 10 ಕಿ.ಮಿ ವರೆಗೆ ಸ್ಥಳೀಯರಿಗೆ ರಿಯಾಯಿತಿ ನೀಡಬೇಕು ಸರ್ವಿಸ್ ರಸ್ತೆ ಪೂರ್ಣಗೊಳಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಆಗ್ರಹಿಸಿ ಹೆದ್ದಾರಿ ಹೋರಾಟ ಸಮಿತಿ ಶಿರೂರು, ಭಟ್ಕಳದ ಸಾರ್ವಜನಿಕರು ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಬುಧವಾರದಂದು ಟೋಲ್ ಚಲೋ ಅಭಿಯಾನ ಪ್ರತಿಭಟನೆ ಯನ್ನು ನಡೆಸಲಾಯಿತುBody:ಭಟ್ಕಳ: ತಾಲೂಕಿನ ಗಡಿ ಭಾಗದಲ್ಲಿ ನಿರ್ಮಿಸಲಾದ ಟೋಲ್ ಗೇಟ್ ನಲ್ಲಿ 10 ಕಿ.ಮಿ ವರೆಗೆ ಸ್ಥಳೀಯರಿಗೆ ರಿಯಾಯಿತಿ ನೀಡಬೇಕು ಸರ್ವಿಸ್ ರಸ್ತೆ ಪೂರ್ಣಗೊಳಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಆಗ್ರಹಿಸಿ ಹೆದ್ದಾರಿ ಹೋರಾಟ ಸಮಿತಿ ಶಿರೂರು, ಭಟ್ಕಳದ ಸಾರ್ವಜನಿಕರು ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಬುಧವಾರದಂದು ಟೋಲ್ ಚಲೋ ಅಭಿಯಾನ ಪ್ರತಿಭಟನೆ ಯನ್ನು ನಡೆಸಲಾಯಿತು

ಸಾರ್ವಜನಿಕರ ಪರವಾಗಿ ಮನವಿ ನೀಡಿ ಮಾತನಾಡಿದ ಬೈಂದೂರು ಶಾಸಕ ಬಿ.ಎಮ್.ಸುಕುಮಾರ ಶೆಟ್ಟಿ ಹೆದ್ದಾರಿ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿ ಮಾತನಾಡಿ ಬೈಂದೂರು ಕ್ಷೇತ್ರ ಸೇರಿದಂತೆ ಕಾರವಾರದಿಂದ ಕುಂದಾಪುರದವರೆಗೆ  ಐ.ಆರ್.ಬಿ ಕಂಪೆನಿ ಸಂಪೂರ್ಣ ಕಳಪೆ ಕಾಮಗಾರಿ ನಡೆದಿದೆ.ಹೆದ್ದಾರಿ ಕಾಮಗಾರಿ ಅವ್ಯವಸ್ಥೆಯಿಂದ ನೂರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ.ಸಾರ್ವಜನಿಕರ ಬೇಡಿಕೆಗಳಿಗೆ ಸ್ಪಂಧಿಸಿ ಪೂರ್ಣಗೊಳಿಸಿದ ಬಳಿಕ ಟೋಲ್ ಆರಂಭಿಸಬೇಕು.ಇಲ್ಲವಾದರೆ ಯಾವುದೇ ಕಾರಣಕ್ಕೂ ಟೋಲ್ ಆರಂಭ ಮಾಡಲು ಬಿಡುವುದಿಲ್ಲ ಎಂದು ಗುಡುಗಿದರು.

ಬೈಟ್:  ಬಿ.ಎಮ್.ಸುಕುಮಾರ ಶೆಟ್ಟಿ ಬೈಂದೂರು

ಶಾಸಕ(ವೈಟ್ ಶರ್ಟ್)

ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಮಾತನಾಡಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸಂಪೂರ್ಣ ಅವ್ಯವಸ್ಥೆಯಿಂದ ಕೂಡಿದೆ ಮಳೆಗಾಲದಲ್ಲಿ ವಾಹನ ಸವಾರರು ತೀವೃ ಸಮಸ್ಯೆ ಎದುರಿಸಬೇಕಾಗಿದೆ.ನಿಗಧಿಪಡಿಸಿದ ಸ್ಥಳಗಳಲ್ಲಿ ಸರ್ಕಲ್‌ಗಳನ್ನು,ಡಿವೈಡರ್‌ಗಳನ್ನು ಅಳವಡಿಸದಿರುವುದು ಅಪಘಾತ ಸಂಖ್ಯೆ ಇನ್ನಷ್ಟು ಹೆಚ್ಚಲು ಕಾರಣವಾಗಿದೆ.ಹೀಗಾಗಿ ಸಾರ್ವಜನಿಕರಿಗೆ ಅಗತ್ಯವಾಗಿರುವ ಸರ್ವಿಸ್ ರಸ್ತೆಗಳನ್ನು ಪೂರ್ಣಗೊಳಿಸಿ ಟೋಲ್ ಆರಂಭಿಸಬೇಕು.ಒಂದೊಮ್ಮೆ ಬೇಡಿಕೆ ಈಡೇರಿಸದಿದ್ದಲ್ಲಿ ಹೆಮ್ಮಾಡಿಯಿಂದ ಶಿರೂರಿನವರೆಗೆ ಪಾದಯಾತ್ರೆ ಮಾಡುತ್ತೇವೆ ಎಂದರು.

ಬೈಟ್: ಕೆ.ಗೋಪಾಲ ಪೂಜಾರಿ ಮಾಜಿ ಶಾಸಕ(ಲೈಟ್ ರೋಜ್ ಕಲರ್ ಶರ್ಟ್)

30 ರೂಪಾಯಿ ಬಿರಿಯಾನಿ ತಿನ್ನಲು 70 ರೂಪಾಯಿ ಟೋಲ್ ನೀಡಬೇಕು: ಶಿರೂರು ಮುಂತಾದ ಜನರು ವ್ಯಾಪಾರ,ಶಾಫಿಂಗ್ ಸೇರಿದಂತೆ ಬಹುತೇಕ ಜನರು ಭಟ್ಕಳಕ್ಕೆ ತೆರಳುತ್ತಾರೆ ಮಾತ್ರವಲ್ಲದೆ ಉತ್ತರ ಕನ್ನಡದ ನಂಟನ್ನು ಹೊಂದಿದ್ದಾರೆ.ಭಟ್ಕಳದ ಹೋಟೆಲ್‌ನಲ್ಲಿ ಕುಟುಂಬದ ಜೊತೆ ಊಟ ಮಾಡಬೇಕೆಂದು ಇಚ್ಚಿಸಿದರೆ 30 ರೂಪಾಯಿ ಬಿರಿಯಾನಿ ತಿನ್ನಲು 70 ರೂಪಾಯಿ ಟೋಲ್ ನೀಡಬೇಕಾಗಿದೆ.ಮನೆಯಿಂದ ತೋಟಕ್ಕೆ ಹೋಗಬೇಕಾದರು ಟೋಲ್ ಕೊಡಬೇಕಾಗುತ್ತದೆ.ಹೀಗಾಗಿ ಸ್ಥಳೀಯ 10 ಕಿ.ಮಿ ವರೆಗೆ ಯಾವುದೇ ಕಾರಣಕ್ಕೂ ಸುಂಕ ವಸೂಲಿ ಮಾಡಬಾರದು ಎನ್ನುವ ಅಭಿಪ್ರಾಯ ಸಾರ್ವಜನಿಕರಿಂದ ಕೇಳಿ ಬಂದಿದೆ.

ಈ ಸಂದರ್ಭದಲ್ಲಿ ಐ.ಆರ್.ಬಿ ಅಧಿಕಾರಿಗಳಿಗೆ ಮನವಿ ನೀಡಲಾಯಿತು.ಟೋಲ್ ಚಲೋ ಅಭಿಯಾನದಲ್ಲಿ; ಭಟ್ಕಳ, ಶಿರೂರು ಹಾಗೂ ಬೈಂದೂರಿನ ವಿವಿಧ ಸಂಘಟನೆಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರುConclusion:ಉದಯ ನಾಯ್ಕ ಭಟ್ಕಳ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.