ರಾಮನಗರ: ನಗರ ಹೊರವಲಯದ ಕುಂಬಾಪುರ ಗೇಟ್ ಬಳಿ ಬೃಹತ್ ಲಾರಿಯೊಂದು ವಿದ್ಯುತ್ ಕಂಬಕ್ಕೆ ಗುದ್ದಿದ ಪರಿಣಾಮ ಸ್ಥಳದಲ್ಲಿದ್ದ ನಾಲ್ಕಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗೆ ಉರುಳಿವೆ.
ಬೃಹತ್ ಸರಕು ತುಂಬಿದ ಲಾರಿಯೊಂದು ಮೈಸೂರಿನಿಂದ ಬೆಂಗಳೂರಿಗೆ ಹೋಗುವಾಗ ಸರಕಿನ ಮೂಟೆ ವಿದ್ಯುತ್ ಕಂಬದ ತಂತಿಗೆ ಸಿಲುಕಿ ವಿದ್ಯುತ್ ಕಂಬಗಳು ಉರುಳಿವೆ. ಘಟನೆಯಲ್ಲಿ ಅದೃಷ್ಟವಶಾತ್ ಯಾರಿಗೂ ಯಾವುದೇ ಪ್ರಾಣಾಪಾಯವಾಗಿಲ್ಲ.
ಸ್ಥಳೀಯರು ಸವಾರರಿಗೆ ಮಾರ್ಗದರ್ಶನ ನೀಡಿ ಅಹಿತಕರ ಘಟನೆ ನಡೆಯದಂತೆ ನೋಡಿಕೊಂಡಿದ್ದಾರೆ. ಘಟನೆ ಜರುಗಿದ ತಕ್ಷಣವೇ ಬೆಸ್ಕಾಂ ಸಿಬ್ಬಂದಿಗೆ ಕರೆ ಮಾಡಿ ಮಾಹಿತಿ ನೀಡಲಾಗಿದೆ.