ಶಿವಮೊಗ್ಗ: ಸುವರ್ಣಗೆಡ್ಡೆ ಹೊಲದಲ್ಲಿ ಅಕ್ರಮವಾಗಿ ಬೆಳೆದಿದ್ದ ಗಾಂಜಾ ಗಿಡಗಳನ್ನು ಸಾಗರ ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಆನಂದಪುರಂ ಬಳಿಯ ಮುಂಬಾಳು ಗ್ರಾಮದ ನಾಗರಾಜ್ ಅವರ ಜಮೀನು ಸರ್ವೆ ನಂ.29 ರಲ್ಲಿ ಸುವರ್ಣ ಗೆಡ್ಡೆ ಬೆಳೆಯಲಾಗಿದೆ. ಇದರ ನಡುವೆ ಬೆಳೆದಿದ್ದ 16 ಗಾಂಜಾ ಗಿಡಗಳನ್ನು ಪೊಲೀಸರು ದಾಳಿ ಮಾಡಿ ವಶಕ್ಕೆ ಪಡೆದುಕೊಂಡಿದ್ದಾರೆ.
ದಾಳಿಯಲ್ಲಿ ಪಿಎಸ್ಐ ಭರತ್ ಹಾಗೂ ಸಿಬ್ಬಂದಿ ಭಾಗಿಯಾಗಿದ್ದರು.