ಶಿವಮೊಗ್ಗ: ಜಿಲ್ಲೆಯಲ್ಲಿ ಇಂದು 175 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.
ಇಂದು ಶಿವಮೊಗ್ಗ-55, ಭದ್ರಾವತಿ-57, ಶಿಕಾರಿಪುರ-57, ತೀರ್ಥಹಳ್ಳಿ-01, ಸೊರಬ-04 ,ಬೇರೆ ಜಿಲ್ಲೆಯಿಂದ 1 ಸೋಂಕಿತರಿಗೆ ಕೊರೊನಾ ತಗುಲಿದ್ದು, ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 5828 ಕ್ಕೆ ಏರಿಕೆಯಾಗಿದೆ.
ಮೃತಪಟ್ಟವರ ವಿವರ:
ಇಂದು ಸೋಂಕಿಗೆ ನಾಲ್ಕು ಜನರಿಗೆ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದು, ಈ ಮೂಲಕ 97 ಮಂದಿ ಸಾವನ್ನಪ್ಪಿದ್ದಾರೆ.
ಗುಣಮುಖರಾದವರ ವಿವರ:
ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ 352 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಒಟ್ಟು ಜಿಲ್ಲೆಯಲ್ಲಿ ಇದುವರೆಗೂ 3626 ಜನರು ಕೊರೊನಾದಿಂದ ಗುಣಮುಖರಾಗಿದ್ದಾರೆ. ಇನ್ನು ಜಿಲ್ಲೆಯಲ್ಲಿ 2105 ಸಕ್ರಿಯ ಪ್ರಕರಣಗಳಿವೆ.
ಮೆಗ್ಗಾನ್ ಕೋವಿಡ್ ಆಸ್ಪತ್ರೆಯಲ್ಲಿ 222 ಜನ ಸೋಂಕಿತರಿದ್ದು, ಕೋವಿಡ್ ಕೇರ್ ಸೆಂಟರ್ ನಲ್ಲಿ 786 ಜನಸೊಂಕಿತರು, ಖಾಸಗಿ ಆಸ್ಪತ್ರೆಯಲ್ಲಿ 267 ಜನ ಸೋಂಕಿತರಿದ್ದಾರೆ. ಮನೆಯಲ್ಲಿ 765 ಐಸೋಲೇಷನ್ ಆಗಿದ್ದಾರೆ. ಆರ್ಯವೇದಿಕ್ ಕಾಲೇಜಿನಲ್ಲಿ 65 ಜನ ಇದ್ದಾರೆ. ಜಿಲ್ಲೆಯಲ್ಲಿ 2317 ಕಂಟೈನ್ಮೆಂಟ್ ಜೊನ್ ರಚನೆ ಮಾಡಲಾಗಿದೆ.
ಕೋವಿಡ್ ಪರೀಕ್ಷೆಯ ವಿವರ:
ಇಂದು 424 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಇದರಲ್ಲಿ 294 ಜನರ ವರದಿ ಬಂದಿದೆ. ಜಿಲ್ಲೆಯಲ್ಲಿ ಇದುವರೆಗೂ 49,754 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಇದರಲ್ಲಿ 38,465 ರ ವರದಿ ಬಂದಿದೆ.