ETV Bharat / state

ತುಮಕೂರು ಎಸ್​ಪಿ ಕಚೇರಿಯಲ್ಲಿ ಅಡಿಕೆ ಹರಾಜು

ಪ್ರತಿವರ್ಷದಂತೆ ಈ ವರ್ಷವೂ ಕೂಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಆವರಣದಲ್ಲಿ ಬೆಳೆದ ಅಡಿಕೆಗಳನ್ನು ಹರಾಜು ಹಾಕಲಾಯಿತು. ಈ ವರ್ಷ ಅಡಿಕೆ ಹರಾಜಿನಿಂದ ಸುಮಾರು 41 ಸಾವಿರ ರೂ. ಲಾಭ ಬಂದಿದೆ.

author img

By

Published : Nov 19, 2019, 8:11 AM IST

ತುಮಕೂರು ಎಸ್​ಪಿ ಕಚೇರಿಯಲ್ಲಿ ಅಡಿಕೆ ಹರಾಜು

ತುಮಕೂರು: ಪ್ರತಿವರ್ಷದಂತೆ ಈ ವರ್ಷವೂ ಕೂಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಆವರಣದಲ್ಲಿ ಬೆಳೆದ ಅಡಿಕೆಗಳನ್ನು ಹರಾಜು ಹಾಕಲಾಯಿತು. ಈ ವರ್ಷ ಅಡಿಕೆ ಹರಾಜಿನಿಂದ ಸುಮಾರು 41 ಸಾವಿರ ರೂ. ಲಾಭ ಬಂದಿದೆ. ಎಸ್​ಪಿ ಕಚೇರಿ ಸುತ್ತಲೂ ಅಡಿಕೆ ತೋಟಗಳಿವೆ. ಇಂತಹ ಅಚ್ಚುಕಟ್ಟಾದ ಅಡಿಕೆ ತೋಟಗಳು ನಗರವ್ಯಾಪ್ತಿಯಲ್ಲಿ ಕಂಡುಬರುವುದು ಅಪರೂಪ. ಸುಮಾರು ಎರಡು ಎಕರೆ ವಿಸ್ತೀರ್ಣದಲ್ಲಿ 600 ಅಡಿಕೆ ಗಿಡಗಳನ್ನು ಬೆಳೆಸಲಾಗಿದೆ. ಪ್ರತಿ ವರ್ಷ ಅಡಿಕೆ ಹರಾಜು ಹಾಕಲಾಗುತ್ತದೆ. ಈ ಹರಾಜು ಮೂಲಕ ಅಡಿಕೆಯನ್ನು ಪಡೆಯಲು ವ್ಯಾಪಾರಸ್ಥರು ಮುಗಿ ಬೀಳುತ್ತಾರೆ. 2013ರಿಂದ ಪ್ರತಿ ವರ್ಷಕ್ಕೊಮ್ಮೆ ಹರಾಜು ಹಾಕುವ ಪ್ರಕ್ರಿಯೆ ನಡೆದು ಬಂದಿದ್ದು, ಹರಾಜು ಮೂಲಕ ಬರುವ ಆದಾಯವನ್ನು ಅಡಿಕೆ ತೋಟದ ಅಭಿವೃದ್ಧಿಗೆ ಬಳಸಿಕೊಳ್ಳಲಾಗುತ್ತದೆ.

ತುಮಕೂರು ಎಸ್​ಪಿ ಕಚೇರಿ

ನಗರದ ಬಿಎಚ್ ರಸ್ತೆಯಲ್ಲಿ ಸಾಗುತ್ತಿದ್ದರೆ ಅಡಿಕೆ ತೋಟ ಅವರಿಸಿಕೊಂಡಿರುವ ಎಸ್​ಪಿ ಕಚೇರಿ ಇದೆ ಎಂಬ ವಿಷಯ ಸಾಮಾನ್ಯರಿಗೆ ತಿಳಿಯುವುದಿಲ್ಲ. ಒಳಹೋಗಿ ನೋಡಿದರೆ ಕಚೇರಿ ಇದೆ ಎಂದು ಗೊತ್ತಾಗುತ್ತದೆ. 2005ರಲ್ಲಿ ತುಮಕೂರು ಎಸ್​ಪಿಯಾಗಿದ್ದ ಹರಿಶೇಖರನ್ ಅಡಿಕೆ ತೋಟ ಅಭಿವೃದ್ಧಿಗೆ ಚಾಲನೆ ನೀಡಿದ್ದರು. ಅವರ ವರ್ಗಾವಣೆ ನಂತರ ಇಲ್ಲಿ ಬಂದು ಕೆಲಸ ಮಾಡಿದಂತಹ ಅಧಿಕಾರಿಗಳು ತೋಟದ ಅಭಿವೃದ್ಧಿಗೆ ಗಮನ ಹರಿಸಿದ್ದಾರೆ. ಹೀಗಾಗಿ ಕಚೇರಿ ಆವರಣದ ತುಂಬ ನಿರ್ಮಲವಾದ ಒಂದು ಪರಿಸರ ನಿರ್ಮಾಣವಾಗಿದೆ. ಇಲ್ಲಿಗೆ ಬರುವ ಸಾರ್ವಜನಿಕರು ಕೂಡ ಅಡಿಕೆ ತೋಟದ ನೆರಳಲ್ಲಿ ನಿಂತು ಕೆಲಕಾಲ ವಿಶ್ರಾಂತಿ ಪಡೆಯುವುದು ಸಾಮಾನ್ಯವಾಗಿದೆ.

