ರಾಮನಗರ: ಜಿಲ್ಲಾ ಉಸ್ತುವಾರಿ ಸಚಿವರ ನಡೆ ಹಾಗೂ ಸರ್ಕಾರದ ಬೇಜವಬ್ದಾರಿತನದ ಫಲವಾಗಿ ಗ್ರೀನ್ ಝೋನ್ನಲ್ಲಿದ್ದ ರಾಮನಗರ ಜಿಲ್ಲೆ ರೆಡ್ ಝೋನ್ಗೆ ಸ್ಥಿತಿಗೆ ಮರಳಿದೆ ಎಂದು ಮಾಜಿ ಶಾಸಕ ಹೆಚ್.ಸಿ.ಬಾಲಕೃಷ್ಣ ಕಿಡಿಕಾರಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಸರ್ಕಾರ ಮಾಡಿದ ತಪ್ಪು ನಿರ್ಧಾರದಿಂದಾಗಿ ಇಂದು ನಮ್ಮ ಜಿಲ್ಲೆಗೆ ಅನ್ಯಾಯವಾಗಿದೆ. ಇದರಿಂದ ವ್ಯಾಪರ ವಹಿವಾಟು ನಿಂತು, ಜಿಲ್ಲೆಗೆ ಸಾಕಷ್ಟು ನಷ್ಟವಾಗಿದೆ. ಈ ನಷ್ಟವನ್ನ ಸರ್ಕಾರ ಇಲ್ಲವೇ ಉಸ್ತುವಾರಿ ಸಚಿವರೇ ಭರಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಕಾರಾಗೃಹದಲ್ಲಿದ್ದ 177 ವಿಚಾರಣಾದೀನ ಕೈದಿಗಳ ಪೈಕಿ 17 ಮಂದಿಯನ್ನ ಮಾತ್ರ ಏಕೆ ಕಾರಾಗೃಹದಲ್ಲೇ ಇರಿಸಿಕೊಂಡಿದ್ದರು ಎಂದು ಪ್ರಶ್ನಿಸಿದ ಅವರು, 17 ಮಂದಿ ವಿಚಾರಣಾದೀನ ಕೈದಿಗಳಿಂದ ಪಾದರಾಯನಪುರ ಆರೋಪಿಗಳಿಗೆ ಅಗತ್ಯ ಕೆಲಸಗಳನ್ನು ಅಧಿಕಾರಿಗಳು ಮಾಡಿಸಿದ್ದಾರೆ ಎಂದು ಆರೋಪಿಸಿದರು.
ಆ ಆರೋಪಿಗಳನ್ನು ಇಲ್ಲಿ ಇರಿಸಿಕೊಳ್ಳಲು ಆದೇಶ ಬಂದಿತ್ತಾ? ಹಾಗೇನಾದರೂ ಆದೇಶ ಪತ್ರ ಬಂದಿದ್ದರೆ ಅದನ್ನು ಬಹಿರಂಗ ಪಡಿಸಲಿ ಎಂದು ಸರ್ಕಾರವನ್ನು ಆಗ್ರಹಿಸಿದರು.