ಶಿವಮೊಗ್ಗ: ಸಾಗರ ನಗರಸಭೆ ಪ್ರಭಾರ ಆಯುಕ್ತರಾದ ನಾಗಪ್ಪನವರ ಮೇಲೆ ಹಲ್ಲೆಗೆ ಯತ್ನಿಸಿದವರನ್ನು ತಕ್ಷಣ ಬಂಧಿಸಬೇಕೆಂದು ಆಗ್ರಹಿಸಿ ಸಾಗರದ ಪೌರ ಕಾರ್ಮಿಕರು ತಮ್ಮ ಸೇವೆ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದ್ದಾರೆ. ಬುಧವಾರ ಸಾಗರದಲ್ಲಿ ಫುಟ್ಬಾತ್ನಲ್ಲಿ ವ್ಯಾಪಾರ ನಡೆಸುತ್ತಿದ್ದ ಅಂಗಡಿಗಳನ್ನು ತೆರವುಗೊಳಿಸಿದ್ದನ್ನು ವಿರೋಧಿಸಿ ನಗರಸಭೆ ಮುಂದೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುವಾಗ ಪೌರಾಯುಕ್ತರ ಮೇಲೆ ಹಲ್ಲೆಗೆ ಯತ್ನಿಸಿದ್ದರು ಎಂಬ ಆರೋಪ ಕೇಳಿಬಂದಿದೆ.
ಹಲ್ಲೆ ನಡೆಸಲು ಹೋದವರ ವಿರುದ್ಧ ದೂರು ದಾಖಲಾಗಿದೆ. ಹಾಗಾಗಿ ತಕ್ಷಣ ಹಲ್ಲೆಗೆ ಯತ್ನಿಸಿದವರನ್ನು ಬಂಧಿಸಬೇಕು, ಪೊಲೀಸರು ಅವರನ್ನು ಬಂಧಿಸುವ ತನಕ ನಾವು ನೀರು ಸೇರಿದಂತೆ ನಗರದ ಸ್ವಚ್ಛತೆ ನಡೆಸುವುದಿಲ್ಲ ಎಂದು ಬೆಳಗ್ಗೆಯಿಂದ ಸೇವೆ ನಡೆಸದೆ ನಗರಸಭಾ ಆವರಣದಲ್ಲಿಯೇ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಆಟವಾಡಲು ಹೊರ ಬಂದ ಬಾಲಕನ ತಲೆ ಸೀಳಿ ಮೆದುಳು ತಿಂದು ಹಾಕಿದ ಬೀದಿ ನಾಯಿಗಳು!
ಪೌರ ಕಾರ್ಮಿಕರ ಜೊತೆ ಕಚೇರಿ ಸಿಬ್ಬಂದಿ ಸಹ ತಮ್ಮ ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆಗೆ ಸಾಥ್ ಕೊಟ್ಟಿದ್ದಾರೆ. ಪೊಲೀಸರು ಹಲ್ಲೆಗೆ ಯತ್ನಿಸಿದವರನ್ನು ಬಂಧಿಸದಿದ್ದರೆ, ಪ್ರತಿಭಟನೆ ಮುಂದುವರಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.