ETV Bharat / state

ಬಿಜೆಪಿಗರಿಗೆ ಭಾವುಕತೆ ಅನ್ನೋದು ಗೊತ್ತಿದ್ದಿದ್ದರೆ ನನ್ನ ಕಣ್ಣೀರು ಅರ್ಥ ಆಗುತ್ತಿತ್ತು: ಹೆಚ್​ಡಿಕೆ - news kannada

ಶಿವಮೊಗ್ಗದಲ್ಲಿ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿರುವ ಸಿಎಂ ಕುಮಾರಸ್ವಾಮಿ, ಅವರಿಗೆ ಭಾವುಕತೆ ಅನ್ನೋದೇ ಗೊತ್ತಿಲ್ಲ ಎಂದಿದ್ದಾರೆ. ಭಾವುಕತೆ ಬಗ್ಗೆ ಗೊತ್ತಿದ್ದಿದ್ದರೆ ನನ್ನ ಕಣ್ಣೀರಿನ ಅರ್ಥ ತಿಳಿತಿತ್ತು ಎಂದು ಹೆಚ್​ಡಿಕೆ ತಿವಿದಿದ್ದಾರೆ.

ಬಿಜೆಪಿ ನಾಯಕರಿಗೆ ತೀರುಗೇಟು ನೀಡಿದ ಮುಖ್ಯಮಂತ್ರಿ ಕುಮಾರಸ್ವಾಮಿ
author img

By

Published : Apr 17, 2019, 6:04 PM IST

ಶಿವಮೊಗ್ಗ: ನಾನೋರ್ವ ಭಾವುಕ ಜೀವಿ, ಹಾಗಾಗಿ ಪ್ರತಿದಿನ ಕಣ್ಣೀರು ಹಾಕುತ್ತೇನೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.

ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಪರ ಸೊರಬದ ಆನವಟ್ಟಿಯಲ್ಲಿ ಪ್ರಚಾರಕ್ಕೆ ಆಗಮಿಸಿದ್ದ ವೇಳೆ ಹೆಲಿಪ್ಯಾಡ್​​ನಲ್ಲಿ ಮಾತನಾಡಿದ ಅವರು, ನನ್ನ ಕಣ್ಣಲ್ಲಿ ವಿನಾಕಾರಣ ನೀರು ಬರುವುದಿಲ್ಲ. ಜನರ ಕಷ್ಟ ನೋಡಿದಾಗ ಕಣ್ಣಲ್ಲಿ ನೀರು ಬರುತ್ತದೆ ಎಂದರು.

ಬಿಜೆಪಿ ನಾಯಕರಿಗೆ ತೀರುಗೇಟು ನೀಡಿದ ಮುಖ್ಯಮಂತ್ರಿ ಕುಮಾರಸ್ವಾಮಿ

ಮಾಜಿ ಮುಖ್ಯಮಂತ್ರಿಗೆ ಹೃದಯದಲ್ಲಿ ಭಾವುಕತೆ ಇದ್ದಿದ್ದರೆ ಕಣ್ಣೀರಿನ ಅರ್ಥ ಗೊತ್ತಾಗುತ್ತಿತ್ತು ಎಂದು ಯಡಿಯೂರಪ್ಪ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ಇನ್ನು ಸಚಿವ ಡಿ.ಕೆ. ಶಿವಕುಮಾರ್ ಅವರು ಕನಕಪುರ ಕ್ಷೇತ್ರದಲ್ಲಿ ಪ್ರಚಾರ ನಡೆಸಲಿದ್ದಾರೆ. ಅವರು ಬರುತ್ತೇನೆ ಅಂದ್ರು, ಆದ್ರೆ ನಾನೇ ಬೇಡ ನಿಮ್ಮ ಕಡೆ ಪ್ರಚಾರ ಮಾಡಿ ಎಂದು ಹೇಳಿದೆ. ಮುಂದಿನ ದಿನಗಳಲ್ಲಿ ಡಿ.ಕೆ.ಶಿ ಶಿವಮೊಗ್ಗ ಪ್ರಚಾರಕ್ಕೆ ಬರಲಿದ್ದಾರೆ ಎಂದು ಸಿಎಂ ತಿಳಿಸಿದರು.

