ತುಮಕೂರು: 35ವರ್ಷಗಳ ಬಳಿಕ ತುಮಕೂರು ತಾಲೂಕಿನ ಕೆಸ್ತೂರು ಗ್ರಾಮದ ಕೆರೆಯೊಂದು ಕೋಡಿ ಬಿದ್ದ ಹಿನ್ನೆಲೆ ಗ್ರಾಮಸ್ಥರು ಸಂಭ್ರಮಿಸಿದ್ದಾರೆ.
ನಿರಂತರ ಸುರಿದ ಮಳೆಯಿಂದಾಗಿ ಕೆಸ್ತೂರು ಕೆರೆ 35 ವರ್ಷಗಳ ಬಳಿಕ ಕೋಡಿಬಿದ್ದಿದೆ. ಗ್ರಾಮದ ನೇತಾಜಿ ಬ್ರಿಗೇಡ್ನಿಂದ ಕೋಡಿ ಬಿದ್ದ ಕೆರೆಗೆ ಬಣ್ಣ ಬಣ್ಣದ ವಿದ್ಯುತ್ಗಳಿಂದ ದೀಪಾಲಂಕಾರ ಮಾಡಲಾಗಿದೆ. ಬಳಿಕ ಕೆರೆಯ ಮುಂದೆ ಪಟಾಕಿಗಳನ್ನು ಸಿಡಿಸಿ ಸಂತಸ ವ್ಯಕ್ತಪಡಿಸಿದ್ದಾರೆ.
ಕಳೆದ 35 ವರ್ಷಗಳಿಂದ ಕೆರೆ ಒಮ್ಮೆಯೂ ಭರ್ತಿಯಾಗಿ ಕೋಡಿ ಒಡೆದಿರಲಿಲ್ಲ. ಇದೀಗ ಜಿಲ್ಲೆಯಲ್ಲಿ ನಿರಂತರ ಮಳೆಯಾದ ಹಿನ್ನೆಲೆ ಕೆರೆಕೋಡಿ ಬಿದ್ದಿದೆ.
ಇದನ್ನೂ ಓದಿ: 42 ವರ್ಷಗಳ ನಂತರ ಕೋಡಿ ಬಿದ್ದ ಕೆರೆ.. ಮಳೆಯಲ್ಲೇ ನೀರಿಗಿಳಿದು ಗ್ರಾಮಸ್ಥರಿಂದ ಡ್ಯಾನ್ಸ್ - VIDEO