ಶಿವಮೊಗ್ಗ : ಕೊರೂನಾ ಎರಡನೇ ಅಲೆಯಲ್ಲಿ ಆಕ್ಸಿಜನ್ಗೆ ಬೇಡಿಕೆ ಹೆಚ್ಚಿದೆ. ಈ ಹಿನ್ನೆಲೆ ಆಕ್ಸಿಜನ್ ನೀಡಲು ಬೇಕಾಗುವ 55 ಕಾನ್ಸ್ಟ್ರೇಟರ್ನ ಮೂಲತಃ ಮಲೆನಾಡಿನ ಯುವಕ ಅಮೆರಿಕಾದಲ್ಲಿ ನೆಲೆಸಿರುವ ಸತೀಶ್ ಅಬಾಟಿ ಅವರು ತಮ್ಮ O2 ಫಾರ್ ಇಂಡಿಯಾ ಎಂಬ ಸಂಸ್ಥೆಯ ಮೂಲಕ ರಾಜ್ಯಕ್ಕೆ ನೀಡಿದ್ದಾರೆ.
ಇದರಲ್ಲಿ 22 ಕಾನ್ಸ್ಟ್ರೇಟರ್ಗಳನ್ನ ಶಿವಮೊಗ್ಗ ಜಿಲ್ಲೆಗೆ ನೀಡಿದ್ದಾರೆ. ಇದನ್ನು ಜಿಲ್ಲೆಯ ಪ್ರತಿ ತಾಲೂಕಿಗೂ ನೀಡುವ ಕಾರ್ಯಕ್ಕೆ ಸಂಸದ ಬಿ ವೈ ರಾಘವೇಂದ್ರ ಚಾಲನೆ ನೀಡಿದರು. ಶಿಕಾರಿಪುರದ ತಾಲೂಕು ಆಸ್ಪತ್ರೆಯಲ್ಲಿ ಹಂಚುವ ಪ್ರಕ್ರಿಯೆ ಪ್ರಾರಂಭಗೊಂಡಿದೆ.
ಸತೀಶ್ ಅಬಾಟಿ ಅವರು ತಮ್ಮ ಸಂಸ್ಥೆಯ ಮೂಲಕ ಹಣ ನೀಡುವವರನ್ನು ಕಲೆಹಾಕಿ ಅವರಿಂದ ಹಣ ಪಡೆದು ಕಾನ್ಸ್ಟ್ರೇಟರ್ ಕಳುಹಿಸಿ ಕೊಟ್ಟಿದ್ದಾರೆ.
ಒಂದು ಆಕ್ಸಿಜನ್ ಕಾನ್ಸ್ಟ್ರೇಟರ್ನ 5 ಲೀ. ಸಾರ್ಮಥ್ಯವನ್ನು ಹೊಂದಿದೆ. ಇದು 24 ಗಂಟೆ ಕೆಲಸ ಮಾಡಿದ್ರೆ, ಒಂದು ಜಂಬೂ ಸಿಲಿಂಡರ್ನಷ್ಟು ಆಕ್ಸಿಜನ್ ಬಳಸಿಕೊಳ್ಳುತ್ತದೆ.