ETV Bharat / state

ತುಮಕೂರು: ಕೊರೊನಾ ವಾರಿಯರ್ಸ್​​ಗೆ ಆನ್​​ಲೈನ್ ತರಬೇತಿ - Online training for the Corona Warriors

ತುಮಕೂರು ಮಹಾನಗರಪಾಲಿಕೆ ವತಿಯಿಂದ ಕೊರೊನಾ ವಾರಿಯರ್ಸ್ ಯಾವೆಲ್ಲಾ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು ಎನ್ನುವ ಕುರಿತು ಆನ್​​ಲೈನ್ ತರಬೇತಿ ನೀಡಲಾಯಿತು.

Tumkur
Tumkur
author img

By

Published : Jul 20, 2020, 4:28 PM IST

ತುಮಕೂರು: ಕೊರೊನಾ ವೈರಸ್ ಅನ್ನು ಪರಿಣಾಮಕಾರಿಯಾಗಿ ತಡೆಗಟ್ಟುವ ಕುರಿತು ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕರ ನೇತೃತ್ವದಲ್ಲಿ ಕೊರೊನಾ ವಾರಿಯರ್ಸ್​​ಗೆ ಆನ್ ಲೈನ್ ತರಬೇತಿ ನೀಡಲಾಯಿತು.

ನಗರದ ಬಾಲಭವನದಲ್ಲಿ ಮಹಾನಗರಪಾಲಿಕೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಈ ತರಬೇತಿ ಕಾರ್ಯಕ್ರಮದಲ್ಲಿ ಶಾಸಕ ಜ್ಯೋತಿಗಣೇಶ್, ಮಹಾನಗರಪಾಲಿಕೆಯ ಆಯುಕ್ತರು, ಸದಸ್ಯರು, ಅಧಿಕಾರಿಗಳು ಮತ್ತು ಕೊರೊನಾ ವಾರಿಯರ್ಸ್​​ ಪಾಲ್ಗೊಂಡಿದ್ದರು.

ವಾರ್ಡ್​​ನಲ್ಲಿರುವ ಪ್ರತಿ ಕೋವಿಡ್ ಸೋಂಕಿತರ ಮಾಹಿತಿಯನ್ನು ತಕ್ಷಣ ಸಂಗ್ರಹಿಸುವುದು, ವ್ಯಕ್ತಿ ಮತ್ತು ಕುಟುಂಬದವರಿಗೆ ಧೈರ್ಯ ನೀಡುವುದು ಮತ್ತು ನಿಮ್ಮ ಜೊತೆಗೆ ನಾವಿದ್ದೇವೆಂಬ ಭರವಸೆ ಕೊಡುವುದು, ರೋಗದ ಲಕ್ಷಣಗಳಿದ್ದವರನ್ನು ಸೂಕ್ತ ಸಮಯದಲ್ಲಿ ಆ್ಯಂಬುಲೆನ್ಸ್ ಮುಖಾಂತರ ಕೋವಿಡ್ ಆರೋಗ್ಯ ಕೇಂದ್ರ ಅಥವಾ ನಿಗದಿತ ಆಸ್ಪತ್ರೆಗಳಲ್ಲಿ ದಾಖಲಾತಿ ಮಾಡುವುದು, ಆಸ್ಪತ್ರೆ ದಾಖಲಾತಿಯಲ್ಲಿ ವಿಳಂಬ ಅಥವಾ ತೊಂದರೆ ಕಂಡು ಬಂದರೆ ತಕ್ಷಣ ಟಾಸ್ಕ್ ಫೋರ್ಸ್‌ ಅಥವಾ ಆರೋಗ್ಯ ಅಧಿಕಾರಿಗಳು, ಜಿಲ್ಲಾಡಳಿತದ ಗಮನಕ್ಕೆ ತರುವುದು. ರೋಗದ ಲಕ್ಷಣಗಳು ಇಲ್ಲದವರನ್ನು ಮನೆಯಲ್ಲಿಯೇ ಕ್ವಾರಂಟೈನ್ ಮಾಡುವುದು ಹಾಗೂ ಸೋಂಕಿತರ ಪ್ರಥಮ ಮತ್ತು ದ್ವಿತೀಯ ಸಂಪರ್ಕಿತರನ್ನು ಶೀಘ್ರ ಪತ್ತೆಹಚ್ಚುವುದು, ಪ್ರಥಮ ಸೋಂಕಿತರನ್ನು ಸಂಪೂರ್ಣ ತಪಾಸಣೆಗೆ ಒಳಗಾಗುವಂತೆ ನೋಡಿಕೊಳ್ಳುವುದು, ದ್ವಿತೀಯ ಸಂಪರ್ಕಿತರನ್ನು ಮನೆಯಲ್ಲಿಯೇ ಕ್ವಾರಂಟೈನ್​​ಗೆ ಒಳಪಡಿಸುವುದನ್ನು ಖಾತ್ರಿಗೊಳಿಸುವುದು ಮುಂತಾದ ವಿಚಾರಗಳ ಬಗ್ಗೆ ಕೊರೊನಾ ವಾರಿಯರ್ಸ್​ಗೆ ತಿಳಿಸಲಾಯಿತು.

ಅಲ್ಲದೇ ಸಂಪರ್ಕ ಪತ್ತೆ ಹಚ್ಚುವ ಸಿಬ್ಬಂದಿ ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ತಿಳಿಸಲಾಯಿತು. ಸಂಪರ್ಕಿತ ವ್ಯಕ್ತಿಯಿಂದ ಕನಿಷ್ಠ ಒಂದು ಮೀಟರ್ ಅಂತರ ಕಾಯ್ದುಕೊಳ್ಳುವುದು, ಸಂಪರ್ಕ ಪತ್ತೆ ಹಚ್ಚುವ ತಂಡವು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಆಗಾಗ ಸಾಬೂನು ಬಳಸಿ ಕೈತೊಳೆಯುವುದು ಮತ್ತು ಹ್ಯಾಂಡ್ ಸ್ಯಾನಿಟೈಸರ್ ಬಳಸುವುದು, ಸೋಂಕು ಹರಡದಂತೆ ಮುಂಜಾಗ್ರತಾ ಮತ್ತು ನಿಯಂತ್ರಣ ಕ್ರಮಗಳನ್ನು ಪಾಲಿಸುವ ಬಗ್ಗೆ ತಿಳಿಸಲಾಯಿತು.

ಈ ತರಬೇತಿಯಲ್ಲಿ ಚುನಾಯಿತ ಪ್ರತಿನಿಧಿಗಳು, ನಗರದಲ್ಲಿನ ಸ್ಥಳೀಯ ಸಂಸ್ಥೆಗಳಲ್ಲಿನ ವಾರ್ಡ್ ಮಟ್ಟದ ಕಾರ್ಯಾಚರಣೆ ಪಡೆ ಸದಸ್ಯರು ಮತ್ತು ಆಯಾ ವ್ಯಾಪ್ತಿಯ ಬೂತ್ ಮಟ್ಟದ ಸಮಿತಿಗಳ ಸದಸ್ಯರು ಕೊರೊನಾ ನಿಯಂತ್ರಣ ಮಾಡುವಲ್ಲಿ ಯಾವೆಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದರ ಬಗ್ಗೆ ಅರಿವು ಮೂಡಿಸಲಾಯಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.