ಒಟ್ಟಾರೆ ಬಹುತೇಕ ಸರ್ಕಾರಿ ಕಚೇರಿ ಆವರಣದಲ್ಲಿ ತೆಂಗು ಸೇರಿದಂತೆ ವಿವಿಧ ಗಿಡಗಳನ್ನು ಕಾಣಬಹುದು. ಆದರೆ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಆವರಣದಲ್ಲಿ ಅಡಿಕೆ ಇರುವುದು ವಿಶೇಷವಾಗಿದೆ. ಪೊಲೀಸ್ ಕಚೇರಿ ಆವರಣದಲ್ಲಿ ನಿರ್ಮಲ ಪರಿಸರ ನಿರ್ಮಾಣವಾಗಿರುವುದು ಪೊಲೀಸ್ ಅಧಿಕಾರಿಗಳ ದೂರದೃಷ್ಟಿ ಕೋನವನ್ನು ಪ್ರತಿಬಿಂಬಿಸುತ್ತದೆ.

Intro:ವರ್ಷಕ್ಕೊಮ್ಮೆ 'ಸುಪಾರಿ' ನೀಡ್ತಾರೆ ತುಮಕೂರು ಪೊಲೀಸರು......!!!

ತುಮಕೂರು
ಸುಪಾರಿ ನೀಡೋ ಕ್ರಿಮಿನಲ್ ಗಳನ್ನು ಸದೆಬಡಿಯುವ ಪೊಲೀಸರೇ ವರ್ಷಕೊಮ್ಮೆ ಸುಪಾರಿ ನೀಡುವುದು ತುಮಕೂರು ಪೊಲೀಸರಿಗೆ ಸಾಮಾನ್ಯವಾಗಿದೆ. ಇದೇನಪ್ಪ ಪೊಲೀಸರೇ ಸುಪಾರಿ ನೀಡುತ್ತಾರೆಯೇ ಎಂದು ಹುಬ್ಬೇರಿಸಬೇಡಿ. ಇದ್ರ ವ್ಯಾಖ್ಯಾನವೇ ವಿಭಿನ್ನವಾದದು. ಹೌದು ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಅವರಣದಲ್ಲಿ ಈ ರೀತಿಯಾದ ಒಂದು ಪ್ರಕ್ರಿಯೆ ಪ್ರತಿವರ್ಷ ನಡೆಯುತ್ತದೆ.
ಹೀಗೆ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಆವರಣ ಹೊಕ್ಕರೆ ಸುತ್ತಲೂ ಅಡಿಕೆ ತೋಟದ್ದೆ ಕಾರುಬಾರು. ಹೀಗೆ ಅಚ್ಚುಕಟ್ಟಾದ ಅಡಿಕೆತೋಟ ನಗರವ್ಯಾಪ್ತಿಯಲ್ಲಿ ಕಂಡುಬರುವುದು ಬಲು ಅಪರೂಪ. ಸುಮಾರು ಎರಡು ಎಕರೆ ವಿಸ್ತೀರ್ಣದಲ್ಲಿ 600 ಅಡಿಕೆ ಗಿಡಗಳನ್ನು ಬೆಳೆಸಲಾಗಿದೆ. ಪ್ರತಿವರ್ಷ ಅಡಿಕೆ ಹರಾಜು ಹಾಕಲಾಗುತ್ತದೆ. ಈ 'ಸುಪಾರಿ'ಯನ್ನು ವರ್ಷಕ್ಕೊಮ್ಮೆ ಹರಾಜು ಮೂಲಕ ಪಡೆಯಲು ಅಡಿಕೆ ವ್ಯಾಪಾರಸ್ಥರು ಮುಗಿ ಬೀಳುತ್ತಾರೆ. 2013ರಿಂದ ಪ್ರತಿವರ್ಷಕ್ಕೊಮ್ಮೆ ಹರಾಜು ಹಾಕಲಾಗುವುದು. ಈ ವರ್ಷ 41,000 ರೂ. ಗಳಿಗೆ ಅಡಿಕೆ ತೋಟದಿಂದ ಲಾಭ ಬಂದಿದೆ. ಹರಾಜು ಮೂಲಕ ಬರುವ ಆದಾಯವನ್ನು ಅಡಿಕೆ ತೋಟದ ಅಭಿವೃದ್ಧಿಗೆ ಬಳಸಿಕೊಳ್ಳಲಾಗುವುದು.
