ಶಿವಮೊಗ್ಗ: ಶಿಕಾರಿಪುರ ಗ್ರಾಮಾಂತರ ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿ ಪ್ರತ್ಯೇಕ ಪ್ರಕರಣಗಳಲ್ಲಿ 85 ಗಾಂಜಾ ಗಿಡಗಳನ್ನು ವಶಕ್ಕೆ ಪಡೆದು, ಮೂವರನ್ನು ಬಂಧಿಸಿದ್ದಾರೆ.
ಮಾಸ್ತಿಬೈಲು ಗ್ರಾಮದ ಶಿವು (31) ಹಾಗೂ ಮಂಜಪ್ಪ(40) ಬಂಧಿತರು. ಇವರು ತಮ್ಮ ಜಮೀನಿನಲ್ಲಿ 35 ಹಸಿ ಗಾಂಜಾ ಬೆಳೆದಿದ್ದರು. ಇನ್ನು ದೇವರಹಳ್ಳಿ ಗ್ರಾಮದ ಬಾಬು (55) ಎಂಬಾತ ತನ್ನ ಜಮೀನಿನಲ್ಲಿ ಬೆಳೆದಿದ್ದ 50 ಗಾಂಜಾ ಗಿಡವನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತ ಮೂವರ ವಿರುದ್ದ ಎನ್ಡಿಪಿಎಸ್ ಕಾನೂನಿನಡಿ ಪ್ರಕರಣ ದಾಖಲಿಸಲಾಗಿದೆ.