ಶಿವಮೊಗ್ಗ : ಲಂಡನ್ನಿಂದ ನಗರಕ್ಕೆ ಆಗಮಿಸಿದ್ದ ನಾಲ್ವರಲ್ಲಿ ರೂಪಾಂತರ ಕೊರೊನಾ ವೈರಸ್ ಪತ್ತೆಯಾಗಿದೆ. ಇವರ ನಿವಾಸವನ್ನು ಸಂಪೂರ್ಣ ಸೀಲ್ಡೌನ್ ಮಾಡಲಾಗಿದೆ.
ಡಿ.22ರಂದು ಶಿವಮೊಗ್ಗದ ಸಾವರ್ಕರ್ ನಗರಕ್ಕೆ ನಾಲ್ವರು ಬೆಂಗಳೂರಿನಿಂದ ಆಗಮಿಸಿದ್ದರು. ರೂಪಾಂತರ ವೈರಸ್ ಬಗ್ಗೆ ಅನುಮಾನದ ಹಿನ್ನೆಲೆ ನಾಲ್ವರ ಸ್ಯಾಂಪಲ್‌ನ ಬೆಂಗಳೂರಿಗೆ ಕಳುಹಿಸಲಾಗಿತ್ತು.
ಅಲ್ಲಿಂದ ಮತ್ತೆ ಹೆಚ್ಚಿನ ಪರೀಕ್ಷೆಗೆ ಪೂನಾಗೂ ಕಳುಹಿಸಲಾಗಿತ್ತು. ಇಂದು ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ವರದಿಯಲ್ಲಿ ಶಿವಮೊಗ್ಗದ ನಾಲ್ವರಲ್ಲಿ ಲಂಡನ್ ರೂಪಾಂತರ ಕೊರೊನಾ ವೈರಸ್ ಪತ್ತೆಯಾಗಿದೆ.
ಲಂಡನ್ನಿಂದ ಬಂದ 23 ಜನರನ್ನು ಡಿ.22ರಂದೇ ಮೆಗ್ಗಾನ್ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಸಾವರ್ಕರ್ ನಗರದಲ್ಲಿರೋ ಈ ನಾಲ್ವರೂ ಇರುವ ನಿವಾಸವನ್ನು ಸೀಲ್ಡೌನ್ ಮಾಡಲಾಗಿದೆ.
ಡಿ.22 ರಿಂದಲೇ ಸೀಲ್ ಮಾಡಿರುವ ಬಗ್ಗೆ ಸ್ಟಿಕ್ಕರ್ ಅಂಟಿಸಲಾಗಿದೆ. ಸದ್ಯ ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಆರೋಗ್ಯ ಇಲಾಖೆಯ ನೋಡಲ್ ಅಧಿಕಾರಿ ದಿನೇಶ್ ನೇತೃತ್ವದಲ್ಲಿ ಮನೆಯ ಸುತ್ತಮುತ್ತ ಸ್ಯಾನಿಟೈಸರ್ ಮಾಡಲಾಯಿತು.
ಓದಿ: ಮತಗಟ್ಟೆಯ ಮುಂಭಾಗ ವ್ಯಕ್ತಿಗೆ ಡಿವೈಎಸ್ಪಿ ಕಪಾಳಮೋಕ್ಷ : ಲಘು ಲಾಠಿ ಪ್ರಹಾರ
ಸೀಲ್ಡೌನ್ ಮಾಡಿರುವ ನಿವಾಸದ ಸುತ್ತಮುತ್ತಲಿನ ಮನೆಗಳನ್ನು ಆರೋಗ್ಯ ಇಲಾಖೆ ಹಾಗೂ ಅಂಗನವಾಡಿ ಕಾರ್ಯಕರ್ತರು ಜಂಟಿಯಾಗಿ ಸರ್ವೇ ನಡೆಸುತ್ತಿದ್ದಾರೆ. ಯಾರಾಗಿದ್ರೂ ಕೆಮ್ಮು, ಶೀತ, ಜ್ವರ ಕಂಡು ಬಂದ್ರೆ ಅವರ ಸ್ಯಾಂಪಲ್ ಪಡೆಯಲಾಗುತ್ತದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಲಂಡನ್ನಿಂದ ನಾಲ್ವರು ಡಿ.22ರಂದು ರಾತ್ರಿ ಬಂದು ಮನೆಯಲ್ಲಿದ್ದರು. ನಂತರ ಆರೋಗ್ಯ ಇಲಾಖೆಯವರು ಬಂದು ಅವರನ್ನು ಅಂದೇ ಮೆಗ್ಗಾನ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.