ETV Bharat / state

ಲಂಚ ಪಡೆಯುತ್ತಿದ್ದ ವೇಳೆ ರೆಡ್ ಹ್ಯಾಂಡ್ ಎಸಿಬಿ ಬಲೆಗೆ ಬಿದ್ದ ಶಿವಮೊಗ್ಗ ಪಾಲಿಕೆ ಇಂಜಿನಿಯರ್ - ಮಹಾನಗರ ಪಾಲಿಕೆ ಯೋಜನಾ ವಿಭಾಗದ ಸಹಾಯಕ ಇಂಜಿನಿಯರ್ ಹಾಲೇಶಪ್ಪ

ಮಹಾನಗರ ಪಾಲಿಕೆ ಯೋಜನಾ ವಿಭಾಗದ ಸಹಾಯಕ ಇಂಜಿನಿಯರ್ ಹಾಲೇಶಪ್ಪ, ವೆಂಕಟೇಶ್ ಶೆಟ್ಟಿ ಎಂಬುವರಿಂದ 7 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

CB traped the policy engineer
ಲಂಚ ಪಡೆಯುತ್ತಿದ್ದ ವೇಳೆ ರೆಡ್ ಹ್ಯಾಂಡ್ ಎಸಿಬಿ ಬಲೆಗೆ ಬಿದ್ದ ಪಾಲಿಕೆ ಇಂಜಿನಿಯರ್
author img

By

Published : Mar 2, 2020, 5:37 PM IST

ಶಿವಮೊಗ್ಗ: ಮಹಾನಗರ ಪಾಲಿಕೆ ಯೋಜನಾ ವಿಭಾಗದ ಸಹಾಯಕ ಇಂಜಿನಿಯರ್ ಹಾಲೇಶಪ್ಪ ಎಂಬುವರು ಪಾಲಿಕೆಯ ತಮ್ಮ ಕಚೇರಿಯಲ್ಲಿ ಲಂಚ ಪಡೆಯುತ್ತಿದ್ದ ವೇಳೆ ಭ್ರಷ್ಟಾಚಾರ ನಿಗ್ರಹ ದಳದ ಬಲೆಗೆ ಬಿದ್ದಿದ್ದಾರೆ.

ಲಂಚ ಪಡೆಯುತ್ತಿದ್ದ ವೇಳೆ ರೆಡ್ ಹ್ಯಾಂಡ್ ಎಸಿಬಿ ಬಲೆಗೆ ಬಿದ್ದ ಪಾಲಿಕೆ ಇಂಜಿನಿಯರ್

ಹಾಲೇಶಪ್ಪ ವೆಂಕಟೇಶ್ ಶೆಟ್ಟಿ ಎಂಬುವರಿಂದ 7 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ವೆಂಕಟೇಶ್ ಶೆಟ್ಟಿ ಎಂಬುವರು ತಮ್ಮ ಬಾರ್​ ಅನ್ನು ಒಂದು ಕಡೆಯಿಂದ ಮತ್ತೊಂದು ಕಡೆ ಸ್ಥಳಾಂತರಿಸಿ ಖಾಸಗಿ ಜಾಗದಲ್ಲಿ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ವೆಂಕಟೇಶ್ ಶೆಟ್ಟಿ ಅವರಿಗೆ ಬಾರ್ ನಿರ್ಮಾಣಕ್ಕೆ ಪಾಲಿಕೆಯ ಅಧಿಕಾರಿಗಳು ಪದೆ ಪದೇ ತೊಂದ್ರೆ ನೀಡುತ್ತಿದ್ದರು ಎನ್ನಲಾಗ್ತಿದೆ. ಈ ಕುರಿತು ವೆಂಕಟೇಶ್ ಶೆಟ್ಟಿ ಉಪ ಮೇಯರ್ ಬಳಿ ವಿನಂತಿಸಿಕೊಂಡಿದ್ದರು. ಉಪ ಮೇಯರ್ ಪಾಲಿಕೆಯ ಅಧಿಕಾರಿಗಳಿಗೆ ಕೇಳಿದ್ರೆ ದಾಖಲಾತಿ ಸರಿ‌ ಇದೆ ಅನುಮತಿ ನೀಡಬಹುದು ಎಂದು ತಿಳಿಸಿದ್ದರಂತೆ. ಆದರೆ ಪ್ರತಿ ಸಲ ಒಂದೊಂದು ಇಂಜಿನಿಯರಿಂಗ್ ವಿಭಾಗದವರು ಬಂದು ಕಾಮಗಾರಿ ಸ್ಥಗಿತಗೊಳಿಸುತ್ತಿದ್ದರಂತೆ.

ಈ ಕುರಿತು ಪಾಲಿಕೆ ಯೋಜನಾ ವಿಭಾಗದವರು ನಿಮಗೆ ಜನವಸತಿ ಪ್ರದೇಶದಿಂದ ವಾಣಿಜ್ಯ ಉದ್ದೇಶಕ್ಕೆ ಅನುಮತಿ ನೀಡುವುದಕ್ಕೆ ವೆಂಕಟೇಶ್ ಶೆಟ್ಟಿ ಬಳಿ 7 ಸಾವಿರ ರೂ. ಲಂಚ ಪಡೆಯುವಾಗ ಇಂದು ಪ್ರಭಾರ ಎಸಿಬಿ ಡಿವೈಎಸ್​ಪಿ ತಿಪ್ಪೇಸ್ವಾಮಿ ನೇತೃತ್ಚದಲ್ಲಿ ದಾಳಿ ನಡೆಸಲಾಗಿದೆ. ಇನ್ಸ್​​ಪೆಕ್ಟರ್ ವಿರೇಂದ್ರ ಸಿಬ್ಬಂದಿ ಯೋಗೀಶ್, ವಸಂತ್, ನಾಗರಾಜ್, ಸುರೇಂದ್ರ, ರಘು ಹಾಗೂ ಹರೀಶ್ ದಾಳಿಯಲ್ಲಿ ಭಾಗಿಯಾಗಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.