ETV Bharat / state

ವಾಸನೆ ಬರುತ್ತಿದ್ದ ಚಿಕನ್ ಕಬಾಬ್​ ಮಾರಾಟ: ಮಾಲೀಕನನ್ನು ತರಾಟೆಗೆ ತೆಗೆದುಕೊಂಡ ಗ್ರಾಹಕರು - ಮಾಲೀಕನನ್ನು ತರಾಟೆಗೆ ತೆಗೆದುಕೊಂಡ ಗ್ರಾಹಕರು

ವಾಸನೆ ಬರುತ್ತಿದ್ದ ಚಿಕನ್ ಕಬಾಬ್​ ಮಾರಾಟ ಮಾಡುತ್ತಿದ್ದ ಮಾಲೀಕನನ್ನು ಗ್ರಾಹಕರು ತರಾಟೆಗೆ ತೆಗೆದುಕೊಂಡ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

Selling the Spoiled chicken kebab in Shivamogga
ಮಾಲೀಕನನ್ನು ತರಾಟೆಗೆ ತೆಗೆದುಕೊಂಡ ಗ್ರಾಹಕರು
author img

By

Published : Sep 18, 2021, 10:22 AM IST

ಶಿವಮೊಗ್ಗ: ವಾಸನೆ ಬರುತ್ತಿದ್ದ ಚಿಕನ್ ಕಬಾಬ್​ ಮಾರಾಟ ಮಾಡಿದ ಮಾಲೀಕನಿಗೆ ಗ್ರಾಹಕರು ಚಳಿ ಬಿಡಿಸಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಶಿವಮೊಗ್ಗದ ಸುಗ್ಗಿ ಚಿಕನ್ ಶಾಪ್​ನಿಂದ ನವುಲೆ ಬಡಾವಣೆಯ ಅಶೋಕ್ ಎಂಬುವರು ನಿನ್ನೆ ರಾತ್ರಿ ಚಿಕನ್ ಕಬಾಬ್ ಪಾರ್ಸೆಲ್ ತೆಗೆದುಕೊಂಡು ಹೋಗಿದ್ದಾರೆ. ಇದನ್ನು ತಿಂದ ಮಕ್ಕಳಿಬ್ಬರು ವಾಂತಿ ಮಾಡಿಕೊಂಡಿದ್ದು, ನಂತರ​ ಕಬಾಬ್ ಪರಿಶೀಲನೆ ಮಾಡಿದಾಗ ಚಿಕನ್ ವಾಸನೆ ಬಂದಿರುವುದು ತಿಳಿದುಬಂದಿದೆ.

ಮಾಲೀಕನನ್ನು ತರಾಟೆಗೆ ತೆಗೆದುಕೊಂಡ ಗ್ರಾಹಕರು

ಕೂಡಲೇ ಅಶೋಕ್ ಹಾಗೂ ಅತನ ಸ್ನೇಹಿತ ಅಂಗಡಿಗೆ ಬಂದು ಮಾಲೀಕನಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಅಂಗಡಿ ಮಾಲೀಕ ಉದ್ಧಟತನ ತೋರಿದ್ದು, ಕೆಲಕಾಲ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಕೂಡಲೇ ಸ್ಥಳಕ್ಕಾಮಿಸಿದ ಪೊಲೀಸರು ಸುಗ್ಗಿ ಶಾಪ್ ಮಾಲೀಕನನ್ನು ಠಾಣೆಗೆ ​ಕರೆದೊಯ್ದರು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.