ಶಿವಮೊಗ್ಗದಲ್ಲಿ ನಾಳೆ ಕರ್ಪ್ಯೂ ಸಡಿಲಿಕೆ: ಶಾಲಾ - ಕಾಲೇಜು ರಜೆ ವಿಸ್ತರಣೆ - shivamogga school closed
ಈ ನಡುವೆ ಶಿವಮೊಗ್ಗ ಜನತೆ ಯಾವುದೇ ವದಂತಿಗಳಿಗೆ ಕಿವಿಗೊಡದೇ ಶಾಂತಿ, ಸುವ್ಯವಸ್ಥೆ ಕಾಪಾಡುವತ್ತ ಜಿಲ್ಲಾಡಳಿತದೊಂದಿಗೆ ಸಹಕರಿಸುವಂತೆ ಡಿಸಿ ವಿನಂತಿಸಿದ್ದಾರೆ..
ಶಿವಮೊಗ್ಗ: ನಗರದಲ್ಲಿ ಬಜರಂಗದಳದ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದ ಬಳಿಕ ಜಾರಿಯಲ್ಲಿರುವ ಕರ್ಫ್ಯೂವಿನಲ್ಲಿ ನಾಳೆ ಕೆಲ ಸಡಿಲಿಕೆ ಮಾಡಲಾಗಿದೆ. ಆದರೆ, ಶಾಲಾ-ಕಾಲೇಜುಗಳಿಗೆ ರಜೆ ವಿಸ್ತರಣೆ ಮಾಡಿ ಜಿಲ್ಲಾಧಿಕಾರಿ ಸೆಲ್ವಮಣಿ ಆದೇಶ ಹೊರಡಿಸಿದ್ದಾರೆ.
ಕಳೆದ ಮಂಗಳವಾರದಿಂದ ನಗರದಲ್ಲಿ ಕರ್ಫ್ಯೂ ಹೇರಲಾಗಿದೆ. ನಾಳೆ ಬೆಳಗ್ಗೆ 6ರಿಂದ ಸಂಜೆ 4 ಗಂಟೆ ತನಕ ಕರ್ಪ್ಯೂ ಸಡಿಲಿಕೆ ಮಾಡಲಾಗಿದೆ. ಇದರಿಂದ ಜನತೆ ತಮ್ಮ ಅಗತ್ಯ ವಸ್ತುಗಳನ್ನು ಕೊಳ್ಳಬಹುದಾಗಿದೆ. ವ್ಯಾಪಾರಸ್ಥರು ಸಹ ನಾಳೆ ವ್ಯಾಪಾರ ನಡೆಸಬಹುದಾಗಿದೆ. ಬೆಳಗ್ಗೆಯಿಂದ ಸಂಜೆ 4ರತನಕ ಅಂಗಡಿ - ಮುಂಗಟ್ಟುಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಬಳಿಕ ಮೊದಲಿನಂತೆಯೇ ಕರ್ಫ್ಯೂ ಮುಂದುವರೆಯಲಿದೆ.
ಶಾಲಾ-ಕಾಲೇಜುಗಳ ರಜೆ ಅವಧಿ ವಿಸ್ತರಣೆ : ನಾಳೆ ಶಾಲಾ - ಕಾಲೇಜು ಪ್ರಾರಂಭ ಮಾಡಲಾಗುವುದು ಎಂದು ಈ ಹಿಂದೆ ಜಿಲ್ಲಾಡಳಿತ ತಿಳಿಸಿತ್ತು. ಆದರೆ, ನಾಳೆಯೂ ಸಹ ರಜೆ ವಿಸ್ತರಣೆ ಮಾಡಲಾಗಿದೆ. ನಗರದಲ್ಲಿನ ಪರಿಸ್ಥಿತಿ ತಿಳಿದುಕೊಂಡು ಸೋಮವಾರದಿಂದ ಶಾಲಾ - ಕಾಲೇಜು ಪುನಾರಂಭಿಸುವ ಬಗ್ಗೆ ತೀರ್ಮಾನ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ: ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ವಿರುದ್ಧದ ಕೌಟುಂಬಿಕ ದೌರ್ಜನ್ಯ ಸಾಬೀತು : ಪರಿಹಾರ ನೀಡಲು ಕೋರ್ಟ್ ಸೂಚನೆ
ಈ ನಡುವೆ ಶಿವಮೊಗ್ಗ ಜನತೆ ಯಾವುದೇ ವದಂತಿಗಳಿಗೆ ಕಿವಿಗೊಡದೆ ಶಾಂತಿ, ಸುವ್ಯವಸ್ಥೆ ಕಾಪಾಡುವತ್ತ ಜಿಲ್ಲಾಡಳಿತದೊಂದಿಗೆ ಸಹಕರಿಸುವಂತೆ ಡಿಸಿ ವಿನಂತಿಸಿದ್ದಾರೆ.