ETV Bharat / state

ಶಿರಾ, ಆರ್​ ಆರ್​ ನಗರದಲ್ಲಿ ಬಿಜೆಪಿ ಗೆಲುವು ನಿಶ್ಚಿತ: ಸಚಿವ ಈಶ್ವರಪ್ಪ ವಿಶ್ವಾಸ - KPCC President DK Sivakumar

ದೇಶದ ಹಾಗೂ ರಾಜ್ಯದ ಜನತೆ ಚುನಾವಣೆ ಅಂದ್ರೆ ಮೋದಿ, ಯಡಿಯೂರಪ್ಪ ಅಂತ ಗೊತ್ತಾಗಿದೆ. ಇದರಿಂದ ಎರಡು ಉಪಚುನಾವಣೆಯಲ್ಲೂ ಸಹ ಬಿಜೆಪಿ ಗೆಲ್ಲುತ್ತದೆ. ಬಿಜೆಪಿಯಲ್ಲೂ ಸಹ ಸಾಕಷ್ಟು ಆಕಾಂಕ್ಷಿಗಳಿದ್ದಾರೆ ಎಂದಿದ್ದಾರೆ.

Minister K S Eshwarappa
ಸಚಿವ ಕೆ.ಎಸ್​​ ಈಶ್ವರಪ್ಪ
author img

By

Published : Sep 30, 2020, 12:34 PM IST

ಶಿವಮೊಗ್ಗ: ಆರ್​​​​​ಆರ್​​​ ನಗರ ಹಾಗೂ ಶಿರಾ ಉಪ ಚುನಾವಣೆ ಎರಡಲ್ಲೂ ಬಿಜೆಪಿ ಗೆಲ್ಲಲಿದೆ ಎಂಬ ವಿಶ್ವಾಸವಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ. ಬಿಜೆಪಿ ಗೆದ್ದೇ ಗೆಲ್ಲುತ್ತದೆ, ಇದನ್ನು ಬರೆದಿಟ್ಟುಕೊಳ್ಳಿ ಎಂದಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚುನಾವಣೆಯಲ್ಲಿ ನಮ್ಮನ್ನು ಬಿಟ್ಟು ಗೆಲ್ಲುವವರು ಯಾರಿದ್ದಾರೆ. ಕಾಂಗ್ರೆಸ್​​​ನಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಬಡಿದಾಡುತ್ತಿದ್ದಾರೆ. ಜೆಡಿಎಸ್​ನ ಕುಮಾರಸ್ವಾಮಿ ನಮ್ಮದು ಒಂದು ಪಕ್ಷ ಇದೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ಸಿಎಂ ಸ್ಥಾನವನ್ನು ಕಳೆದುಕೊಂಡ್ರು ಹಾಗೂ ಸರ್ಕಾರವನ್ನು ಕಳೆದುಕೊಂಡರು.

ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ

ಲೋಕಸಭೆ ಚುನಾವಣೆಯಲ್ಲೂ ಸಹ ಬಿಜೆಪಿ ಅಧಿಕಾರ ಪಡೆಯಲ್ಲ ಎಂದರು. ಸ್ಯಾಂಪಲ್​​​ಗೆ ಇರಲಿ ಅಂತ ಕಾಂಗ್ರೆಸ್ ಹಾಗೂ ಜೆಡಿಎಸ್ ಒಂದೂಂದು ಸ್ಥಾನ ಪಡೆದುಕೊಂಡರು. ವಿಧಾನಸಭೆ ಚುನಾವಣೆಯಲ್ಲಿ ಸಹ ಬಿಜೆಪಿ ಗೆಲುವು ಸಾಧಿಸಿತು. ಗೆಲುವು ಅಂದ್ರೆ, ಭಾರತೀಯ ಜನತಾ ಪಾರ್ಟಿದು ಎಂದು ಸಚಿವ ಈಶ್ವರಪ್ಪ ಹೇಳಿದ್ದಾರೆ.

ದೇಶದ ಹಾಗೂ ರಾಜ್ಯದ ಜನತೆ ಚುನಾವಣೆ ಅಂದ್ರೆ ಮೋದಿ, ಯಡಿಯೂರಪ್ಪ ಅಂತ ಗೊತ್ತಾಗಿದೆ. ಇದರಿಂದ ಎರಡು ಉಪಚುನಾವಣೆಯಲ್ಲೂ ಸಹ ಬಿಜೆಪಿ ಗೆಲ್ಲುತ್ತದೆ. ಬಿಜೆಪಿಯಲ್ಲೂ ಸಹ ಸಾಕಷ್ಟು ಆಕಾಂಕ್ಷಿಗಳಿದ್ದಾರೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.