ETV Bharat / state

ದೇಶ, ಸಂಘಟನೆ ಗಟ್ಟಿಗೊಳಿಸುವುದೇ ಬಿಜೆಪಿಯ ಮೂಲ ಉದ್ದೇಶ : ಶಾಸಕ ಅಶೋಕ್ ನಾಯ್ಕ

ಪಕ್ಷವನ್ನು ಕಟ್ಟಬೇಕಾದ್ರೆ ಶಿಸ್ತುಬದ್ಧವಾದ ಮನಸ್ಸುಗಳನ್ನು ಒಗ್ಗೂಡಿಸಬೇಕು. ಭಾರತೀಯ ಜನತಾ ಪಕ್ಷ ಈಗ ವಿಶ್ವದಲ್ಲೇ ವಿಭಿನ್ನವಾದ ಒಂದು ಪಕ್ಷ. ಉತ್ತಮವಾದ ಕಾರ್ಯಗಳಿಂದ ಪಕ್ಷವನ್ನು ಕಟ್ಟಿ ಬೆಳೆಸೋಣ..

shivmogga
ಪ್ರಶಿಕ್ಷಣ ಕಾರ್ಯಕ್ರಮ
author img

By

Published : Nov 22, 2020, 5:34 PM IST

ಶಿವಮೊಗ್ಗ: ಭಾರತೀಯ ಜನತಾ ಪಾರ್ಟಿಯ ಮೂಲ ಉದ್ದೇಶ ಅಧಿಕಾರ ಹಿಡಿಯುವುದಲ್ಲ, ಸಂಘಟನೆಯನ್ನು ಗಟ್ಟಿಯಾಗಿ ಕಟ್ಟುವುದು ಹಾಗೂ ದೇಶವನ್ನು ಸದೃಢವಾಗಿ‌ ಮಾಡುವುದು ಎಂದು ಶಿವಮೊಗ್ಗ ಗ್ರಾಮಾಂತರ ಶಾಸಕ ಅಶೋಕ್ ನಾಯ್ಕ ಹೇಳಿದರು.

ಶಾಸಕ ಅಶೋಕ್ ನಾಯ್ಕ ಪ್ರಶಿಕ್ಷಣ ಕಾರ್ಯಕ್ರಮ ಉದ್ಘಾಟಿಸಿದರು..

ಬಿಜೆಪಿ ಶಿವಮೊಗ್ಗ ಗ್ರಾಮಾಂತರ ಮಂಡಲದ ಎರಡು ದಿನಗಳ ಪ್ರಶಿಕ್ಷಣ ಕಾರ್ಯಕ್ರಮವು ಶಿವಮೊಗ್ಗ ಜಿಲ್ಲೆಯ ಬೀರನಕೆರೆ ಮಠದಲ್ಲಿ ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕರು, ಭಾರತೀಯ ಜನತಾ ಪಾರ್ಟಿಯ ಮೂಲ ಉದ್ದೇಶ ಅಧಿಕಾರ ಹಿಡಿಯುವುದಲ್ಲ, ಸಂಘಟನೆಯನ್ನು ಗಟ್ಟಿಯಾಗಿ ಕಟ್ಟುವುದು ಹಾಗೂ ದೇಶವನ್ನು ಸದೃಢ ಮಾಡುವುದು.

ಪಕ್ಷವನ್ನು ಕಟ್ಟಬೇಕಾದ್ರೆ ಶಿಸ್ತುಬದ್ಧವಾದ ಮನಸ್ಸುಗಳನ್ನು ಒಗ್ಗೂಡಿಸಬೇಕು. ಭಾರತೀಯ ಜನತಾ ಪಕ್ಷ ಈಗ ವಿಶ್ವದಲ್ಲೇ ವಿಭಿನ್ನವಾದ ಒಂದು ಪಕ್ಷ. ಉತ್ತಮವಾದ ಕಾರ್ಯಗಳಿಂದ ಪಕ್ಷವನ್ನು ಕಟ್ಟಿ ಬೆಳೆಸೋಣ ಎಂದು ಶಾಸಕರು ಕಾರ್ಯಕರ್ತರಿಗೆ ಕರೆ ನೀಡಿದರು.

ಈ ಕಾರ್ಯಕ್ರಮದಲ್ಲಿ ರಾಜ್ಯ ಪ್ರಕೋಷ್ಠಗಳ ಸಂಚಾಲಕರಾದ ಭಾನುಪ್ರಕಾಶ್, ಜಿಲ್ಲಾ ಪಂಚಾಯತ್ ಸದಸ್ಯೆ ಸೌಮ್ಯ ಭೋಜನಾಯ್ಕ್, ಶಿವಮೊಗ್ಗ ವಿಭಾಗ ಪ್ರಭಾರಿಗಳಾದ ಗಿರೀಶ್ ಪಟೇಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಧರ್ಮಪ್ರಸಾದ್ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.