ETV Bharat / state

ಪ್ರವಾಸಿಗರೇ ಮಲ್ಪೆ ಬೀಚ್​ ಕಡೆ ಹೋದಿರಾ ಜೋಕೆ...! ಕಾರಣ ಇಲ್ಲಿದೆ ನೋಡಿ - kannadanews

ಪಶ್ಚಿಮ ಕರಾವಳಿಯ ಪ್ರಧಾನ ಆಕರ್ಷಣೆ ಮಲ್ಪೆ ಬೀಚ್. ಆದ್ರೆ ಮುಂಗಾರಿನ ಅಬ್ಬರ, ವಾಯು ಮಾರುತದ ಆರ್ಭಟಕ್ಕೆ ಈ ಬೀಚ್ ಕಣ್ಮರೆಯಾಗಿದೆ. ಇನ್ನೂ ಹತ್ತು ದಿನಗಳ ಕಾಲ ಪ್ರವಾಸಿಗರು ಮಲ್ಪೆ ಬೀಚ್ ನಿಂದ ದೂರವಿದ್ದರೆ ವಾಸಿ ಅಂತಿದಾರೆ ಕಡಲತೀರದ ನಿವಾಸಿಗಳು.

ಬೀಚ್​ನ್ನೇ ನುಂಗಿ ಹಾಕಿದ ಬೃಹತ್​ ಸಮುದ್ರದಲೆಗಳು
author img

By

Published : Jun 14, 2019, 2:45 PM IST

ಉಡುಪಿ: ಜಿಲ್ಲೆಯ ಪಶ್ಚಿಮ ಕರಾವಳಿಯ ಪ್ರಧಾನ ಆಕರ್ಷಣೆ ಮಲ್ಪೆ ಬೀಚ್. ಆದ್ರೆ ಮುಂಗಾರಿನ ಅಬ್ಬರ, ವಾಯು ಮಾರುತದ ಆರ್ಭಟಕ್ಕೆ ಈ ಬೀಚ್ ಕಣ್ಮರೆಯಾಗಿದೆ. ಇನ್ನೂ ಹತ್ತು ದಿನಗಳ ಕಾಲ ಪ್ರವಾಸಿಗರು ಮಲ್ಪೆ ಬೀಚ್ ನಿಂದ ದೂರವಿದ್ದರೆ ವಾಸಿ ಅಂತಿದಾರೆ ಕಡಲತೀರದ ನಿವಾಸಿಗಳು.

ಬೀಚ್​ನ್ನೇ ನುಂಗಿ ಹಾಕಿದ ಬೃಹತ್​ ಸಮುದ್ರದಲೆಗಳು

ಈ ರಾಕ್ಷಸ ಗಾತ್ರದ ಕಡಲಿನ ಅಲೆಗಳು ಮಲ್ಪೆ ಬೀಚ್ ಅನ್ನೇ ನುಂಗಿಹಾಕಿವೆ. ಸುಮಾರು 30 ಅಡಿಗಳಷ್ಟು ಬೀಚ್​ನ ಭೂಭಾಗ ಸಮುದ್ರ ಪಾಲಾಗಿದೆ. ಕಡಲತಡಿಯಲ್ಲಿ ಲೋಡುಗಟ್ಟಲೇ ಕಸದ ರಾಶಿ ಬಿದ್ದಿದೆ. ಕರಾವಳಿ ತೀರಕ್ಕೆ ಮುಂಗಾರು ಅತಿಯಾದ ಅಬ್ಬರದಿಂದಲೇ ಪ್ರವೇಶಿಸಿದೆ. ಕಳೆದ ಎರಡು ದಿನಗಳಿಂದ ಮಾರುತಗಳ ಆರ್ಭಟ ಜೋರಾಗಿತ್ತು. ಇದೀಗ ಜಬರ್ ದಸ್ತ್ ಮಳೆಯ ಸಹಿತ ಮುಂಗಾರು ಎಂಟ್ರಿಕೊಟ್ಟಿದೆ. ಇದಕ್ಕೆಲ್ಲಾ ಕಾರಣ ಗುಜರಾತ್​ನಲ್ಲಿ ಕಾಣಿಸಿಕೊಂಡಿರುವ ‘ವಾಯು’ ಚಂಡಮಾರುತ. ಈ ಚಂಡಮಾರುತದ ಪ್ರಭಾವ ಸ್ವಲ್ಪ ಪ್ರಮಾಣದಲ್ಲಿ ಮಲ್ಪೆ ಬೀಚ್ ಮೇಲೂ ಉಂಟಾಗುತ್ತಿದ್ದು, ನಾಲ್ಕಾರು ಅಡಿ ಎತ್ತರದ ಅಲೆಗಳು ನುಗ್ಗಿ ಬರುತ್ತಿವೆ.

