ETV Bharat / state

ಶಿವಮೊಗ್ಗದ H R ಕೃಷ್ಣಪ್ಪನವರ ಮನೆ ಮೇಲೆ ಎಸಿಬಿ ದಾಳಿ! - ಹೆಚ್ ಆರ್ ಕೃಷ್ಣಪ್ಪ ಲೇಟೆಸ್ಟ್ ನ್ಯೂಸ್

ಕೃಷ್ಣಪ್ಪನವರು ಶಿವಮೊಗ್ಗದ ಮನೆಯನ್ನು ಬಾಡಿಗೆಗೆ ನೀಡಿದ್ದು, ಮನೆಯ ಮೇಲ್ಭಾಗದ ಒಂದು ಕೋಣೆಗೆ ಆಗಾಗ್ಗೆ ಬಂದು ಹೋಗುತ್ತಿದ್ದರು. ಹಾಗಾಗಿ ಕೋಣೆಯನ್ನು ತಪಾಸಣೆ ನಡೆಸಿದ್ದು, ಮಹತ್ವದ ದಾಖಲೆಗಳು ಲಭ್ಯವಾಗಿವೆ ಎಂದು ಎಸಿಬಿ ಮೂಲಗಳು ತಿಳಿಸಿವೆ.

acb raid on h r krishnappas house in shivamogga
ಶಿವಮೊಗ್ಗದ ಹೆಚ್.ಆರ್. ಕೃಷ್ಣಪ್ಪನವರ ಮನೆ ಮೇಲೆ ಎಸಿಬಿ ದಾಳಿ
author img

By

Published : Jul 15, 2021, 11:21 AM IST

Updated : Jul 15, 2021, 11:48 AM IST

ಶಿವಮೊಗ್ಗ: ಕೋಲಾರ ಜಿಲ್ಲೆಯ ಮಾಲೂರು ನಗರದ ಯೋಜನಾ ಪ್ರಾಧಿಕಾರದ ಸಹಾಯಕ ನಿರ್ದೇಶಕ ಹೆಚ್.ಆರ್. ಕೃಷ್ಣಪ್ಪ ಅವರ ಮನೆ ಮೇಲೆ ಭ್ರಷ್ಟಾಚಾರ ನಿಗ್ರಹ ದಳದವರು ದಾಳಿ ನಡೆಸಿದ್ದಾರೆ.

ಹೆಚ್.ಆರ್. ಕೃಷ್ಣಪ್ಪನವರು ಶಿವಮೊಗ್ಗ ನಗರಾಭಿವೃದ್ದಿ ಪ್ರಾಧಿಕಾರದಲ್ಲೂ ಹಿಂದೆ ಕಾರ್ಯ ನಿರ್ವಹಿಸಿದ್ದರು. ಇವರ ಶಿವಮೊಗ್ಗದ ಶಿವಪ್ಪ ನಾಯಕ ಬಡಾವಣೆಯ ಮನೆಯ ಮೇಲೆ ದಾಳಿ ನಡೆಸಲಾಗಿದೆ. ದಾವಣಗೆರೆ ವಿಭಾಗದ ಎಸಿಬಿ ಎಸ್ಪಿ ಜಯಪ್ರಕಾಶ್ ಅವರ ನೇತೃತ್ವದಲ್ಲಿ ಶಿವಮೊಗ್ಗ ಡಿವೈಎಸ್ಪಿ ಲೋಕೇಶ್ ಅವರು ಹಾಗೂ ಇನ್ಸ್​​ಪೆಕ್ಟರ್ ವಸಂತ ಹಾಗೂ ಸಿಬ್ಬಂದಿ ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದಾರೆ.

ಶಿವಮೊಗ್ಗದ ಹೆಚ್.ಆರ್. ಕೃಷ್ಣಪ್ಪನವರ ಮನೆ ಮೇಲೆ ಎಸಿಬಿ ದಾಳಿ

ಇದನ್ನೂ ಓದಿ: ACB Raid: ಮಾಲೂರು ‌ನಗರ ಸಭೆಯ ಯೋಜನಾ ನಿರ್ದೇಶಕ‌ ಮನೆ, ಕಚೇರಿ ಮೇಲೆ ದಾಳಿ

ಕೃಷ್ಣಪ್ಪನವರು ಶಿವಮೊಗ್ಗದ ಮನೆಯನ್ನು ಬಾಡಿಗೆಗೆ ನೀಡಿದ್ದಾರೆ. ಇವರು ಇದೇ ಮನೆಯ ಮೇಲ್ಭಾಗದ ಒಂದು ಕೋಣೆಗೆ ಆಗಾಗ್ಗೆ ಬಂದು ಹೋಗುತ್ತಿದ್ದರು ಎನ್ನಲಾಗುತ್ತಿದ್ದು, ಇದರಿಂದ ಕೋಣೆಯನ್ನು ತಪಾಸಣೆ ನಡೆಸಿದ್ದಾರೆ. ಈ ವೇಳೆ, ಹಲವು ಮಹತ್ವದ ದಾಖಲೆಗಳು ಲಭ್ಯವಾಗಿವೆ ಎಂದು ಎಸಿಬಿ ಮೂಲಗಳು ತಿಳಿಸಿವೆ. ಕೃಷ್ಣಪ್ಪನವರ ಸ್ವಂತ ಗ್ರಾಮ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ದೇವರಹಳ್ಳಿ ಮನೆ ಮೇಲೂ ಸಹ ದಾಳಿ ನಡೆಸಲಾಗಿದೆ.

Last Updated : Jul 15, 2021, 11:48 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.