ETV Bharat / state

ನಾಲ್ವರು ಅಂತಾರಾಜ್ಯ ಕಳ್ಳರ ಬಂಧನ: ಕೊರಟಗೆರೆ ಪೊಲೀಸರ ಕಾರ್ಯಾಚರಣೆ - ತುಮಕೂರು ಅಪರಾಧ ಸುದ್ದಿ

ಆಂಧ್ರಪ್ರದೇಶ ಮತ್ತು ಕರ್ನಾಟಕದ ವಿವಿಧ ಜಿಲ್ಲೆಯ 6 ಕಡೆಗಳಲ್ಲಿ ಕಳ್ಳತನ ಮಾಡಿದ್ದ 4 ಮಂದಿ ಅಂತಾರಾಜ್ಯ ಕಳ್ಳರನ್ನು ಕೊರಟಗೆರೆ ಪೊಲೀಸರು ಬಂಧಿಸಿದ್ದಾರೆ.

tumkur
ಕೊರಟಗೆರೆ ಪೊಲೀಸರ ಕಾರ್ಯಾಚರಣೆ
author img

By

Published : Jul 19, 2021, 6:57 AM IST

Updated : Jul 19, 2021, 10:09 AM IST

ತುಮಕೂರು: 4 ಮಂದಿ ಅಂತಾರಾಜ್ಯ ಕಳ್ಳರನ್ನು ಕೊರಟಗೆರೆ ಪೊಲೀಸರು ಬಂಧಿಸಿದ್ದು, ಲಕ್ಷಾಂತರ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಶಿರಾ ತಾಲೂಕಿನ ನಟರಾಜ, ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಲೋಕೇಶ್​, ಮಧುಗಿರಿ ತಾಲೂಕು ಬಡವನಹಳ್ಳಿಯ ಹೊನ್ನೇಶ್​, ಬೆಂಗಳೂರು ಮತ್ತು ಮಂಡ್ಯ ನಗರದ ಶಿವಮ್ಮ ಬಂಧಿತ ಆರೋಪಿಗಳು.

ಆಂಧ್ರಪ್ರದೇಶ ಮತ್ತು ಕರ್ನಾಟಕದ ವಿವಿಧ ಜಿಲ್ಲೆಯ 6 ಕಡೆಗಳಲ್ಲಿ ಕಳ್ಳತನ ಮಾಡಿದ್ದ ಖದೀಮರಿಂದ ಲಕ್ಷಾಂತರ ರೂ. ಮೌಲ್ಯದ ವಾಹನ ಹಾಗೂ ಪರಿಕರಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳನ್ನು ಬಂಧಿಸುವಲ್ಲಿ ಕೊರಟಗೆರೆ ಮತ್ತು ಕೋಳಾಲ ಪೊಲೀಸರ ತಂಡ ಯಶಸ್ವಿಯಾಗಿದೆ.

ಕೊರಟಗೆರೆ ಪೊಲೀಸರ ಕಾರ್ಯಾಚರಣೆ

ತೋವಿನಕೆರೆ ಫೋಟೋ ಸ್ಟುಡಿಯೋದಲ್ಲಿ ಕಳ್ಳತನ, ಜಗನ್ನಾಥಪುರದಲ್ಲಿ ಮೇಕೆಗಳ ದೊಡ್ಡಿಯಲ್ಲಿ ಕಳ್ಳತನ, ತುಂಬಾಡಿಯಲ್ಲಿ ಮೇಕೆಗಳ ಕಳ್ಳತನ, ತುಮಕೂರು ತಾಲೂಕು ಕೋರಾ ಗ್ರಾಮದ ಜೆರಾಕ್ಸ್ ಅಂಗಡಿಯಲ್ಲಿ ಕಳವು, ಹಿರಿಯೂರು ತಾಲೂಕು ಜವರೇಗೊಂಡನಹಳ್ಳಿಯ ಫೋಟೋ ಸ್ಟುಡಿಯೋದಲ್ಲಿ ಕಳ್ಳತನ ಮತ್ತು ಆಂಧ್ರಪ್ರದೇಶದ ಮಡಕಶಿರಾದಲ್ಲಿ ರಾಯಲ್ ಎನ್‌ಫೀಲ್ಡ್ ಬೈಕ್ ಕಳ್ಳತನ ಪ್ರಕರಣದಲ್ಲಿ ಈ ಆರೋಪಿಗಳು ಭಾಗಿಯಾಗಿದ್ದರು.

ಕೊರಟಗೆರೆ ಪೊಲೀಸ್ ಠಾಣೆಯಲ್ಲಿ 4 ಪ್ರಕರಣ, ಕೋರಾ ಪೊಲೀಸ್ ಠಾಣೆ, ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆ, ಮಡಕಶಿರಾ ಪೊಲೀಸ್ ಠಾಣೆಯ ತಲಾ ಒಂದು ಪ್ರಕರಣ ದಾಖಲಾಗಿದೆ.

Last Updated : Jul 19, 2021, 10:09 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.