ಮುಂಗಾರಿನ ಪೂರ್ವ ಸೂಚನೆ ಇಲ್ಲದೆ ಈಗಲೂ ನೂರಾರು ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಆದರೆ ಕಡಲಿನ ಆರ್ಭಟ ಕಂಡು ವಾಪಸಾಗುತ್ತಿದ್ದಾರೆ. ಕುತೂಹಲದಿಂದ ಬರುವ ಪ್ರವಾಸಿಗರನ್ನು ತಡೆಯೋದೇ ಸ್ಥಳೀಯರಿಗೆ ದೊಡ್ಡ ತಲೆನೋವಾಗಿದೆ. ಹಾಗಾಗಿ ಸದ್ಯ 10 ದಿನಗಳ ಕಾಲ ಪ್ರವಾಸಿಗರು ಇತ್ತಕಡೆ ಮುಖ ಮಾಡದಿರುವುದೇ ಒಳ್ಳೇದು ಅನ್ನುತ್ತೆ ಜಿಲ್ಲಾಡಳಿತ.

ಕೇವಲ ಮಲ್ಪೆ ಮಾತ್ರವಲ್ಲ, ಪಕ್ಕದ ಪಡುಕೆರೆ ಬೀಚ್​ನಲ್ಲೂ ಅಲೆಗಳು ಧುಮ್ಮಿಕ್ಕಿ ಹರಿಯುತ್ತಿದೆ. ಈ ಭಾಗದಲ್ಲಿ ಕಡಲಕೊರೆತ ಜೋರಾಗಿದ್ದು ಮನೆಗಳು ಅಪಾಯದಲ್ಲಿವೆ. ಸಮುದ್ರದ ನೀರು ರಸ್ತೆಯತ್ತ ಧುಮ್ಮಿಕ್ಕಿ ಬರುತ್ತಿದೆ. ಉಡುಪಿಯಲ್ಲಿ ಧಾರಾಕಾರ ಮಳೆಯಾಗಿದ್ದು, ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಇನ್ನೂ ಮೂರು ದಿನಗಳ ಕಾಲ ಇದೇ ವಾತಾವರಣ ಮುಂದುವರಿಯುವ ಸಾಧ್ಯತೆಯಿದೆ.

Intro:Filename:udp_air cyclone_beach no tourist_pkg

Anchor-ವಿಶ್ವಪ್ರಸಿದ್ದ ಮಲ್ಪೆ ಬೀಚ್ ಗೆ ಸದ್ಯ ಕಾಲಿಡದೇ ಇರೋದೇ ಸೇಫ್, ಹೌದು ಉಡುಪಿ ಜಿಲ್ಲೆಯ ಪಶ್ಚಿಮ ಕರಾವಳಿಯ ಪ್ರಧಾನ ಆಕರ್ಷಣೆ ಮಲ್ಪೆ ಬೀಚ್, ಆದರೆ ಮುಂಗಾರಿನ ಅಬ್ಬರ, ವಾಯು ಮಾರತದ ಆರ್ಭಟಕ್ಕೆ ಮಲ್ಪೆ ಬೀಚ್ ಕಣ್ಮರೆಯಾಗಿದೆ. ಇನ್ನೂ ಹತ್ತು ದಿನಗಳ ಕಾಲ ಪ್ರವಾಸಿಗರು ಮಲ್ಪೆ ಬೀಚ್ ನಿಂದ ದೂರವಿದ್ದರೆ ವಾಸಿ ಅಂತಿದಾರೆ ಕಡಲತೀರದ ನಿವಾಸಿಗಳು!