Intro:ನಾನು ಭಾವುಕ ಜೀವಿ, ನಾನು ಪ್ರತಿದಿನ ಕಣ್ಣಿರು ಹಾಕುತ್ತೆನೆ ಎಂದು ಎಂದು ಸಿಎಂ ಕುಮಾರಸ್ವಾಮಿ ಬಿಜೆಪಿ ನಾಯಕರಿಗೆ ತೀರುಗೇಟು ನೀಡಿದ್ದಾರೆ.ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ನವರ ಪರವಾಗಿ ಸೊರಬದ ಆನವಟ್ಟಿಯಲ್ಲಿ ಪ್ರಚಾರಕ್ಕೆ ಆಗಮಿಸಿದ ವೇಳೆ ಹೆಲಿಪ್ಯಾಡ್ ನಲ್ಲಿ ಮಾತನಾಡಿದ ಅವರು, ನನಗೆ ಕಣ್ಣಲ್ಲಿ ನೀರು ಸುಮ್ ಸುಮ್ಮನೆ ಬರುವುದಿಲ್ಲ. ಜನರ ಕಷ್ಟ ನೋಡಿದಾಗ ಕಣ್ಣಲ್ಲಿ ನೀರು ಬರುತ್ತದೆ ಎಂದರು.

Body:ಮಾಜಿ ಸಿಎಂಗೆ ಹೃದಯದಲ್ಲಿ ಭಾವುಕತೆ ಇದ್ದಿದ್ದರೆ ಕಣ್ಣಿರಿನ ಅರ್ಥ ಗೂತ್ತಾಗುತ್ತಿತ್ತು ಎಂದು ಯಡಿಯೂರಪ್ಪನವರ ವಿರುದ್ದ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು. ಮಂಡ್ಯ ಸೇರಿದಂತೆ ಹಾಸನ ಹಾಗೂ ಇತರೆ ಕಡೆ ಜೆಡಿಎಸ್ ಸ್ಪರ್ಧೆ ಮಾಡಿರುವ ಕಡೆ ನಮ್ಮ ಪಕ್ಷ ಗೆದ್ದೆ ಗೆಲ್ಲುತ್ತದೆ ಎಂದರು.ಸಚಿವ ಡಿ.ಕೆ.ಶಿವಕುಮಾರ್ ರವರು ಕನಕಪುರ ಕ್ಷೇತ್ರದ ಪ್ರಚಾರ ನಡೆಸಲಿದ್ದಾರೆ. ಅವರು ಬರುತ್ತೆನೆ ಎಂದರು ನಾನೇ ನಿಮ್ಮ ಕಡೆ ಪ್ರಚಾರ ಮಾಡಿ ಎಂದು ಹೇಳಿದ್ದೆನೆ. ಮುಂದಿನ ದಿನಗಳಲ್ಲಿ ಡಿ.ಕೆ.ಶಿವಕುಮಾರ್ ಶಿವಮೊಗ್ಗ ಪ್ರಚಾರಕ್ಕೆ ಬರಲಿದ್ದಾರೆ ಎಂದರು.

Conclusion:ಬಿಜೆಪಿಯ ಯಾವುದೇ ಆಟ ಶಿವಮೊಗ್ಗದಲ್ಲಿ ನಡೆಯೂದಿಲ್ಲ ಎಂದರು. ಮೋದಿ ಹಾಗೂ ಅಮಿತ್ ಷಾ ರವರ ಪೊಳ್ಳು ಭಾಷಣ ಮಾಡುತ್ತಿದ್ದಾರೆ. ಅವರ ಭಾಷಣಕ್ಕೆ ಜನ ಮರುಳಾಗುವುದಿಲ್ಲ. ಮಂಡ್ಯದ ಸ್ವಾಭಿಮಾನ ಏನೂ ಅಂತ ಸುಮಲತರವರ ನಿನ್ನೆಯ ಹೇಳಿಕೆಗೆ ಪ್ರಶ್ನೆ ಮಾಡಿದ್ರು. ಮಂಡ್ಯ ಜಿಲ್ಲೆಯ ಜನ ನಮ್ಮ ಕೈ ಬಿಡಲ್ಲ ಎಂದರು.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.