ಬೈಟ್: ಕೋನ ವಂಸಿ ಕೃಷ್ಣ, ತುಮಕೂರು ಎಸ್ಪಿ.....
ತುಮಕೂರು ನಗರದ ಬಿಎಚ್ ರಸ್ತೆಯಲ್ಲಿ ಸಾಗುತ್ತಿದ್ದರೆ ಅಡಿಕೆ ತೋಟ ಅವರಿಸಿಕೊಂಡಿರೋ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಇದೆ ಎಂಬ ವಿಷಯ ಸಾಮಾನ್ಯರಿಗೆ ತಿಳಿಯುವುದಿಲ್ಲ. ಇದರ ಒಳಹೊಕ್ಕು ನೋಡಿದರೆ ಗೊತ್ತಾಗುವುದು ಎಸ್ಪಿ ಕಚೇರಿ ಎಂಬುದು. 2005ರಲ್ಲಿ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಹರಿಶೇಖರನ್ ಅಡಿಕೆ ತೋಟ ಅಭಿವೃದ್ಧಿಗೆ ಚಾಲನೆ ನೀಡಿದ್ದರು. ಇವರ ವರ್ಗಾವಣೆ ನಂತರ ಇಲ್ಲಿ ಬಂದು ಕೆಲಸ ಮಾಡಿದಂತಹ ಪೊಲೀಸ್ ವರಿಷ್ಠಾಧಿಕಾರಿಗಳು ತೋಟದ ಅಭಿವೃದ್ಧಿಗೆ ಗಮನಹರಿಸಿದರು. ಹೀಗಾಗಿ ಇಂದು ಕಚೇರಿ ಆವರಣದ ತುಂಬೆಲ್ಲ ನಿರ್ಮಲವಾದ ಒಂದು ಪರಿಸರ ನಿರ್ಮಾಣವಾಗಿದೆ. ಇಲ್ಲಿಗೆ ಬರುವ ಸಾರ್ವಜನಿಕರು ಕೂಡ ಅಡಿಕೆ ತೋಟದ ನೆರಳಲ್ಲಿ ನಿಂತು ಕೆಲಕಾಲ ವಿಶ್ರಾಂತಿ ಪಡೆಯುವುದು ಸಾಮಾನ್ಯವಾಗಿದೆ.
ಬೈಟ್ : ಮುರಳಿ, ಎಸ್ಪಿ ಕಚೇರಿ ಸಿಬ್ಬಂದಿ......
ಒಟ್ಟಾರೆ ಬಹುತೇಕ ಸರ್ಕಾರಿ ಕಚೇರಿ ಆವರಣದಲ್ಲಿ ತೆಂಗು ಸೇರಿದಂತೆ ವಿವಿಧ ಗಿಡಗಳನ್ನು ಕಾಣಬಹುದು. ಆದರೆ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಆವರಣದ ಮಾತ್ರ ಅಡಿಕೆ ಗಿಡಗಳಿಂದ ತುಂಬಿರುವುದು ವಿಶಿಷ್ಟವಾಗಿದೆ. ಇದಲ್ಲದೆ ಪೊಲೀಸ್ ಕಚೇರಿ ಆವರಣದಲ್ಲಿ ನಿರ್ಮಲ ಪರಿಸರ ನಿರ್ಮಾಣವಾಗಿರುವುದು ಪೊಲೀಸ್ ಅಧಿಕಾರಿಗಳ ದೂರದೃಷ್ಟಿ ಕೋನವನ್ನು ಪ್ರತಿಬಿಂಬಿಸುತ್ತದೆ.

Body:ತುಮಕೂರು

Conclusion:

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.