ETV Bharat / state

ಶೀಘ್ರದಲ್ಲೇ ಶಿವಮೊಗ್ಗ ಡಿಸಿಸಿ ಬ್ಯಾಂಕ್‌ನಿಂದ ಮೊಬೈಲ್ ಬ್ಯಾಂಕಿಂಗ್ ಸೇವೆ

ಖಾಸಗಿ ಬ್ಯಾಂಕ್​ನಲ್ಲಿ ಗ್ರಾಹಕರಿಗೆ ಸಿಗುವ ಸೌಲಭ್ಯವನ್ನು ನಾವು ಡಿಸಿಸಿ ಬ್ಯಾಂಕ್‌ನಲ್ಲೂ ಕೊಡಬೇಕೆಂಬ ಬಯಕೆ ಇತ್ತು ಎಂದು ಡಿಸಿಸಿ ಬ್ಯಾಂಕ್​ ಅಧ್ಯಕ್ಷ ಆರ್.ಎಂ.ಮಂಜುನಾಥ ಹೇಳಿದರು.

ಡಿಸಿಸಿ ಬ್ಯಾಂಕ್
ಡಿಸಿಸಿ ಬ್ಯಾಂಕ್
author img

By ETV Bharat Karnataka Team

Published : Dec 27, 2023, 7:22 PM IST

ಡಿಸಿಸಿ ಬ್ಯಾಂಕ್​ ಅಧ್ಯಕ್ಷ ಆರ್.ಎಂ ಮಂಜುನಾಥ ಗೌಡ ಹೇಳಿಕೆ

ಶಿವಮೊಗ್ಗ: ಜಿಲ್ಲೆಯ ರೈತರು ಹಾಗೂ ಸ್ವ ಸಹಾಯ ಗುಂಪುಗಳ ಅನುಕೂಲಕ್ಕಾಗಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನಿಂದ ಮೊಬೈಲ್ ಬ್ಯಾಂಕಿಂಗ್​ ವ್ಯವಸ್ಥೆಯನ್ನು ಶೀಘ್ರದಲ್ಲಿ ಪ್ರಾರಂಭಿಸಲಾಗುವುದು ಎಂದು ಡಿಸಿಸಿ ಬ್ಯಾಂಕ್‌ನ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ತಿಳಿಸಿದ್ದಾರೆ.

ಡಿಸಿಸಿ ಬ್ಯಾಂಕ್‌ನಲ್ಲಿ ಇಂದು ನಡೆದ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ಸ್ವ ಸಹಾಯ ಗುಂಪು ಹಾಗೂ ರೈತರಿಗೆ ಅನುಕೂಲವಾಗಲೆಂದು ಮೊಬೈಲ್ ಬ್ಯಾಂಕಿಂಗ್ ಪ್ರಾರಂಭಿಸುವ ಉದ್ದೇಶವಿದೆ. ಮುಂದಿನ ಒಂದೂವರೆ ತಿಂಗಳಲ್ಲಿ ಮೊಬೈಲ್ ಬ್ಯಾಂಕಿಂಗ್​ ಪ್ರಾರಂಭಿಸಲಿದ್ದೇವೆ. ಇದರಿಂದ ಫೋನ್ ಪೇ, ಗೊಗಲ್ ಪೇ, ಎಟಿಎಂ, ಆರ್​ಟಿಜಿಎಸ್, ನೆಫ್ಟ್ ಮಾಡಲು‌ ಮೊಬೈಲ್ ಬ್ಯಾಂಕಿಂಗ್ ಮಾಡಬೇಕೆಂಬ ನಿಯಮವನ್ನು ರಿಸರ್ವ್ ಬ್ಯಾಂಕ್ ಮಾಡಿದೆ. ಈ ಕುರಿತು ಟೆಂಡರ್ ಕರೆದಿದ್ದೇವೆ. ಖಾಸಗಿ ಬ್ಯಾಂಕ್​ನಲ್ಲಿ ಇರುವ ಸೌಲಭ್ಯವನ್ನು ನಾವು ಡಿಸಿಸಿ ಬ್ಯಾಂಕ್​ನಲ್ಲೂ ಕೊಡಬೇಕೆಂಬ ಬಯಕೆ ಇದೆ ಎಂದರು.

