ಶಿವಮೊಗ್ಗ: ರಾಜ್ಯದಲ್ಲೂ ಕೊರೊನಾ ವೈರಸ್ ಹರಡುತ್ತಿರುವ ಹಿನ್ನೆಲೆ ಕುವೆಂಪು ವಿಶ್ವವಿದ್ಯಾಲದಯದಲ್ಲಿ ಮಾರ್ಚ್ 28 ರಂದು ನಡೆಯಬೇಕಿದ್ದ ಘಟಿಕೋತ್ಸವ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ ಎಂದು ವಿಶ್ವವಿದ್ಯಾಲಯ ಪ್ರಕಟಣೆ ಮೂಲಕ ತಿಳಿಸಿದೆ.
ಮುಂಜಾಗ್ರತಾ ಕ್ರಮವಾಗಿ ನಡೆಯಬೇಕಿದ್ದ 30ನೇ ಘಟಿಕೋತ್ಸವವನ್ನು ಹಣಕಾಸು ಆಯೋಗ ಮತ್ತು ರಾಜ್ಯ ಸರ್ಕಾರದ ನಿರ್ದೇಶನದ ಮೇರೆಗೆ ಮುಂದೂಡಲಾಗಿದೆ.
ಕುವೆಂಪು ವಿವಿಯಲ್ಲಿ ನಡೆಯಬೇಕಿದ್ದ ವಿಚಾರ ಸಂಕಿರಣ, ಸಮಾವೇಶಗಳನ್ನು ಕೂಡ ಅನಿರ್ದಿಷ್ಠಾವಧಿಗೆ ಮುಂದೂಡಲಾಗಿದೆ ಎಂದು ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.