ತುಮಕೂರು: ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಅಧ್ಯಯನಪೀಠ ಆರಂಭಕ್ಕೆ ತುಮಕೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭೆಯಲ್ಲಿ ಪ್ರಸ್ತಾವನೆ ಸಲ್ಲಿಸಿಸಲಾಗಿದೆ. ನಿನ್ನೆ ತುಮಕೂರು ವಿಶ್ವವಿದ್ಯಾಲಯದಲ್ಲಿ ಉಪಕುಲಪತಿ ವೆಂಕಟೇಶ್ವರಲು ಅವರ ಅಧ್ಯಕ್ಷತೆಯಲ್ಲಿ ನಡೆದ ಸಿಂಡಿಕೇಟ್ ಸಭೆಯಲ್ಲಿ ಈ ಬಗ್ಗೆ ವಿನಯ್ ಪ್ರಸ್ತಾವನೆ ಸಲ್ಲಿಸಿದ್ದಾರೆ. ಅಲ್ಲದೇ ಪ್ರಾರಂಭಿಕವಾಗಿ ಪೀಠ ಚಾಲನೆ ನೀಡಲು ವಿನಯ್ ಅವರು ಒಂದು ಲಕ್ಷ ರೂಗಳನ್ನು ಸಹ ಠೇವಣಿ ಇರಿಸಿದ್ದಾರೆ.
ನಿನ್ನೆ ಸಿಂಡಿಕೇಟ್ ಸಭೆಯಲ್ಲಿ ಒಪ್ಪಿಯಾದ ನಿರ್ಧಾರದ ಮುಂದೆ ಆರ್ಥಿಕ ಸಮಿತಿಗೆ ಹೋಗುತ್ತದೆ. ಅಲ್ಲಿಂದ ಒಪ್ಪಿಗೆ ಬಂದ ನಂತರ ಶೈಕ್ಷಣಿಕ ಸಮಿತಿ ಒಪ್ಪಿಗೆ ಪಡೆದು ಸರ್ಕಾರದಿಂದ ಅಧಿಕೃತ ಅನುಮೋದನೆ ಪಡೆದು ಪೀಠ ಆರಂಭಿಸಲಾಗುತ್ತದೆ. ವಿದ್ಯಾರ್ಥಿಗಳಿಗೆ ಸಂಶೋಧನೆ ಅಗತ್ಯವಾದ ಪರಿಕರಗಳನ್ನು ಒದಗಿಸಲಾಗುವುದು ಎಂದು ಸಿಂಡಿಕೇಟ್ ಸದಸ್ಯ ವಿನಯ್ ತಿಳಿಸಿದರು.
75ನೇ ವರ್ಷದ ಸ್ವಾತಂತ್ರ್ಯದ ಹಿನ್ನೆಲೆಯ ಫ್ಲೆಕ್ಸ್ನಲ್ಲಿ ಇದ್ದ ಸಾವರ್ಕರ್ ಫೋಟೋ ಹಾಕಿದ್ದಕ್ಕೆ ಹರಿದು ಹಾಕಿ ಗಲಭೆ ಸೃಷ್ಟಿಯಾಗಿತ್ತು. ನಂತರ ರಾಜಕೀಯ ಬೆಳವಣಿಗೆ ಪಡೆದು ಸಾವರ್ಕರ್ ಅವರನ್ನು ಸ್ವಾತಂತ್ರ್ಯ ಹೋರಾಟಗಾರ ಅಲ್ಲ ಎಂದು ಹೇಳಿಕೆಗಳು ಹರಿದಾಡಿದ್ದವು.
ಈ ಬೆಳವಣಿಗೆಯ ನಡುವೆ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ಗಣೇಶೋತ್ಸವದಲ್ಲಿ ಸಾವರ್ಕರ್ ಫೋಟೋ ಇಡುವುದಾಗಿ ಮಾಧ್ಯಮ ಹೇಳಿಕೆಯನ್ನು ನೀಡಿ ಕರೆಕೊಟ್ಟರು. ಈ ಹೇಳಿಕೆ ಬೆನ್ನಲ್ಲೇ ಗಣಪತಿ ಉತ್ಸವದಲ್ಲಿ ಸಾವರ್ಕರ್ ಫೋಟೋ ಇಡುವ ಅಭಿಯಾವು ರಾಜ್ಯಾದ್ಯಂತ ಆರಂಭವಾಯಿತು. ಚೌತಿಗೆ ಶುಭಕೋರುವ ಫ್ಲೆಕ್ಸ್ ಮತ್ತು ಬ್ಯಾನರ್ಗಳಲ್ಲಿ ಸಾವರ್ಕರ್ ಫೋಟೋಗಳನ್ನು ಹಾಕಲಾಗುತ್ತಿದೆ.
ಇದನ್ನೂ ಓದಿ : EXCLUSIVE: ಸಿದ್ದಗಂಗಾ ಮಠಕ್ಕೆ ವೈದ್ಯಕೀಯ ಕಾಲೇಜು ಮಂಜೂರು ಮಾಡಿದ ಕೇಂದ್ರ ಸರ್ಕಾರ