ಪಿಎಲ್​ಡಿ ಬ್ಯಾಂಕ್​ಗಳ ಕಟ್ಟಡಕ್ಕೆ ₹15 ಕೋಟಿ ಬಿಡುಗಡೆ: ಪಿಎಲ್​ಡಿ ಬ್ಯಾಂಕ್​ನ ಕಟ್ಟಡಗಳ ನಿರ್ಮಾಣಕ್ಕೆ 15 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಇವು ಮಲ್ಟಿ ಸರ್ವಿಸ್ ಸೆಂಟರ್ ಆಗಬೇಕು. ಬಹುಸೇವಾ ಕೇಂದ್ರಗಳಾಗಬೇಕು ಎಂಬ ಉದ್ದೇಶದಿಂದ ಈ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.

ಸಹಕಾರಿ ಇಲಾಖೆಯಲ್ಲಿ ಎರಡು ಕಾಯಿದೆಗಳಿವೆ. ಒಂದು ಹಳೇಯ ಸರ್ಕಾರಿ ಕಾಯಿದೆ, ಇನ್ನೊಂದು ಸೌಹಾರ್ದ ಕಾಯಿದೆ. ಈ ಎರಡನ್ನೂ ಒಂದೇ ಮಾಡಿ ಜಾರಿ ಮಾಡುವುದಾಗಿ ಕೇಂದ್ರದ ಸಹಕಾರಿ ಖಾತೆ ಸಚಿವ ಅಮಿತ್ ಶಾ ತಿಳಿಸಿದ್ದಾರೆ. ಇದನ್ನು ಸ್ವಾಗತಿಸುತ್ತೇವೆ ಎಂದು ಮಂಜುನಾಥ್ ತಿಳಿಸಿದರು.

ಮಾರ್ಚ್ 31ರ ತನಕ ಕಾಂಪ್ರಮೈಸ್ ಸೆಟ್ಲ್‌ಮೆಂಟ್: ಇತ್ತೀಚೆಗೆ ರಿಸರ್ವ್ ಬ್ಯಾಂಕ್‌ನವರು ಇಷ್ಟು ದಿನ ಇದ್ದ ಒನ್ ಟೈಂ ಸೆಂಟ್ಲಮೆಂಟ್ ತೆಗೆದು ಹಾಕಿದ್ದು, ಕಾಂಪ್ರಮೈಸ್ ಸೆಟ್ಲ್‌ಮೆಂಟ್ ಜಾರಿಗೆ ತಂದಿದ್ದಾರೆ. ಇದು ಮಾರ್ಚ್ 31ರವರೆಗೆ ಜಾರಿಯಲ್ಲಿ ಇರುತ್ತದೆ. ಯಾರು ಸಾಲ ಪಡೆದು ಸುಸ್ತಿಯಾಗಿದ್ದರೋ ಮಾರ್ಚ್ 30ವರೆಗೆ ಬ್ಯಾಂಕ್ ಮತ್ತು ಸಾಲಗಾರರು ಕೂತು ತೀರ್ಮಾನ ಮಾಡಿಕೊಂಡು ಒಡಂಬಡಿಕೆ ಮೂಲಕ ಸಾಲವನ್ನು ತಿಳುವಳಿ ಮಾಡುವ ಮೂಲಕ ಹೊಸ ಯೋಜನೆಯನ್ನು ರಿಸರ್ವ್ ಬ್ಯಾಂಕ್ ನೀಡಿದೆ. ಅವರು ಮುಂದಿನ ಮೂರು ತಿಂಗಳೊಳಗೆ ಸಾಲವನ್ನು ತಿಳುವಳಿ ಮಾಡಿಕೊಳ್ಳಬೇಕೆಂದು ಸೂಚಿಸಿದರು.

ಈ ವರ್ಷದ ಯೋಜನೆಯಾಗಿ ಜಿಲ್ಲೆಯ 10 ಕಡೆ ಬ್ಯಾಂಕ್‌ನ ಶಾಖೆ ತೆರೆಯಲು ಚಿಂತಿಸಲಾಗಿದೆ. ಇದಕ್ಕಾಗಿ ನಾವು ರಿಸರ್ವ್ ಬ್ಯಾಂಕ್ ಅನುಮತಿಗಾಗಿ ಕಾಯುತ್ತಿದ್ದೆವೆ ಎಂದಿರುವ ಮಂಜುನಾಥ್​, ಬ್ಯಾಂಕ್​ನ ವಿವಿಧ ಯೋಜನೆಗಳ‌ ಮಾಹಿತಿ ನೀಡಿದರು.

ಇದನ್ನೂ ಓದಿ: ಕಾಂತರಾಜು ವರದಿ ಜಾರಿಗೆ ಒತ್ತಾಯ; ಜ.28ಕ್ಕೆ ಬೃಹತ್‌ ಅಹಿಂದ ಸಮಾವೇಶ, ಸಿಎಂಗೆ ಆಹ್ವಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.