V1-ಈ ರಾಕ್ಷಸ ಗಾತ್ರದ ಕಡಲಿನ ಅಲೆಗಳನ್ನು ನೋಡಿ! ಈ ಭಯಂಕರ ಅಲೆಗಳು ಮಲ್ಪೆ ಬೀಚ್ ನ್ನೇ ನುಂಗಿಹಾಕಿದೆ. ಸುಮಾರು ಮೂವತ್ತು ಅಡಿಗಳಷ್ಟು ಬೀಚ್ ನ ಭೂಭಾಗ ಸಮುದ್ರ ಪಾಲಾಗಿದೆ. ಕಡಲತಡಿಯಲ್ಲಿ ಲೋಡುಗಟ್ಟಲೆ ಕಸ ರಾಶಿಬಿದ್ದಿದೆ. ಕರಾವಳಿ ತೀರಕ್ಕೆ ಮುಂಗಾರು ಅತಿಯಾದ ಅಬ್ಬರದಿಂದಲೇ ಪ್ರವೇಶಿಸಿದೆ. ಕಳೆದ ಎರಡು ದಿನಗಳಿಂದ ಮಾರುತಗಳ ಆರ್ಭಟ ಜೋರಿತ್ತು. ಇದೀಗ ಜಬರ್ ದಸ್ತ್ ಮಳೆಯ ಸಹಿತ ಮುಂಗಾರು ಎಂಟ್ರಿಕೊಟ್ಟಿದೆ. ಇದಕ್ಕೆಲ್ಲಾ ಕಾರಣ ಗುಜರಾಥ್ ನಲ್ಲಿ ಕಾಣಿಸಿಕೊಂಡಿರುವ ‘ವಾಯು’ ಚಂಡಮಾರುತ. ಕರ್ನಾಟಕ ಕರಾವಳಿಗೆ ನೇರವಾಗಿ ವಾಯು ಮಾರುತಗಳ ಎಫೆಕ್ಟ್ ಕಮ್ಮಿಯಾದರೂ, ಪರೋಕ್ಷವಾದ ಪರಿಣಾಮ ಇದ್ದೇ ಇದೆ. ಹಾಗಾಗಿ ಮಲ್ಪೆ ಬೀಚ್ ಗೆ ನಾಲ್ಕಾರು ಅಡಿ ಎತ್ತರದ ಅಲೆಗಳು ಧಾವಿಸಿ ಬರುತ್ತಿವೆ.

Byte-ಮಧು.....ಲೈಪ್ ಗಾರ್ಡ್

V2-ಹೇಳಿಕೇಳಿ ಮಲ್ಪೆ ಅಂದ್ರೆ ಪ್ರವಾಸಿಗಳಿಗೆ ಅಚ್ಚುಮೆಚ್ಚು. ಮುಂಗಾರಿನ ಪೂರ್ವ ಸೂಚನೆ ಇಲ್ಲದೆ ಈಗಲೂ ನೂರಾರು ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಆದರೆ ಕಡಲಿನ ಆರ್ಭಟ ಕಂಡು ವಾಪಾಸಾಗುತ್ತಿದ್ದಾರೆ. ಕುತೂಹಲದಿಂದ ಬರುವ ಪ್ರವಾಸಿಗರನ್ನು ತಡೆಯೋದೇ ಸ್ಥಳೀಯರಿಗೆ ದೊಡ್ಡ ತಲೆನೋವಾಗಿದೆ. ಹಾಗಾಗಿ ಸದ್ಯ 10 ದಿನಗಳ ಕಾಲ ಪ್ರವಾಸಿಗರು ಇತ್ತಕಡೆ ಮುಖ ಮಾಡ್ದೆ ಇದ್ರೆ ಒಳ್ಳೇದು ಅನ್ನುತ್ತೆ ಜಿಲ್ಲಾಡಳಿತ. ಕೇವಲ ಮಲ್ಪೆ ಮಾತ್ರವಲ್ಲ ಪಕ್ಕದ ಪಡುಕೆರೆ ಬೀಚ್ ನಲ್ಲೂ ಅಲೆಗಳು ಧುಮ್ಮಿಕ್ಕಿ ಹರಿಯುತ್ತಿದೆ. ಈ ಭಾಗದಲ್ಲಿ ಕಡಲಕೊರೆತ ಜೋರಾಗಿದ್ದು, ಪರಿಸರದ ಮನೆಗಳು ಅಪಾಯದಲ್ಲಿವೆ. ಸಮುದ್ರದ ನೀರು ರಸ್ತೆಯತ್ತ ಧುಮ್ಮುಕ್ಕಿ ಬರುತ್ತಿದೆ.

V3_ಬುಧವಾರ ರಾತ್ರಿ ಉಡುಪಿಯಲ್ಲಿ ಧಾರಾಕಾರ ಮಳೆಯಾಗಿದೆ. ಮೊದಲ ಮಳೆಗೆ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದೆ. ಕಳೆದ 12 ಗಂಟೆಗಳಲ್ಲಿ 100 ಮಿಮೀ ಮಳೆಯಾಗಿದೆ. ಸಣ್ಣಪುಟ್ಟ ಹಾನಿಗಳನ್ನು ಹೊರತು ಪಡಿಸಿದರೆ ಹೆಚ್ಚೇನೂ ಅನಾಹುತ ಆಗಿಲ್ಲ. ಇನ್ನೂ ಮೂರು ದಿನಗಳ ಕಾಲ ಇದೇ ವಾತಾವರಣ ಮುಂದುವರಿಯುವ ಎಲ್ಲಾ ಸಾಧ್ಯತೆಗಳಿವೆ.
Body:CycloneConclusion:Cyclone

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.