ತುಮಕೂರು: ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಪ್ರವಾಸ ಮಾಡುತ್ತಿದ್ದ ಸಂದರ್ಭದಲ್ಲಿ ಮಾರ್ಗಮಧ್ಯೆ ರೈತನೊಬ್ಬ ಹೊಲದಲ್ಲಿ ಕುಳಿತು ಕಣ್ಣೀರು ಹಾಕುತ್ತಿದ್ದ ದೃಶ್ಯ ಕಂಡು ಮರುಗಿದರು.
ಮುಂಗಾರು ಹಂಗಾಮಿನ ಹಿನ್ನೆಲೆಯಲ್ಲಿ ಭೂಮಿ ಹದ ಮಾಡುತ್ತಿದ್ದ ವೇಳೆ ಎತ್ತಿನ ಕಾಲು ಮುರಿದು ಒದ್ದಾಡುತ್ತಿತ್ತು. ಇದರಿಂದ ಮನನೊಂದ ರೈತ ಕಣ್ಣೀರು ಹಾಕುತ್ತಾ ಕುಳಿತಿದ್ದನು. ಕೊರಟಗೆರೆ ತಾಲೂಕಿನ ಚಿಂಪ ಗಾನಹಳ್ಳಿ ಮಾರ್ಗವಾಗಿ ತೆರಳುತ್ತಿದ್ದ ಪರಮೇಶ್ವರ್, ಈ ರೈತನನ್ನು ನೋಡಿ ಕಾರು ನಿಲ್ಲಿಸಿ, ಆತನ ಬಳಿಗೆ ಬಂದು ಸಂತೈಸಿದರು.
ಹೊಲದಲ್ಲಿ ಕೆಲಕಾಲ ನಿಂತು ರೈತನ ಸಂಕಷ್ಟ ಆಲಿಸಿದ ಪರಮೇಶ್ವರ್, ನಂತರ ಕಾಲು ಮುರಿದು ಬಿದ್ದಿರುವ ಎತ್ತಿನಿಂದ ಮುಂದಿನ ದಿನಗಳಲ್ಲಿ ಉಳುಮೆ ಮಾಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ಕೃಷಿ ಚಟುವಟಿಕೆ ನಡೆಸಲು ಅಗತ್ಯವಿರುವ ಎತ್ತು ಖರೀದಿಸಲು ಆರ್ಥಿಕ ಸಹಕಾರ ನೀಡುತ್ತೇನೆ ಎಂದು ಸಮಾಧಾನ ಹೇಳಿದರು. ಬಳಿಕ ಅವರು ಮುಂದಿನ ಕ್ಷೇತ್ರದ ಪ್ರವಾಸ ಕೈಗೊಂಡರು.