ETV Bharat / state

ನಿಮಿಷದಲ್ಲಿ ಮೂರು ಸ್ಟೀಲ್ ಗ್ಲಾಸ್‌ಗಳ ಮೇಲೆ 110 ಪುಷ್-ಅಪ್‌.. ಇಂಡಿಯಾ ಬುಕ್​​ ಆಫ್​ ರೆಕಾರ್ಡ್​ನಲ್ಲಿ ಶಿವಮೊಗ್ಗ ಯುವಕನ ಸಾಧನೆ - ಸ್ಟೀಲ್​ ಗ್ಲಾಸ್​ಗಳ ಮೇಲೆ 110 ಪುಷ್​ ಅಪ್

ಒಂದು ನಿಮಿಷದಲ್ಲಿ ಮೂರು ಸ್ಟೀಲ್ ಗ್ಲಾಸ್‌ಗಳ ಮೇಲೆ 110 ಪುಷ್ - ಅಪ್‌ಗಳು ಹೊಡೆಯುವ ಮೂಲಕ ಶಿವಮೊಗ್ಗದ ಯುವಕ ಇಂಡಿಯಾ ಬುಕ್​ ಆಫ್​ ರೆಕಾರ್ಡ್​ನಲ್ಲಿ ದಾಖಲೆ ಬರೆದಿದ್ದಾರೆ.

Maximum push ups on three steel glasses  Maximum push ups in one minute  Rahul Devraj of Shimoga  ಮೂರು ಸ್ಟೀಲ್ ಗ್ಲಾಸ್‌ಗಳ ಮೇಲೆ 110 ಪುಷ್ ಅಪ್‌ಗಳು  ಇಂಡಿಯಾ ಬುಕ್​​ ಆಫ್​ ರೆಕಾರ್ಡ್  ಶಿವಮೊಗ್ಗ ಯುವಕ ಸಾಧನೆ  ಸ್ಟೀಲ್​ ಗ್ಲಾಸ್​ಗಳ ಮೇಲೆ 110 ಪುಷ್​ ಅಪ್  ಶಿವಮೊಗ್ಗದ ಡಾ ರಾಹುಲ್ ದೇವರಾಜ್
ಕೃಪೆ: ಇಂಡಿಯಾ ಬುಕ್​​ ಆಫ್​ ರೆಕಾರ್ಡ್ ಟ್ವಿಟ್ಟರ್​
author img

By

Published : Oct 22, 2022, 1:17 PM IST

ಶಿವಮೊಗ್ಗ: ನಗರದ ಯುವಕನೊಬ್ಬ ಇಂಡಿಯಾ ಬುಕ್​​ ಆಫ್​ ರೆಕಾರ್ಡ್​ನಲ್ಲಿ ತಮ್ಮ ಹೆಸರನ್ನು ನಮೂದಿಸಿದ್ದಾರೆ. ಕೇವಲ ಒಂದು ನಿಮಿಷದಲ್ಲಿ ಮೂರು ಸ್ಟೀಲ್​ ಗ್ಲಾಸ್​ಗಳ ಮೇಲೆ 110 ಪುಷ್​ ಅಪ್​ ತೆಗೆಯುವ ಮೂಲಕ ಈ ಸಾಧನೆ ಮಾಡಿದ್ದಾರೆ. ಒಂದು ನಿಮಿಷದಲ್ಲಿ ಮೂರು ಸ್ಟೀಲ್ ಗ್ಲಾಸ್‌ಗಳಲ್ಲಿ ಗರಿಷ್ಠ ಸಂಖ್ಯೆಯ ಪುಷ್-ಅಪ್‌ಗಳನ್ನು ಪ್ರದರ್ಶಿಸಿದ ಸಾಧನೆಯನ್ನು ಶಿವಮೊಗ್ಗದ ಡಾ ರಾಹುಲ್ ದೇವರಾಜ್ (ಮಾರ್ಚ್ 29, 1996 ರಂದು ಜನನ) ಮಾಡಿದ್ದಾರೆ.

ನೆಲದ ಮೇಲೆ ತಲೆಕೆಳಗಾಗಿ ಇರಿಸಲಾದ ಮೂರು ಸ್ಟೀಲ್ ಗ್ಲಾಸ್‌ಗಳ ಮೇಲೆ ಕಾಲು ಮತ್ತು ಕೈಗಳನ್ನಿಟ್ಟು ತಮ್ಮನ್ನು ತಾವು ಸಮತೋಲನಗೊಳಿಸಿಕೊಂಡು 110 ಪುಷ್-ಅಪ್‌ಗಳನ್ನು ತೆಗೆದರು. ಈ ವಿಡಿಯೋವನ್ನು ಇಂಡಿಯಾ ಬುಕ್​ ಆಫ್​ ರೆಕಾರ್ಡ್​ ನಿಯಮದಂತೆ ಕಳುಹಿಸಿದರು. ಅವರು ಕಳುಹಿಸಿದ ವಿಡಿಯೋವನ್ನು ಸೆಪ್ಟೆಂಬರ್ 9, 2022 ರಂದು ದೃಢಪಡಿಸಲಾಗಿದ್ದು, ನಿನ್ನೆ ಡಾ.ರಾಹುಲ್ ದೇವರಾಜ್​ಗೆ ಪ್ರಶಸ್ತಿ ನೀಡಿದರು. ಈ ಯುವಕನ ಸಾಧನೆ ಬಗ್ಗೆ ಇಂಡಿಯಾ ಬುಕ್​ ಆಫ್​ ರೆಕಾರ್ಡ್​ ಟ್ವೀಟ್​ ಮಾಡಿದೆ.

ಓದಿ: ಬಿದಿರಿನಿಂದ ಬಾಟಲ್​ ತಯಾರಿ: ಕಾಜಿರಂಗ ಯುವಕನಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್​ನಲ್ಲಿ ಮನ್ನಣೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.